ನಡವಿ ಗ್ರಾಮದಲ್ಲಿ ಎಂ.ಸೂಗೂರು ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಲೋತ್ಸವ ”


ಸಂಜೆವಾಣಿ ವಾರ್ತೆ
ಸಿರಿಗೇರಿ ಸೆ.9. ಸಮೀಪದ ನಡವಿ ಗ್ರಾಮದ ಸರ್ಕಾರಿ ಕಿರಿಯ ಮತ್ತು ಹಿರಿಯ ಪ್ರಾಥಮಿಕ ಶಾಲೆಗಳ ಸಹಯೋಗದಲ್ಲಿ, ಸ.ಹಿ.ಪ್ರಾ.ಶಾಲೆ ಆವರಣದಲ್ಲಿ ಎಂ.ಸೂಗೂರು ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮ ಸೆ.8ರಂದು ನಡೆಯಿತು. ಶಾಲೆಯ ಎಸ್‍ಡಿಎಂಸಿ ಅಧ್ಯಕ್ಷ ಎಚ್.ಹುಲೇಶ್ ಕಾರ್ಯಕ್ರಮ ಉದ್ಘಾಟಿಸಿ ಚಾಲನೆ ನೀಡಿದರು. ಉದ್ಘಾಟನೆ ನಂತರ ಇಸಿಓ ಪಂಪಾಪತಿಹಳೆಮನೆ, ಬಿಆರ್‍ಬಿ ವೀರೇಶ್ ಇವರು ಮಾತನಾಡಿ ಇತ್ತೀಚಿನ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ತೋರಿದವರ ಪೈಕಿ ಹೆಚ್ಚಾಗಿ ಗ್ರಾಮೀಣ ಭಾಗದಿಂದ ಹೋದವರೇ ಹೆಚ್ಚು. ನಾಟಕ, ಚಿತ್ರಕಲೆ, ಸಂಗೀತ, ಟಿ.ವಿ. ಸಿನಿಮಾ ಮತ್ತು ಸಾಂಸ್ಕøತಿಕ ಕ್ಷೇತ್ರಗಳಲ್ಲಿ ಹಾಡುಗಾರಿಕೆ, ಕರಕುಶಲತೆ, ನೃತ್ಯ, ಅಭಿನಯ, ಭಾಷಣ, ಹಾಸ್ಯಗಳನ್ನು ಅನಾವರಣಗೊಳಿಸಿ ಬದುಕು ಕಟ್ಟಿಕೊಂಡವರನ್ನು ಕಾಣಬಹುದು. ನಾವುಗಳು ಮಕ್ಕಳಲ್ಲಿನ ಪ್ರತಿಭೆಗಳನ್ನು ಬೆಳೆಸುವ ಕೆಲಸ ಮಾಡಬೇಕೆಂದು ತಿಳಿಸಿದರು. ನಂತರ ಸ.ಹಿ.ಪ್ರಾ.ಶಾಲೆಯ ಎಸ್‍ಡಿಎಂಸಿ ಅಧ್ಯಕ್ಷ ನಾಗರಾಜಗೌಡ ಇವರು ಮಾತನಾಡಿ ನಮ್ಮ ಗ್ರಾಮದಲ್ಲಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮ ಹಮ್ಮಿಕೊಂಡಿರುವುದು ಸಂತಸ ತಂದಿದೆ. ವಿದ್ಯಾರ್ಥಿಗಳ ಕಲಿಕೆಗೆ ಪೂರಕವಾಗುವ ಯಾವುದೇ ಕಾರ್ಯಕ್ರಮಗಳನ್ನು ನಡೆಸಿಕೊಡಲು ನಮ್ಮ ಸಹಕಾರ ಇರುತ್ತದೆಂದು ತಿಳಿಸಿದರು. ನಂತರ ವಿದ್ಯಾರ್ಥಿಗಳಿಂದ ವಿವಿಧ ಕಲೆಗಳ ಪ್ರದರ್ಶನ ಕಾರ್ಯಕ್ರಮ ಮುಂದುವರಿಯಿತು. ಕಾರ್ಯಕ್ರಮದಲ್ಲಿ ಗ್ರಾ.ಪಂ.ಸದಸ್ಯರಾದ ರಾಮಲಿಂಗಸ್ವಾಮಿ, ವಿ.ಬಸವರಾಜ, ಜಡೆಪ್ಪ, ಮುಖಂಡರಾದ ಆರ್.ಮಲ್ಲಿಕಾರ್ಜುನಗೌಡ, ಜಡೇಶಗೌಡ, ಶ್ರೀನಿವಾಸಬಾಬು, ವೀರೇಶಪ್ಪ, ಕನಕಪ್ಪ, ಕ.ರಾ.ಪ್ರಾ.ಶಾ.ಶಿ ಸಂಘದ ತಾ.ಘಟಕದ ಕಾರ್ಯದರ್ಶಿ ವೈ.ಹನುಮನಗೌಡ, ಸಂಘಟನಾ ಕಾರ್ಯದರ್ಶಿ ರಾಧಾ, ಉಭಯ ಶಾಲೆಗಳ ಮುಖ್ಯಗುರುಗಳಾದ ಕೆ.ಎಂ.ಬಸವರಾಜಯ್ಯ, ಮಂಜಪ್ಪ, ಎಂ.ಸೂಗೂರು ಕ್ಲಸ್ಟರ್ ಸಿಆರ್‍ಪಿ ಪ್ರಭುರಾಜ, ಸಿರಿಗೇರಿ ಕ್ಲಸ್ಟರ್‍ನ ಸಿಆರ್‍ಪಿ ಅರುಣಕುಮಾರ್, ಎಲ್ಲಾ ಶಾಲೆಗಳ ಮುಖ್ಯಗುರುಗಳು, ಸಹಶಿಕ್ಷಕರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಸಿರಿಗೇರಿ ಹಾಗೂ ಕೆಂಚನಗುಡ್ಡ ಕ್ಲಸ್ಟರ್‍ನ ಶಿಕ್ಷಕರು ತೀರ್ಪುಗಾರರಾಗಿ ಕಾರ್ಯ ನಿರ್ವಹಿಸಿದರು.