ನಡು ರಸ್ತೆಯಲ್ಲಿ ವಿದ್ಯುತ ಕಂಬ: ತೆರವಿಗೆ ಗ್ರಾಮಸ್ಥರ ಆಗ್ರಹ

ಚಿಂಚೋಳಿ,ಜೂ.24- ತಾಲ್ಲೂಕಿನ ಯ0ಪಳ್ಳಿ ಗ್ರಾಮದಿಂದ ದೇಗಲಮಡಿ ಗ್ರಾಮಕ್ಕೆ ಹೋಗುವ ಮುಖ್ಯ ಡಾಂಬರ ರಸ್ತೆಯ ಮಧ್ಯೆಯೇ ವಿದ್ಯುತ್ ಕಂಬವನ್ನು ಸ್ಥಳಾಂತರ ಗೊಳಿಸದೇ ರಸ್ತೆ ಡಾಂಬರಿಕರಣ ಕಾಮಗಾರಿ ನಡೆಸಲಾಗುತ್ತಿದೆ.
ಸಂಬಂಧಪಟ್ಟ ಅಧಿಕಾರಿಗಳು ವಿದ್ಯುತ ಕಂಬ ಸ್ಥಳಾಂತ ಗೊಳಿಸದೇ ಬಿಟ್ಟಿರುವುದರಿಂದ ವಾಹನಗಳ ಸಂಚಾರಕ್ಕೆ ಈ ಕಂಬ ಅಡ್ಡಿಯನ್ನುಂಟು ಮಾಡುವುದಲ್ಲದೇ ಅಪಘಾತಕ್ಕೂ ಕಾರಣ ಆಗುವ ಸಾಧ್ಯತೆ ಇದೆ. ಎಂದು ದೇಗಲಮಡಿ ಗ್ರಾಮಸ್ಥರಾದ ಮಲ್ಲಿಕಾರ್ಜುನ ಮಡಿವಾಳ, ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ರಸ್ತೆಯ ಮಧ್ಯೆ ವಿದ್ಯುತ್ ಪೆÇೀಲ್ ಪಕ್ಕದಿಂದ ಓಡಾಡಲು ತೊಂದರೆಯಾಗುತ್ತದೆ ವಿಶೇಷವಾಗಿ ಇಲ್ಲಿನ ರೈತರಿಗೆ ಬಹಳಷ್ಟು ಕಿರಿಕಿರಿಯನ್ನುಂಟು ಮಾಡುತ್ತದೆ.
ರಾತ್ರಿ ಹೊತ್ತಿನಲ್ಲಿ ಯಾರಾದರೂ ಹೊಸಬರಿಗೆ ನಡುರಸ್ತೆ ಮಧ್ಯೆ ಇರುವ ವಿದ್ಯುತ ಕಂಬ ಮಾಹಿತಿ ಇಲ್ಲದೆ ಅಪಘಾತ ಅಗುತ್ತದೆ ಅದರಿಂದ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಗುತ್ತಿಗೆದಾರರು ಕೂಡಲೇ ನಡು ರಸ್ತೆ ಇರುವ ವಿದ್ಯುತ ಕಂಬವನನು ತೆರವುಗೊಳಿಸಿ ಬೇಕೆಂದು ಮಲ್ಲಿಕಾರ್ಜುನ ಮಡಿವಾಳ, ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