ನಡಿಗೆ ನಿಲ್ಲಿಸಿದ ನಡೆದಾಡುವ ದೇವರು

ಹುಣಸಗಿ:ಮಾತನ್ನು ಮತ್ತು ನಡಿಗೆಯನ್ನು ನಿಲ್ಲಿಸಿದ ದೇವರಿಗೊಂದು ನಮನ. ಮನಸ್ಸಿನಲ್ಲಿ ಭಾವ ತುಂಬಿದೆ, ಕಣ್ಣಂಚಿನಲ್ಲಿ ಕಣ್ಣೀರು ತನ್ನಷ್ಟಕ್ಕೆ ತಾನೇ ಹರಿದಿದೆ. ಏನೋ ಕಳೆದುಕೊಂಡಿದ್ದೇನೆ, ಹುಡುಕಾಡಿದರೆ ಸಿಗಬಹುದೇನೋ ಅನ್ನಿಸುತ್ತಿತ್ತು. ದುಗುಡ, ಅಸಮಧಾನ ಆದರೂ ಈ ಸತ್ಯವನ್ನು ಒಪ್ಪಿಕೊಳ್ಳಲೇಬೇಕು.
ಕಳೆದ ನಾಲ್ಕು ಐದು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದ ಸುದ್ದಿ ಆದರೂ, ಮನಸ್ಸು ಒಪ್ಪಿಕೊಳ್ಳ ದಂತಹ ಸ್ಥಿತಿ ಇಂದು ನಿಜವಾಯಿತು. ಸರಳ ಜೀವನದ ಸಾಕಾರ ಮೂರ್ತಿ ಶ್ರೀ ಸಿದ್ದೇಶ್ವರ ಶ್ರೀಗಳು. ಇವರು ಮೂಲತಃ ವಿಜಯಯಪುರ ಜಿಲ್ಲೆಯ ಬಿಜ್ಜರಗಿ ಗ್ರಾಮದ ಸಾಮಾನ್ಯ ರೈತರಾಗಿದ್ದರು. 10, 11, ವರ್ಷದವರಿದ್ದಾಗಲೇ ಮಲ್ಲಿಕಾರ್ಜುನ ಸ್ವಾಮಿಗಳ ಪ್ರವಚನದಿಂದ ಪ್ರಭಾವಿತರಾದರು. ಇವರ ಚುರುಕುತನ ಕಂಡ ಮಲ್ಲಿಕಾರ್ಜುನ ಸ್ವಾಮಿಗಳು ಪ್ರವಚನಗಳಿಗೆ ಇವರನ್ನು ತಮ್ಮೊಂದಿಗೆ ಕರೆದೊಯ್ಯುತ್ತಿದ್ದರು. ಶ್ರೀಗಳ ಜೊತೆಗೆ ಇದ್ದು ಪದವಿ, ಸ್ನಾತಕೋತ್ತರ ಪದವಿ ಪಡೆದರು. ಆಳವಾದ ಅಧ್ಯಯನ, ಕನ್ನಡ, ಇಂಗ್ಲಿಷ್, ಹಿಂದಿ, ಸಂಸ್ಕøತ ಹಾಗೂ ಮರಾಠಿ ಭಾಷೆಗಳಲ್ಲಿ ಪ್ರವೀಣರಾಗಿ ಅಪಾರವಾದ ಜ್ಞಾನ ಸಂಪತ್ತನ್ನು ಗಳಿಸಿದರು.
2013 ರಲ್ಲಿ ಕೊಡೆಕಲ್ ಗ್ರಾಮದಲ್ಲಿ ಇವರ ಒಂದು (1) ತಿಂಗಳ, ಆಧ್ಯಾತ್ಮಿಕ ಪ್ರವಚನ ನಡೆದಿತ್ತು. ಬೆಳಗಿನ 6 ಗಂಟೆಗೆ ನಾನು ಮತ್ತು ನನ್ನ ತಾಯಿ ಹೋಗಿದ್ದೆವು. ಚುಮುಚುಮು ನಸುಕಿನಲ್ಲಿ ಆಕಾಶದಿಂದ ಮಂಜಿನ ತುಂಡೊಂದು ಕೆಳಗೆ ಇಳಿದಂತೆ ಕಾಣಿಸುವ, ಶುಬ್ರ ಬಿಳಿ ಬಣ್ಣದ ಉಡುಪುಧರಿಸಿದ, ಹಾರ ಇರಲಿಲ್ಲ, ಶಾಲು, ಸನ್ಮಾನ ಇಲ್ಲ, ಮುಗುಳುನಗೆಯಿಂದ, ಸಣ್ಣ ದ್ವನಿಯಿಂದ ಪ್ರಾರಂಭಿಸಿದ ಶ್ರೀಗಳ ಪ್ರವಚನ ಆಧ್ಯಾತ್ಮಿಕದೆಡೆಗೆ ಒಯ್ಯುತ್ತಿತ್ತು.
