ನಡುರಸ್ತೆಯಲ್ಲೇ ಬೀಡುಬಿಟ್ಟ ಬಿಡಾಡಿ ದನಗಳು – ವಾಹನ ಸಂಚಾರಕ್ಕೆ ಅಡ್ಡಿ.

ಕೂಡ್ಲಿಗಿ. ಸೆ. 19 :- ಪಟ್ಟಣದ ಪ್ರಮುಖ ರಸ್ತೆಗಳ ಮಧ್ಯದಲ್ಲೇ ಬಿಡಾಡಿ ದನಗಳು ಅಡ್ಡಾದಿಡ್ಡಿ ಮಲಗುತ್ತಿದ್ದು ವಾಹನ ಸಂಚಾರಕ್ಕೆ ಅಡ್ಡಿಯಾಗುವುದಾಗಿ ವಾಹನ ಸವಾರರು ಆರೋಪಿಸುತ್ತಿದ್ದಾರೆ.  ಪಟ್ಟಣದ ಕೊತ್ತಲಾಂಜನೇಯ ಪಾದಗಟ್ಟೆ, ಅಂಬೇಡ್ಕರ್ ವೃತ್ತ, ಮದಕರಿ ವೃತ್ತ, ಹೊಸಪೇಟೆ ಮತ್ತು ಕೊಟ್ಟೂರು ರಸ್ತೆಯ ಬಳಿ ರಸ್ತೆಯ ಮಧ್ಯಭಾಗದಲ್ಲಿ ಅಡ್ಡಾದಿಡ್ಡಿಯಾಗಿ ಮಲಗಿರುವ ಬಿಡಾಡಿದನಗಳನ್ನು ಕಾಣಬಹುದಾಗಿದ್ದು ಈ ದನಗಳ ವಾರಸುದಾರರು ದನಗಳ ರಕ್ಷಣೆ ಮಾಡಿಕೊಳ್ಳದೆ ಹಾಲಿನ ಉಪಯೋಗ ಮಾತ್ರ ಮಾಡಿಕೊಳ್ಳುತ್ತಿದ್ದು ನೂರಾರು ಜನರಿಗೆ ತೊಂದರೆಯಾಗೋ ರೀತಿಯಲ್ಲಿ ಅವುಗಳನ್ನು ಮನೆಯಲ್ಲಿ ಅಥವಾ ಕಣಗಳಲ್ಲಿ ಕಟ್ಟಿಹಾಕದೆ ಅವುಗಳಿಗೆ ಮೇವು ಸಹ ಹಾಕದೆ ಬಿಡಾಡಿಯಾಗಿ ಬಿಟ್ಟಿದ್ದಾರೆ ಈ ದನಗಳು ನಡುದಾರಿಯಲ್ಲಿ ಅಡ್ಡಾದಿಡ್ಡಿಯಾಗಿ ಮಲಗುತ್ತಿದ್ದು ಒಂದೆಡೆ ತೊಂದರೆ ಕೊಟ್ಟರೆ ಇನ್ನೂ ಕೆಲವು ದನಗಳು ಮಾರ್ಕೆಟ್ ನಲ್ಲಿ ತೆಗೆದುಕೊಂಡು ಹೋಗುವ ಸಾಮಾನುಗಳ ಚೀಲಕ್ಕೆ ಬಾಯಿ ಹಾಕಿ ಕಿರಾಣಿ ಸಾಮಾನುಗಳನ್ನು ಚೆಲ್ಲಾಪಿಲ್ಲಿ ಮಾಡುತ್ತವೆ ಅವುಗಳನ್ನು ಓಡಿಸಲು ಹೋದರೆ ಅವರ ಮೇಲೆ ಕೊಂಬಿನಿಂದ ತಿವಿಯಲು ಮುಂದಾಗುತ್ತವೆ ಅನೇಕ ಬೈಕ್ ಸವಾರರು ಬಿಡಾಡಿ ದನಗಳ ಉಪಟಳದಿಂದ ರಸ್ತೆಗೆ ಬಿದ್ದು ಗಾಯಗಳಾಗಿರುವ ಉದಾಹರಣೆಗಳು ಅನೇಕ ಇವೆ. 
 ಬಿಡಾಡಿ ದನಗಳಿಂದ ರಕ್ಷಿಸಿ :-
ಪಟ್ಟಣದ ಬಿಡಾಡಿ ದನಗಳ ಉಪಟಳ ಹಾಗೂ ವಾಹನ ಸಂಚಾರಕ್ಕೆ ಅಡ್ಡಿಯಾಗುತ್ತಿದ್ದು ಇವುಗಳಿಂದ ರಕ್ಷಣೆ ನೀಡುವಲ್ಲಿ ಸಂಬಂದಿಸಿದ ಪಟ್ಟಣ ಪಂಚಾಯತಿ ಅಧಿಕಾರಿಗಳು ಮುಂದಾಗಿ ಬಿಡಾಡಿ ದನಗಳ ಮಾಲೀಕರೂ ಮನೆಯಲ್ಲಿ ಕಟ್ಟಿಕೊಳ್ಳದಿದ್ದರೆ ಅವುಗಳನ್ನು ದನದದೊಡ್ಡಿಗೆ ಹಾಕುವಂತೆ ಮನವಿ ಮಾಡಿಕೊಳ್ಳುತ್ತಿದ್ದಾರೆ.