ನದಿನೀರಿನ ರಕ್ಷಣೆಗಾಗಿ ವಿಶ್ವ ನದಿಗಳ ದಿನ


ನೀರಿನ ಮಹತ್ವವನ್ನು ಅರಿತ ವಿಶ್ವಸಂಸ್ಥೆ 2005ರಲ್ಲಿ ಸೆಪ್ಟೆಂಬರ್​ ತಿಂಗಳ ಕೊನೆಯ ಭಾನುವಾರವನ್ನು ವಿಶ್ವ ನದಿಗಳ ದಿನ ಎಂದು ಘೋಷಿಸಿದೆ. ಇಂತಹ ದಿನದಲ್ಲಾದರೂ ನಾವು ನದಿಗಳ ನೈಜ ಸ್ಥಿತಿ ಏನು? ನದಿಗಳ ಅವನತಿಗೆ ಕಾರಣವೇನು? ಮನುಕುಲದ ಮೇಲೆ ಇದರ ಪರಿಣಾಮವೇನು? ಈ ಸಮಸ್ಯೆಯ ಪರಿಹಾರಕ್ಕಿರುವ ಮಾರ್ಗೋಪಾಯಗಳೇನು? ಎಂಬ ಕುರಿತು ಚಿಂತಿಸಲೇಬೇಕಿದೆ. ಇಲ್ಲದಿದ್ದರೆ ಭವಿಷ್ಯ ಮತ್ತಷ್ಟು ಕರಾಳವಾಗುವುದರಲ್ಲಿ ಎರಡು ಮಾತಿಲ್ಲ.

ವಿಶ್ವದಾದ್ಯಂತ ಏಡ್ಸ್, ಕ್ಯಾನ್ಸರ್ ನಂತಹ ಮಾರಕ ಖಾಯಿಲೆಗಳಿಂದ ಸಾಯುವ ಮಕ್ಕಳಿಗಿಂತ ಸ್ವಚ್ಚ ಕುಡಿಯುವ ನೀರಿಲ್ಲದೆ ಸಾಯುತ್ತಿರುವ ಮಕ್ಕಳ ಸಂಖ್ಯೆ ಅಧಿಕ ಎಂದು ಆತಂಕ ವ್ಯಕ್ತಪಡಿಸುತ್ತಿದೆ ವಿಶ್ವಸಂಸ್ಥೆಯ ವರದಿ. ಶುದ್ಧ ಕುಡಿಯುವ ನೀರು ಎಲ್ಲರ ಹಕ್ಕು. ಆದರೆ, ಆ ನೀರನ್ನೂ ಸಹ ಇಂದು ವಾಣಿಜ್ಯೀಕರಣ ಮಾಡಿ ಮಾರಾಟದ ವಸ್ತುವಾಗಿಸಿರುವ ಕುಖ್ಯಾತಿ ಮಾನವನಿಗಿದೆ. ಇಂತಹ ಪರಿಸ್ಥಿತಿಯಲ್ಲಾದರೂ ನಾವು ನದಿಗಳ ಉಳಿವಿನ ಬಗ್ಗೆ ಯೋಚಿಸದಿದ್ದರೆ ಭವಿಷ್ಯ ಮತ್ತಷ್ಟು ಕರಾಳವಾದೀತು!

ವಿಶ್ವ ನದಿಗಳ ದಿನವನ್ನು ಸೆಪ್ಟೆಂಬರ್ 4 ನೇ ಭಾನುವಾರ ಆಚರಿಸಲಾಗುತ್ತದೆ. ಈ ದಿನವನ್ನು ಮೊದಲು 2005 ರಲ್ಲಿ ಆಚರಿಸಲಾಯಿತು. ನಮ್ಮ ಜಲ ಸಂಪನ್ಮೂಲಗಳ ಬಗ್ಗೆ ಕಾಳಜಿ ವಹಿಸುವ ಅಗತ್ಯತೆಯ ಬಗ್ಗೆ ಹೆಚ್ಚಿನ ಅರಿವು ಮೂಡಿಸಲು 2005 ರಲ್ಲಿ ವಿಶ್ವಸಂಸ್ಥೆಯು “ವಾಟರ್ ಫಾರ್ ಲೈಫ್ ಡಿಕೇಡ್” ಅನ್ನು ಪ್ರಾರಂಭಿಸಿತು. 2005 ರಲ್ಲಿ ನಡೆದ ಮೊದಲ ಕಾರ್ಯಕ್ರಮವು ಉತ್ತಮ ಯಶಸ್ಸನ್ನು ಕಂಡಿತು ಮತ್ತು ಅಂದಿನಿಂದ ವಿಶ್ವ ನದಿಗಳ ದಿನವನ್ನು ಆಚರಿಸಲಾಯಿತು. ಹಲವಾರು ದೇಶಗಳು ಅಂದಿನಿಂದ, ದಿನದ ಆಚರಣೆಯು ಬೆಳೆಯುತ್ತಲೇ ಇದೆ.