ಪ್ರವಚನದ ನುಡಿಗಳನ್ನು ಒಂದು ಬಾರಿ ಮೆಲುಕು ಹಾಕಿದಾಗ, ಒಂದು ಕಾಲು ಮುಂದೆ, ಇನ್ನೊಂದು ಕಾಲು ಹಿಂದೆ, ಮುಂದಿನ ಕಾಲಿಗೆ ಗರ್ವವಿಲ್ಲ, ಹಿಂದಿನ ಕಾಲಿಗೆ ಬೇಸರವಿಲ್ಲ, ಯಾಕೆಂದರೆ ಅವುಗಳಿಗೆ ಗೊತ್ತು ಇದು ಕ್ಷಣಾರ್ಧದಲ್ಲಿ ಬದಲಾಗುವುದು ಇದೆ ಅಂತ. ಹೀಗೆ ಯಾವಾಗಲೂ ಬೇರೊಬ್ಬರ ಬಗ್ಗೆ, ಅವರು ಹಂಗ ಅದಾರ, ಇವರು ಹಿಂಗ ಅದಾರ ಹತ್ತು ವರ್ಷ ಅವರು ನನಗೆ ಹಿಂಗ ಅಂದಿದ್ದರು, ಅಂತ ತಲೆ ಕೆಡಿಸ್ಕೋಬೇಡ, ಯಾರು ಈ ಭೂಮಿ ಮ್ಯಾಗ ಸ್ಥಿರವಾಗಿ ಇರೋದಿಲ್ಲ.
ನಾವು ಬದುಕಿರುವುದು ಎದೆ ಬಡಿತದಿಂದಲೇ ಹೊರತು ಬಟ್ಟೆಯಿಂದ ಅಲ್ಲ, ಬಟ್ಟೆ ಬೇಡ ಅಂತಲ್ಲ, ಆದರೆ ಅದರಿಂದಾಗಿಯೇ ನಾನಿಲ್ಲ ಎಂದು ತಿಳಿದು ಬಟ್ಟೆ ಧರಿಸಿದರೆ,ಅದೇ ಜಾಣತನ.
ಬದುಕಿನಲ್ಲಿ ಮರಣವನ್ನು ಯಾಕೆ ಚಿಂತಿಸುತ್ತೀಯಾ ಬರಾಗ ಬರುತ್ತದೆ ಮರೆತುಬಿಡಿ. ಜಿoಡಿgeಣ ಣhe ಜeಚಿಣh, ಚಿಟಿಜ ಥಿou ಟive ರಿoಥಿಜಿuಟಟಥಿ. ಮರಣವನ್ನು ಭಾವಿಸಬೇಡ, ಜಗತ್ತು ಎಷ್ಟು ಅದ್ಭುತವಾಗಿದೆ.
ಯಾವ ವ್ಯಕ್ತಿ ಸ್ಪಷ್ಟವಾಗಿ, ಸ್ವಚ್ಛವಾಗಿ, ನೇರವಾಗಿ ಮಾತನಾಡುತ್ತಾನೋ ಅವರ ಮಾತುಗಳು ತೀವ್ರವಾಗಿ, ಹರಿತವಾಗಿ, ಕಠೋರವಾಗಿ ಇರಬಹುದು. ಆದರೆ ಆತನ ಮನಸ್ಸಿನಲ್ಲಿ ಯಾವುದೇ ಮೋಸವಿರುವುದಿಲ್ಲ.
ಕಷ್ಟಗಳನ್ನು ಮೌನವಾಗಿ ದಾಟಬೇಕು. ಪರಿಶ್ರಮ, ಸದ್ದಿಲ್ಲದೆ ಸಾಗಬೇಕು. ಸಿಗುವ ಯಶಸ್ಸಿನ ಶಬ್ದ ಜಗತ್ತಿಗೆ ಕೇಳಿಸುವಷ್ಟು ಜೋರಾಗಿರಬೇಕು.
ಸದ್ದು ಗದ್ದಲವಿಲ್ಲದ ಸಾಧನೆ, ಇಲ್ಲಿ ಗದ್ದುಗೆ ಏರಿದೆ. ಎಲ್ಲಾ ಸಾಧಿಸಿದ ಸಾಧನೆ ಸದ್ದಿಲ್ಲದೆ ಅಸ್ತಂಗತವಾಗಿದೆ. ಆಡಂಬರವಿರದ, ಅಬ್ಬರ ವಿರದ,ಸರಳತೆಯ ಸಾಕಾರ ರೂಪ.
ವಿಶ್ವಮಾನವ, ಎರಡನೇ ವಿವೇಕಾನಂದ, ನಿಜವಾದ ಶರಣ, ಕಿಸೆ ಇಲ್ಲದ ಸಂತ, ಮಾನವ ಕುಲದ ಮಹಾನ್ ಚೇತನ, ಆಧುನಿಕ ಬಸವಣ್ಣ ಎಂದೇ ಪ್ರಸಿದ್ಧರಾಗಿ, ಒಂದು ಕ್ಷಣ ಅವರು ಲಿಂಗೈಕ್ಯರಾದ ಸುದ್ದಿ ತಿಳಿಯುತ್ತಲೇ ಬದುಕು ಮುಗಿಯುತ್ತದೆ, ದೀಪ ಆರಿದಂತೆ, ತೆರೆ ಅಡಗಿದಂತೆ, ಮೋಡ ಕರಗಿದಂತೆ, ಬರೀ ಬಯಲು ಮಹಾ ಮೌನ, ಶೂನ್ಯ ಸತ್ಯ, ಬದುಕಿನ ಕೊನೆಯ ಸಾಲುಗಳಾದವು.
-ಶಾರದ ಬ.ಹಾದಿಮನಿ ( ಶಿಕ್ಷಕಿ ), ಕಲ್ಲದೇವನಹ