ನಡು ರಸ್ತೆ ಮಧ್ಯದಲ್ಲಿ ವಿದ್ಯುತ ಕಂಬ ತೆರವಿಗೆ ಮನವಿ

ಚಿಂಚೋಳಿ,ಆ.30- ಪಟ್ಟಣದ ಚಂದಾಪುರದ ಬಸವನಗರ ಹೋಗುವ ಮುಖ್ಯ ರಸ್ತೆಯ ನಡು ಮಧ್ಯದಲ್ಲಿ ಜೆಸ್ಕಾಂ ಇಲಾಖೆಯವರು ವಿದ್ಯುತ್ ಕಂಬ ಹಾಕಿರುವುರಿಂದ ವಾಹನ ಸಂಚಾರಕ್ಕೆ ಅಡ್ಡಿಯಾಗುತ್ತಿದೆ.
ಅಲ್ಲದೇ ಹಾರಕೂಡ ಶಾಲೆಯ ಹಾಗೂ ಕಾಲೇಜು ಪಕ್ಕದಲ್ಲಿದ್ದು, ಈ ಮಾರ್ಗವಾಗಿ ಹೋಗುವ ಶಾಲೆಯ ಸ್ಕೂಲ್ ಬಸ್ ಮತ್ತು ಇನ್ನಿತರ ವಾಹನಗಳಿಗೆ ಅಡ್ಡಿಯಾಗುತ್ತಿದೆ.
ರಸ್ತೆಯ ನಡು ಮಧ್ಯದಲ್ಲಿರುವ ಕರೆಂಟಿನ ಕಂಬದಿಂದ ಬಹಳಷ್ಟು ತೊಂದರೆ ಆಗುತ್ತಿದ್ದು ಕೂಡಲೇ ಜೆಸ್ಕಾಂ ಇಲಾಖೆಯವರು ಇಲ್ಲಿನ ಬಸವ ನಗರದ ಮುಖ್ಯ ರಸೆಯ್ತ ಮಧ್ಯದಲ್ಲಿರುವ ವಿದ್ಯುತ್ ಕಂಬವನ್ನು ತೆರವುಗೊಳಿಸಿ ವಾಹನ ಸವಾರರಿಗೆ ಅನುಕೂಲ ಮಾಡಿಕೊಡಬೇಕೆಂದು ಬಸವನಗರ ನಿವಾಸಿಯಾದ ವೀರೇಶ ಯ0ಪಳ್ಳಿ, ಅವರು ಜೆಸ್ಕಾಂ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.