ಆಫ್ರಿಕಾದ ನೈಲ್ ನದಿ, ದಕ್ಷಿಣ ಅಮೆರಿಕದ ಅಮೆಜಾನ್ ನದಿ ಮತ್ತು ಚೀನಾದಲ್ಲಿನ ಯಾಂಗ್​ಟ್ಜ್​ ನದಿ ವಿಶ್ವದ ಮೂರು ಉದ್ದದ ನದಿಗಳಾಗಿವೆ. ಆಫ್ರಿಕಾದ ಕಾಂಗೋ ನದಿಯನ್ನು ಈ ಹಿಂದೆ ಜೈರ್ ನದಿ ಎಂದು ಕರೆಯಲಾಗುತ್ತಿತ್ತು. ಇದು ವಿಶ್ವದ ಆಳವಾದ ನದಿಯಾಗಿದೆ. ಅಮೆಜಾನ್ ನದಿಯ ಉಪನದಿಯಾದ ರಿಯೊ ನೀಗ್ರೋ ವಿಶ್ವದ ಅತಿದೊಡ್ಡ ಕಪ್ಪು ನೀರಿನ ನದಿಯಾಗಿದೆ. ಭಾರತದ ಗಂಗಾ ನದಿಯನ್ನು ಅದರ ಐತಿಹಾಸಿಕ ಮಹತ್ವದಿಂದಾಗಿ ಪವಿತ್ರ ನದಿ ಎಂದು ಪರಿಗಣಿಸಲಾಗಿದೆ. ಅದರ ದಡದಲ್ಲಿ ವಾಸಿಸುವ ಲಕ್ಷಾಂತರ ಜನರಿಗೆ ಇದು ಜೀವಸೆಲೆಯಾಗಿದೆ. ಗಂಗಾ ದೇವಿಯನ್ನು ಹಿಂದೂ ಧರ್ಮದಲ್ಲಿ ಪೂಜಿಸಲಾಗುತ್ತದೆ.

ಭಾರತದ ಗಮನಾರ್ಹ ಭಾಗವು ನೀರಿನ ಕೊರತೆಯನ್ನು ಎದುರಿಸುತ್ತಿದೆ. ಆದರೆ ಇತ್ತೀಚಿನ ಸರ್ಕಾರವು ಭಾರತವು ನೀರಿನ ಕೊರತೆಯ ದೇಶವಲ್ಲ. ಆದರೆ ಜಲ ಸಂಪನ್ಮೂಲ ಮತ್ತು ಅಭಿವೃದ್ಧಿ ಯೋಜನೆಗಳ ಮೇಲ್ವಿಚಾರಣೆಯ ಕೊರತೆಯಿಂದಾಗಿ ನೀರಿನ ಕೊರತೆಯಿದೆ ಎಂದು ಹೇಳುತ್ತದೆ.ಭಾರತದ 20 ನದಿ ಜಲಾನಯನ ಪ್ರದೇಶಗಳಲ್ಲಿ 32,71,953 ಚದರ ಕಿಲೋಮೀಟರ್ ಅಧ್ಯಯನಕ್ಕಾಗಿ ಪರಿಗಣಿಸಲಾದ ಒಟ್ಟು ಜಲಾನಯನ ಪ್ರದೇಶ. ಅಧ್ಯಯನದ ಪ್ರಕಾರ, ಸಿಂಧೂ, ಗಂಗಾ ಮತ್ತು ಬ್ರಹ್ಮಪುತ್ರ ನದಿ ಜಲಾನಯನ ಪ್ರದೇಶಗಳಲ್ಲಿ ನೀರಿನ ಲಭ್ಯತೆ ಕಡಿಮೆಯಾಗಿದ್ದರೆ, ಉಳಿದ ಜಲಾನಯನ ಪ್ರದೇಶಗಳಲ್ಲಿ, ನೀರಿನ ಲಭ್ಯತೆಯ ಹೆಚ್ಚಳವಿದೆ. ಬರಾಕ್ ಮತ್ತು ಡಬ್ಲ್ಯುಎಫ್ಆರ್ (ಪಶ್ಚಿಮ ಹರಿಯುವ ನದಿಗಳು) ತಾದ್ರಿಗೆ ದೇಶದ 20 ಜಲಾನಯನ ಪ್ರದೇಶಗಳ ಸರಾಸರಿ ವಾರ್ಷಿಕ ನೀರಿನ ಸಂಪನ್ಮೂಲವನ್ನು 1999.20 ಬಿಲಿಯನ್ ಘನ ಮೀಟರ್ (ಬಿಸಿಎಂ) ಎಂದು ಅಂದಾಜಿಸಲಾಗಿದೆ.

