ನಡುರಸ್ತೆಯನ್ನು ನುಂಗುತ್ತಿರುವ ರಾಜ್ ಮಹಲ್

ಶಿಸ್ತು ಕಾನೂನುಕ್ರಮಕ್ಕೆ ಅಧಿಕಾರಿಗಳ ಹಿಂದೇಟು
ಚಂದ್ರಶೇಖರ ಮದ್ಲಾಪೂರು
ಮಾನ್ವಿ,ಮೇ.೨೬-
ಒಂದು ಕಲ್ಯಾಣ ಮಂಟಪದಲ್ಲಿ ಮದುವೆಯಾದರೆ ಸರ್ವರಿಗೂ ಸಂತೋಷವನ್ನುಂಟು ಮಾಡುತ್ತದೆ. ಆದರೆ ಮಾನವಿ ಪಟ್ಟಣದ ಹೃದಯ ಭಾಗದಲ್ಲಿರುವ ರಾಜ್ ಮಹಲ್ ಕಟ್ಟಡದಲ್ಲಿರುವ ಬಾಲಾಜಿ ಕಾಂಫರ್ಟ್ ಕಲ್ಯಾಣ ಮಂಟಪದಲ್ಲಿ ಮದುವೆ ನಡೆದರೆ ಕುಟುಂಬಸ್ಥರಿಗೆ ಬಿಟ್ಟು ಉಳಿದ್ದೇಲ್ಲ ಸಾರ್ವಜನಿಕರಿಗೆ ಕಡುಕಷ್ಟವಾಗಿತ್ತದೆ. ಯಾಕೆಂದರೆ ಬಸವ ವೃತ್ತದಿಂದ ವಾಲ್ಮೀಕಿ ವೃತ್ತದವರೆಗೂ ಮುಖ್ಯ ರಸ್ತೆ ಸಂಪೂರ್ಣವಾಗಿ ಬಂದ್ ಆಗಿರುತ್ತದೆ, ಮದುವೆಗೆ ಆಗಮಿಸಿದ ವಾಹನಗಳಿಂದ ರಸ್ತೆಯನ್ನು ಸಂಪೂರ್ಣವಾಗಿ ನುಂಗಿ ಸಾರ್ವಜನಿಕರಿಗೆ ದಾರಿ ಕಾಣದಂತಾಗಿ ಮನಸ್ಸಿನಲ್ಲಿಯೇ ಶಾಪವಾಕಿ ಮುಂದೆ ಸಾಗುತ್ತಿರುವ ದೃಷ್ಯವನ್ನು ತಾಲೂಕ ದಂಡಧಿಕಾರಿಗಳು ಹಾಗೂ ಪುರಸಭೆಯ ಮುಖ್ಯಧಿಕಾರಿಗಳು ಕಣ್ಮುಚ್ಚಿಕೊಂಡು ಬಿಲ್ಡಿಂಗ್ ಮಾಲೀಕನ ವಿರುದ್ಧ ಯಾವ ಕ್ರಮವನ್ನು ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ ಎನ್ನುವುದು ದುರದೃಷ್ಟಕರ ವಿಷಯವಾಗಿದೆ.
ರಾಜ್ ಮಹಲ್ ನಿರ್ಮಾಣದ ಹಂತದಿಂದಲೂ ಬಾರಿ ವಿವಾದಗಳ ಮೂಲಕ ಪೂರ್ಣಗೊಂಡಿದ್ದು ಅದು ಕಾನೂನು ನಿಯಮಗಳನ್ನು ಮೀರಿ ನಿರ್ಮಾಣವಾಗಿದ್ದು ಇದಕ್ಕೆ ಸಂಬಂಧಿಸಿದಂತೆ ಅಂದಿನ ಪುರಸಭೆ ಅಧಿಕಾರಿ ಜಗದೀಶ್ ಭಂಡಾರಿ ತಮ್ಮ ಹುದ್ದೆಯಿಂದ ಹಿಂಬಡ್ತಿಯನ್ನು ಹೊಂದಿದ್ದಾರೆ. ಸುತ್ತಳತೆಯಲ್ಲಿ ಐದು ಅಡಿಯಷ್ಟು ಖಾಲಿ ನಿವೇಶನ ಉಳಿಸಬೇಕಾಗಿತ್ತು, ಬಿಲ್ಡಿಂಗ್ ನಿರ್ಮಾಣದ ನಕ್ಷೆಯಲ್ಲಿ ಇರುವುದಕಿಂತ ಹೆಚ್ಚಿನ ಮೊತ್ತವಾಗಿರುವುದು, ಪಾರ್ಕಿಂಗ್ ವ್ಯವಸ್ಥೆಯನ್ನು ವ್ಯವಸ್ಥಿತವಾಗಿಲ್ಲ, ಮದುವೆ ಸಮಾರಂಭಗಳಿಗೆ ಬರುವ ವಾಹನಗಳನ್ನು ನಡು ರಸ್ತೆಯಲ್ಲಿಯೇ ನಿಲ್ಲಿಸಿ ಸಾರ್ವಜನಿಕರಿಗೆ ತೊಂದರೆ ನೀಡುವುದು ಸೇರಿದಂತೆ ಅನೇಕ ರೀತಿಯ ಲೋಪದೋಷಗಳಿಗೆ ಸಂಬಂಧಿಸಿದಂತೆ ಅನೇಕ ದೂರುಗಳು ಇದ್ದರೂ ಕೂಡ ಮಾಲೀಕನ ವಿರುದ್ಧ ಯಾವುದೇ ಕಾನೂನಿನ ಶಿಸ್ತುಬದ್ಧ ಕ್ರಮವನ್ನು ಕೈಗೊಳ್ಳದೆ ಇರುವುದು ನೋಡಿದರೆ ಅಧಿಕಾರಿಗಳ ನಿರ್ಲಕ್ಷ್ಯ ಎಂದು ಕಾಣಿಸುತ್ತಿದೆ ಮುಂದಿನ ದಿನಗಳಲ್ಲಿ ಯಾವ ರೀತಿಯ ಕ್ರಮವನ್ನು ಮಾಡಿ ಸಾರ್ವಜನಿಕರಿಗೆ ಅನುಕೂಲ ಮಾಡುತ್ತಾರೋ ಇಲ್ವೋ ಕಾಯ್ದು ನೋಡಬೇಕಾಗಿದೆ.

