
ತಾಳಿಕೋಟೆ:ಮಾ.13: ಶಾಸಕ ಎ.ಎಸ್.ಪಾಟೀಲ(ನಡಹಳ್ಳಿ) ಅವರು ಮುದ್ದೇಬಿಹಾಳ ಮತಕ್ಷೇತ್ರದಲ್ಲಿ ಬಿಜೆಪಿ ಶಾಸಕರಾದ ಮೇಲೆ ಮಾಡಿರುವ ಅಭಿವೃದ್ದಿ ಕಾರ್ಯಗಳು ಹಿಂದಿನ ಕಾಂಗ್ರೇಸ್ ಶಾಸಕರಿಗೆ ನಾಚುವಂತೆ ಮಾಡಿದೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಅವರು ಹೇಳಿದರು.
ಶನಿವಾರರಂದು ತಾಳಿಕೋಟೆ ಪಟ್ಟಣದಲ್ಲಿ ವಿಜಯ ಸಂಕಲ್ಪಯಾತ್ರೆಯ ನಂತರ ಬಸವೇಶ್ವರ ವೃತ್ತದಲ್ಲಿ ನೂತನವಾಗಿ ಪ್ರತಿಷ್ಠಾಪಿಸಲಾಗಿರುವ ಅಶ್ವಾರೂಡ ಬಸವೇಶ್ವರರ ಮೂರ್ತಿ ಅನಾವರಣಗೊಳಿಸಿ ಮಾತನಾಡುತ್ತಿದ್ದ ಅವರು ನಡಹಳ್ಳಿ ಅವರು ಶಾಸಕರಾದ ಮೇಲೆ ಕ್ಷೇತ್ರದಲ್ಲಿ ಅತ್ಯುತ್ತಮವಾದ ಕೆಲಸ ಕಾರ್ಯಗಳನ್ನು ಮಾಡಿದ್ದಾರೆ ನಡಹಳ್ಳಿ ಅವರು ಪ್ರತಿ ವಿಧಾನಸಭೆ ಅಧಿವೇಶನದಲ್ಲಿಯೂ ಉತ್ತರ ಕರ್ನಾಟಕದ ಬಗ್ಗೆ ಅಧಿಕಾರಯುತವಾಗಿ ಕಾಳಜಿಯುತವಾಗಿ ದ್ವನಿ ಎತ್ತುವಂತಹ ಕೆಲಸ ಮಾಡಿದ್ದಾರೆ ಹೀಗಾಗಿ ಮುದ್ದೇಬಿಹಾಳ ಕ್ಷೇತ್ರದಲ್ಲಿ ಬದಲಾವಣೆಯಾಗಿದೆ ಇದಕ್ಕೆ ಕಾರಣ ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಕಾರಣವಾಗಿದೆ ನಮ್ಮ ದೇಶದ ಪ್ರಧಾನಿ ನರೇಂದ್ರ ಮೋದಿಜಿ ಅವರು ಲಂಡನ್‍ನಲ್ಲಿ ವಿಶ್ವಗುರು ಬಸವಣ್ಣನವರ ಮೂರ್ತಿಯನ್ನು ಪ್ರತಿಷ್ಠಾಪಿಸಿ ಅನಾವರಣಗೊಳಿಸಿದ್ದಾರೆ ಅಂತಹ ಭವ್ಯವಾದ ಅಶ್ವಾರೂಡ ಬಸವಣ್ಣನವರ ಮೂರ್ತಿಯನ್ನು ತಾಳಿಕೋಟೆ ಪಟ್ಟಣದ ಮುಖ್ಯ ಹೆಬ್ಬಾಗಿಲಿನಲ್ಲಿ ಶಾಸಕ ಎ.