ನದಿಯಲ್ಲಿ ಮೃತ ದೇಹಗಳು ಪತ್ತೆ

ನ್ಯೂಯಾರ್ಕ್, ಎ.೪- ಇತ್ತೀಚಿಗಷ್ಟೇ ಅಮೆರಿಕಾ-ಕೆನಡಾ ನಡುವಿನ ಗಡಿ ಪ್ರದೇಶ ಸೈಂಟ್ ಲಾರೆನ್ಸ್ ನದಿಯಲ್ಲಿ ಪತ್ತೆಯಾದ ಭಾರತೀಯ ಮೂಲದ ಸೇರಿದಂತೆ ಎರಡು ಕುಟುಂಬದ ೮ ಮಂದಿಯ ಮೃತದೇಹಗಳ ಗುರುತನ್ನು ಇದೀಗ ಪತ್ತೆ ಹಚ್ಚಲಾಗಿದೆ. ಗುಜರಾತ್ ಮೂಲದ ನಾಲ್ವರು ಮೃತರ ಗುರುತನ್ನು ಇದೀಗ ಬಹಿರಂಗಪಡಿಸಲಾಗಿದೆ.
ಭಾರತದ ಗುಜರಾತ್ ಮೂಲದ ಕುಟುಂಬವನ್ನು ಪ್ರವೀಣಿ ಚೌಧರಿ (೫೦), ಅವರ ಪತ್ನಿ ದೀಕ್ಷಾ (೪೫), ಅವರ ಮಗ ಮೀತ್ (೨೦) ಮತ್ತು ಅವರ ಪುತ್ರಿ ವಿಧಿ (೨೪) ಎಂದು ಗುರುತಿಸಲಾಗಿದೆ. ಅತ್ತ ರೊಮೇನಿಯಾ ಮೂಲದ ದಂಪತಿ ಹಾಗೂ ಇಬ್ಬರು ಮಕ್ಕಳ ಗುರುತು ಕೂಡ ಪತ್ತೆಹಚ್ಚಲಾಗಿದೆ. ಫ್ಲೋರಿನ್ ಐರ್ಡಾಚೆ ಹಾಗೂ ಸ್ಟಿನಾ (ಮೊನಾಲಿಸಾ) ಜೆನೈಡಾ ಐರ್ಡಾಚೆ ಎಂದು ಗುರುತಿಸಲಾಗಿದೆ. ಇವರ ಒಂದು ವರ್ಷದ ಹಾಗೂ ಎರಡು ವರ್ಷದ ಮಕ್ಕಳನ್ನು ಕೂಡ ಪತ್ತೆಹಚ್ಚಲಾಗಿದೆ. ಐರ್ಡಾಚೆ ಅವರ ಜೇಬಿನಲ್ಲಿ ಎರಡು ಕೆನಡಾದ ಪಾಸ್‌ಪೋರ್ಟ್‌ಗಳು ಕಂಡುಬಂದಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಅದು ಅವರ ಮಕ್ಕಳಿಗೆ ಸೇರಿದ್ದು, ಇಬ್ಬರೂ ಕೂಡ ಕೆನಡಾದಲ್ಲಿ ಜನಿಸಿದ್ದರು. ಉಳಿದಂತೆ ೩೦ರ ಹರೆಯದ ಕ್ಯಾಸೆ ಓಕ್ಸ್ ಎಂಬ ಬೋಟ್ ನಾವಿಕ ಇನ್ನೂ ನಾಪತ್ತೆಯಾಗಿದ್ದಾನೆ. ಆದರೆ ಕ್ಯಾಸೆ ಓಕ್ಸ್‌ನ ಬೋಟ್ ಮಾತ್ರ ಮೃತದೇಹಗಳ ಬಳಿ ಪತ್ತೆಯಾಗಿದ್ದು, ಆದರೆ ಆತ ಮಾತ್ರ ನಾಪತ್ತೆಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.