ನಡವಿಯಲ್ಲಿ ರಾಮಲಿಂಗೇಶ್ವರ ಜಾತ್ರಾ ಮಹೋತ್ಸವ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಮೇ.11: ಜಿಲ್ಲೆಯ ಸಿರುಗುಪ್ಪ ತಾಲೂಕಿನ ನಡವಿ ಗ್ರಾಮದಲ್ಲಿ ಪ್ರತಿ ವರ್ಷದಂತೆ ಗ್ರಾಮದ ಆರಾಧ್ಯದೈವ ರಾಮಲಿಂಗೇಶ್ವರನ ಜಾತ್ರಾ ಮಹೋತ್ಸವ ಬಾವ ಜಯಂತಿ ಅಂಗವಾಗಿ ನಿನ್ನೆ ಸಂಜೆ ನಡೆಯಿತು.
ಬೆಳಿಗ್ಗೆ ರಾಮಲಿಂಗೇಶ್ವರ ಮೂರ್ತಿಯ ಪಲ್ಲಕ್ಕಿ ಮೆರವಣಿಗೆ ಹಾಗು ಗಂಗೆ ಪೂಜೆ ಜೊತೆ ಮಡಿ ರತೋತ್ಸವ ನಡೆಯಿತು.
ಸಂಜೆ ಕಳೆದ ದಿನಗಳ ಕಾಲ ಗ್ರಾಮದಲ್ಲಿ ಸ್ಥಳೀಯ ಮಠದ ಶ್ರೀಗಳಾದ ಗೌರಯ್ಯಸ್ವಾಮಿ ಅವರ ಸಾನಿಧ್ಯದಲ್ಲಿ ಗೂಳ್ಯಂ ಗಾದಿಲಿಂಗೇಶ್ವರನ ಪುರಾಣ ಪ್ರವಚನದ ಸಮಾರೋಪ ನಡೆಯಿತು.
ಜಾತ್ರಾಮಹೋತ್ಸವಕ್ಕೆ ಸುತ್ತಮುತ್ತಲ ಗ್ರಾಮಗಳ ಜನತೆ ಸೇರಿ ಗ್ರಾಮದ ಹೊಸ ಊರಿನ ವರೆಗೆ ಎಳೆದು ಮಟ್ಟಿ ಬಸವಣ್ಣನಿಗೆ ಕಾಯಿ ಸಮರ್ಪಿಸಿ ಹಳೇ ಗ್ರಾಮಕ್ಕೆ ಎಳೆದು ತಂದು ನಿಲ್ಲಿಸಲಾಯ್ತು.
ಗ್ರಾಮದ ಹಿರಿಯರಾದ ಗೌರಯ್ಯ ಸ್ವಾಮಿ, ನಟರಾಜ್ ಸ್ವಾಮಿ, ಬಿ.ರುದ್ರಗೌಡ, ಹೆಚ್. ವೀರನಗೌಡ, ಶಂಕರಗೌಡ, ಹಚ್ವೊಳ್ಳಿ ಪುರುಷೋತ್ತಮಗೌಡ, ಕಾರಮಿಂಚಿಗೌಡ, ರಾಮಲಿಂಗನಗೌಡ ಮೊದಲಾದವರು ಪಾಲ್ಗೊಂಡಿದ್ದರು.