ಎಸ್.ಪಾಟೀಲ(ನಡಹಳ್ಳಿ) ಅವರು ಪ್ರತಿಷ್ಠಾಪಿಸಿ ಈ ಭಾಗದಲ್ಲಿ ಸಮಾನತೆಯ ಹರಿಕಾರನಿಗೆ ಗೌರವ ಕೊಡುವದರ ಜೊತೆಗೆ ಜನರ ಆಶೋತ್ತರಗಳಿಗೆ ಸ್ಪಂದಿಸಿದ್ದಾರೆ ಡಬಲ್ ಇಂಜಂನ್ ಸರ್ಕಾರ ದಿಂದ ವಿಜಯಪೂರ ಜಿಲ್ಲೆಯಲ್ಲಿ ನೀರಾವರಿ ಯೋಜನೆಗಳು ಆಗಿವೆ ಅದು ಮಾಡಿದ್ದು ಬಿಜೆಪಿ ಸರ್ಕಾರವಾಗಿದೆ ರಾಷ್ಟ್ರದಲ್ಲಿ ಕಾಂಗ್ರೇಸ್ ಎಲ್ಲಿದೆ ಎಂದು ದುರ್ಬಿಂದು ಹುಡುಕುವಂತಾಗಿದೆ ರಾಜ್ಯದಲ್ಲಿ ಕಾಂಗ್ರೇಸ್ ಸರ್ಕಾರ ಆಯಶೂನಲ್ಲಿದೆ ಇವತ್ತು ತ್ರಿಪೂರಾ ಚುನಾವಣೆ, ನಾಗಾಲ್ಯಾಂಡ್ ಚುನಾವಣೆ, ಮೇಗಾಲಯ ಚುನಾವಣೆ, ಎಲ್ಲಕಡೆಗಳಲ್ಲಿ ಬಿಜೆಪಿ ಜಯಭೇರಿ ಭಾರಿಸಿದೆ ಹೀಗಾಗಿ ಕಾಂಗ್ರೇಸ್ ರಾಷ್ಟ್ರದಲ್ಲಿಯೇ ಅದೋಗತಿಗೆ ಹೋಗಿದೆ ಮೋದಿ ಸರ್ಕಾರದ ನಿರ್ಧಾರದಿಂದ ಜಮ್ಮು ಕಾಶ್ಮೀರದಲ್ಲಿ 370 ರದ್ದಿನಿಂದ ಶಾಂತಿಯ ನೆಲೆಯಾಗಿದೆ ಅಲ್ಲದೇ ಅಯೋದ್ಯೆಯಲ್ಲಿ ರಾಮಮಂದಿರವಾಗಬೇಕೆಂದು ಕನಸ್ಸನ್ನು ಕಂಡಿದ್ದೇವೆ ನರೇಂದ್ರ ಮೋದಿಜಿ ಅವರು ಕೋರ್ಟಿನ ತೀರ್ಪಿನ ನಂತರ ಅಲ್ಲಿ ಹೋಗಿ ಅಯೋದ್ಯೆಯಲ್ಲಿ ಭವ್ಯವಾದ ರಾಮಮಂದಿರ ನಿರ್ಮಾಣಕ್ಕೆ ಅಡಿಗಲ್ಲು ಇಟ್ಟು ಭವ್ಯ ಮಂದಿರ ನಿರ್ಮಾಣಕ್ಕೆ ಮುಂದಾಗಿದ್ದಾರೆಂದರು. ಕಾಂಗ್ರೇಸ್‍ನವರು ತಿರುಕನ ಕನಸ್ಸು ಕಾಣುತ್ತಿದ್ದಾರೆ ನಾನು ಮುಖ್ಯಮಂತ್ರಿ, ನಾನು ಮುಖ್ಯಮಂತ್ರಿ ಎಂದು ಸೂಟು ಬೂಟು ಹಾಕಿಕೊಂಡು ಪಾಳೆ ಹಚ್ಯಾರ ಅದು