( ಬಾಕ್ಸ್ ಟಂ ) ೧
ನಾನು ಹೊಸದಾಗಿ ಬಂದಿದ್ದೇನೆ ನಂತರ ವಿಧಾನಸಭಾ ಚುನಾವಣೆಯ ನಿಮಿತ್ತ ಇಂತಹ ಯಾವುದೇ ದೂರುಗಳನ್ನು ನೋಡುವುದಕ್ಕೆ ಸಾಧ್ಯವಾಗಿಲ್ಲ, ನಮ್ಮ ತಾಯಿಯ ಆರೋಗ್ಯ ಸರಿ ಇಲ್ಲದ ಕಾರಣದಿಂದಾಗಿ ಬೆಳಗಾವಿ ಆಸ್ಪತ್ರೆಯಲ್ಲಿದ್ದೇನೆ ಮಾನ್ವಿಗೆ ಆಗಮಿಸಿದ ಮರುದಿನವೇ ಇದನ್ನು ತನಿಖೆ ಮಾಡಿ ಮಾಲೀಕರ ವಿರುದ್ಧ ಸೂಕ್ತ ಕಾನೂನು ಕ್ರಮವನ್ನು ಕೈಗೊಳ್ಳುತ್ತೇನೆ..

ವೆಂಕಟಸ್ವಾಮಿ
ಪುರಸಭೆ ಮುಖ್ಯಧಿಕಾರಿಗಳು ಮಾನ್ವಿ

ಬಾಕ್ಸ್ ಐಟಂ ೨
ಪುರಸಭೆಯ ಕಾನೂನು ಉಲ್ಲಂಘನೆ ಮಾಡಿದ್ದಲ್ಲದೆ ನಡುರಸ್ತೆಯಲ್ಲಿಯೇ ವಾಹನ ನಿಲ್ಲಿಸುವುದು, ಸೇರಿದಂತೆ ಮಾರ್ಕೆಟಿಗೆ ಬಂದಿರುವ ವಾಹನ ನಿಲುಗಡೆಗೆಗಾಗಿ ಪಾದಚಾರಿಗಳಾಗಿ ನಿರ್ಮಾಣವಾಗಿರುವ ಕಾಲುದಾರಿಯನ್ನು ಅತಿಕ್ರಮಣ ಮಾಡಿಕೊಂಡಿರುವುದು, ಬಿಲ್ಡಿಂಗ್ ಸುತ್ತಲೂ ಖಾಲಿ ನಿವೇಶನ ಬಿಡದಿರುವುದು, ಪ್ರಮುಖವಾಗಿ ಅಧಿಕಾರಿಗಳ ನೋಟಿಸಿಗೆ ಯಾವುದೇ ಮನ್ನಣೆ ನೀಡದಿರುವ ಮಾಲೀಕನ ವಿರುದ್ಧ ತಾಲೂಕ ಆಡಳಿತ ಹಾಗೂ ಪಟ್ಟಣದ ಪುರಸಭೆ ಯಾವ ಕ್ರಮವನ್ನು ಕೈಗೊಳ್ಳಲಾಗುತ್ತದೆ ಎನ್ನುವುದನ್ನು ಕಾಯ್ದು ನೋಡಬೇಕಾಗಿದೆ.