ಮಾಹಿತಿಯ ಪ್ರಕಾರ, 1947 ರಲ್ಲಿ ಭಾರತದ ಸ್ವಾತಂತ್ರ್ಯದ ನಂತರ ತಲಾ ನೀರಿನ ಲಭ್ಯತೆಯಲ್ಲಿ ನಿರಂತರ ಮತ್ತು ಕಡಿದಾದ ಕುಸಿತ ಕಂಡುಬಂದಿದೆ. ಆದ್ದರಿಂದ, ಅಸ್ತಿತ್ವದಲ್ಲಿರುವ ನೀರಿನ ಸಂಪನ್ಮೂಲಗಳನ್ನು ಸಂರಕ್ಷಿಸಲು ಲಭ್ಯವಿರುವ ತಂತ್ರಜ್ಞಾನಗಳು ಮತ್ತು ಸಂಪನ್ಮೂಲಗಳನ್ನು ಉತ್ತಮವಾಗಿ ಬಳಸಿಕೊಳ್ಳುವ ಮೂಲಕ ಈ ಬಿಕ್ಕಟ್ಟನ್ನು ತಡೆಗಟ್ಟುವುದು ಅವಶ್ಯಕವಾಗಿದೆ.

ನದಿಗಳು ನೀರನ್ನು ಒದಗಿಸುವ ಮೂಲಕ ನಮಗೆ ಜೀವವನ್ನು ನೀಡುತ್ತವೆ. ಯುಗ ಯುಗಗಳಿಂದಲೂ ಪೂಜಿಸಲ್ಪಡುವ ಮತ್ತು ಮನುಷ್ಯನ ಜೀವನದ ಪ್ರಮುಖ ಭಾಗವಾಗಿವೆ. ಭೂಮಿಯ ಫಲವತ್ತತೆಯನ್ನು ಹೆಚ್ಚಿಸುವಲ್ಲಿ ನೀರು ವಿಶೇಷ ಪಾತ್ರ ವಹಿಸುತ್ತದೆ. ವಿದ್ಯುತ್ ತಯಾರಿಕೆ, ನೀರಾವರಿ ಹೊಸ ವಿಧಾನಗಳು ಮುಂತಾದ ಮಾನವನ ಆಧುನೀಕರಣಕ್ಕೆ ನದಿಗಳು ಸಂಪೂರ್ಣ ಬೆಂಬಲವನ್ನು ನೀಡಿದೆ. ನೀರು ಮನುಷ್ಯರಿಗೆ ಮಾತ್ರವಲ್ಲದೇ ಪ್ರಾಣಿಗಳು, ಪಕ್ಷಿಗಳು, ಮರಗಳು ಮತ್ತು ಸಸ್ಯಗಳಿಗೂ ಬಹಳ ಮುಖ್ಯವಾಗಿದೆ. ನದಿಗಳು ಮಾನವನ ಆಧುನೀಕರಣದಿಂದಾಗಿ ಕಲುಷಿಯಗೊಳ್ಳುತ್ತಿರುವುದು ಮಾತ್ರ ವಿಷಾದನೀಯ.