ಕನಸ್ಸು ನನಸ್ಸಾಗುವದಿಲ್ಲಾ ರಾಜ್ಯದಲ್ಲಿ ಮುಂದೆಂದು ಕಾಂಗ್ರೇಸ್ ಅಧಿಕಾರಕ್ಕೆ ಬರಲು ಸಾದ್ಯವಿಲ್ಲಾ ಕರ್ನಾಟಕದಲ್ಲಿ ಬಿಜೆಪಿ ಇಲ್ಲಿಯವರೆಗೆ 104, 110 ಸೀಟುಗಳನ್ನು ಗೆಲ್ಲುತ್ತಾ ಬಂದಿದ್ದೇವೆ ಈ ಭಾರಿ 140 ಕ್ಕೂ ಅಧಿಕ ಸೀಟು ಗೆಲ್ಲುವ ಮೂಲಕ ಅಧಿಕಾರಕ್ಕೆ ಬರಲಿದ್ದೇವೆ ಹೀಗಾಗಿ 140 ಸೀಟುಗಳಲ್ಲಿ ಈ ಭಾರಿಯ ಚುನಾವಣೆಯಲ್ಲಿ ಮುದ್ದೇಬಿಹಾಳ ಕ್ಷೇತ್ರ ಮೊದಲನೇ ಸ್ಥಾನದಲ್ಲಿರಬೇಕೆಂದು ಶಾಸಕ ಎ.ಎಸ್.ಪಾಟೀಲ(ನಡಹಳ್ಳಿ) ಅವರ ಗೆಲುವಿಗೆ ಮುಂದಾಗಲು ಮತದಾರರಲ್ಲಿ ಮನವಿ ಮಾಡಿದರು.
ಇದೇ ಸಮಯದಲ್ಲಿ ಜಲಸಂಪನ್ಮೂಲ ಸಚಿವ ಗೋವಿಂದ ಕಾರ್ಜೋಳ, ಕೈಗಾರಿಕ ಸಚಿವ ಮುರುಗೇಶ ನಿರಾಣಿ, ಶಾಸಕ ಎ.ಎಸ್.ಪಾಟೀಲ(ನಡಹಳ್ಳಿ), ಬಿಜೆಪಿ ಜಿಲ್ಲಾ ಅಧ್ಯಕ್ಷ ಆರ್.ಎಸ್.ಪಾಟೀಲ(ಕೂಚಬಾಳ), ಜಂಗಮ ಸಮಾಜದ ಗೌರವಾಧ್ಯಕ್ಷ ಚಬನೂರಿನ ಜ್ಯೋತಿಷ್ಯ ರತ್ನ ಶ್ರೀ ರಾಮಲಿಂಗಯ್ಯ ಮಹಾಸ್ವಾಮಿಗಳು, ಕೊಡೇಕಲ್ಲ ದುರದುಂಡೇಶ್ವರ ಮಠದ ಶ್ರೀ ಶಿವಕುಮಾರ ಮಹಾಸ್ವಾಮಿಗಳು, ಕಲಕೇರಿಶ್ರೀಗಳು, ನಾವದಗಿ ಶ್ರೀ ರಾಜೇಂದ್ರ ಒಡೆಯರಶ್ರೀಗಳು, ಅವರು ಅಶ್ವಾರೂಡ ಬಸವೇಶ್ವರರ ಮಹಾ ಮೂರ್ತಿಗೆ ಪುಷ್ಪಾರ್ಚನೆ ಮಾಡಿ ಪೂಜೆ ಸಲ್ಲಿಸಿದರು.
ಈ ಸಮಯದಲ್ಲಿ ಬಸವೇಶ್ವರರ ವೃತ್ತ ಸಮಿತಿಯ ಸದಸ್ಯರು, ಬಸವಾಭಿಮಾನಿಗಳು, ಸಾರ್ವಜನಿಕರು, ವಿವಿಧ ಗ್ರಾಮ ಪಟ್ಟಣಗಳಿಂದ ಆಗಮಿಸಿದ ನಾಗರಿಕರು, ಉಪಸ್ಥಿತರಿದ್ದರು.