ನದಿಯಲ್ಲಿ ಸ್ನಾನ ಮಾಡಲು ಹೋಗಿ ಯುವಕ ಸಾವು

ಸಿರವಾರ.ಫೆ೨೩- ಜಾತ್ರೆಗೆ ಹೋಗಿ ನದಿಯಲ್ಲಿ ಸ್ನಾನ ಮಾಡುವಾಗ ಕಾಲು ಜಾರಿ ಬಿದ್ದು ಯುವಕ ಸವಾನ್ನಪಿದ ಘಟನೆ ಸುರಪುರ ತಾಲೂಕಿನ ತಿಂತಿಣಿಯಲ್ಲಿ ಜರುಗಿದೆ.
ಸಿರವಾರ ಪಟ್ಟಣದ ನಿವಾಸಿಯಾದ ನಾಗರಾಜ್ ತಂದೆ ಕಾಳಪ್ಪ ಕರ್ಪೆಂಟರ್ (೨೫) ಇವರು ಸುರಪುರ ತಾಲೂಕಿನ ತಿಂತಿಣಿಯಲ್ಲಿ ಮೌನೇಶ್ವರ ಜಾತ್ರೆಗೆ ಹೋಗಿದ್ದರು.
ದೇವಸ್ಥಾನದ ಪಕ್ಕದಲ್ಲಿರುವ ಕೃಷ್ಣ ನದಿಯಲ್ಲಿ ಸ್ನಾನ ಮಾಡುವಾಗ ಕಾಲು ಜಾರಿ ಬಿದ್ದ, ಇವರಿಗೆ ಈಜು ಬಾರದ ಕಾರಣ ಸಾವನ್ನಪ್ಪಿರುವ ಘಟನೆ ನಡೆದಿದೆ.