ಕಾವೇರಿ ಕೂಗು
ಅಲ್ಲದೆ, ದಕ್ಷಿಣದ ಗಂಗೆ ಎಂದು ಕರೆಯಲಾಗುವ ಕಾವೇರಿಯನ್ನು ಉಳಿಸಿಕೊಳ್ಳುವ ಸಲುವಾಗಿ “ಕಾವೇರಿ ಕೂಗು” ಎಂಬ ಚಳುವಳಿಯನ್ನೇ ರೂಪಿಸಲಾಗಿದೆ. ಈ ಹಿನ್ನೆಲೆಯಲ್ಲಿ ವಿಶ್ವ ನದಿಗಳ ದಿನವಾದ ಇಂದಾದರೂ ನಾವು ನದಿಗಳ ನೈಜ ಸ್ಥಿತಿ ಏನು, ಅದನ್ನು ಹೇಗೆ ಉಳಿಸಬೇಕು ಎಂದು ಅರಿಯಲೇಬೇಕಿದೆ.

ಜೀವನದಿ ಕಾವೇರಿ ರಾಜಧಾನಿ ಬೆಂಗಳೂರಿಗೆ ಕುಡಿಯುವ ನೀರು ಕೊಡುವ ಜೊತೆಗೆ ಹಳೇ ಮೈಸೂರು ಭಾಗದ ಕೃಷಿಕರ ಒಡನಾಡಿ. ಇಂತಹ ಕಾವೇರಿ ತನ್ನ ಮೂಲದಲ್ಲೇ ಸಾಕಷ್ಟು ಕಲ್ಮಶ ಹೊಂದಿರುವುದು ವಿಪರ್ಯಾಸ. ತಲಕಾವೇರಿಯಲ್ಲಿ ಹುಟ್ಟುವ ಕಾವೇರಿ, ಭಾಗಮಂಡಲಕ್ಕೆ ಬರುವ ವೇಳೆಗೆ ‘ಬಿ ಗ್ರೇಡ್‌’ ನೀರನ್ನು ಒಡಲಲ್ಲಿ ತುಂಬಿಕೊಳ್ಳುತ್ತಾಳೆ. ಇನ್ನು ಕುಶಾಲನಗರಕ್ಕೆ ಬರುವ ವೇಳೆಗೆ ಮನುಷ್ಯ–ಜಾನುವಾರು ಬಳಕೆಗೂ ಯೋಗ್ಯವಲ್ಲದ ‘ಸಿ ಗ್ರೇಡ್‌’ ಜಲ ಕಾವೇರಿಯನ್ನು ಆವರಿಸಿಕೊಂಡಿರುತ್ತದೆ. ಇಂತಹ ಜೀವನದಿಯ ಕಲ್ಮಶ ತೊಲಗಿಸಿ, ಅದನ್ನು ಸ್ವಚ್ಛವಾಗಿಟ್ಟುಕೊಳ್ಳಲು ಜನಜಾಗೃತಿ ಮೂಡಿಸಲು 15 ವರ್ಷದಿಂದ ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿ ಪ್ರಯತ್ನಿಸುತ್ತಲೇ ಇದೆ. ನದಿ ಸಂರಕ್ಷಣೆಗೆ ಸರ್ಕಾರಗಳು ಯೋಜನೆ ರೂಪಿಸಲು ಒತ್ತಾಯಿಸಿ ಹೋರಾಟ ನಡೆಸುತ್ತಲೂ ಇದೆ. ಈ ಆಂದೋಲನ ಸಮಿತಿಯ ವೈಶಿಷ್ಟ್ಯವೆಂದರೆ ಇದು ಎರಡೂ ರಾಜ್ಯಗಳು ಅಂದರೆ ಕರ್ನಾಟಕ ಹಾಗೂ ತಮಿಳುನಾಡಿನಲ್ಲಿ ಕಾರ್ಯನಿರ್ವಹಿಸುತ್ತಿದೆ, ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ.