ನಟ ಸೋನು ಸೂದ್ ನಿವಾಸದ ಮೇಲೆ ಐಟಿ ದಾಳಿ

ಮುಂಬೈ, ಸೆ.15- ಬಾಲಿವುಡ್ ನಟ ಸೋನು ಸೂದ್ ನಿವಾಸದ ಅವರ ನಿವಾಸ ಹಾಗೂ ಅವರಿಗೆ ಸಂಬಂಧಿಸಿದ ಲಖನೌ ಕಂಪನಿಗಳ ಮೇಲೆ ಕೇಂದ್ರ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿ ಕಡತಗಳನ್ನು ಪರಿಶೀಲನೆ ನಡೆಸಿದರು.
ಸೋನು ಅವರು ಆದಾಯ ತೆರಿಗೆ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾರೆ ಎಂಬ ಆರೋಪಗಳ ಹಿನ್ನಲೆಯಲ್ಲಿ ಈ ದಾಳಿ ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಈ ದಾಳಿಯನ್ನು ನಟ ಖಚಿತಪಡಿಸಿಲ್ಲ.
ಇತ್ತೀಚೆಗೆ ಸೋನು ಸೂದ್ ಅವರನ್ನು ದೆಹಲಿ ಸರ್ಕಾರ ದೇಶ್ ಕಿ ಮೆಂಟರ್ ರಾಯಭಾರಿಯನ್ನಾಗಿ ಮಾಡಿತ್ತು.
ಈ ವಿಚಾರವಾಗಿ ನಿನ್ನೆಯಷ್ಟೇ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರನ್ನು ಭೇಟಿಯಾಗಿ ಸಮಾಲೋಚನೆ ನಡೆಸಿದ್ದರು. ಇದರ ಬೆನ್ನ ಹಿಂದೆಯೇ ಐಟಿ ದಾಳಿ ನಡೆದಿದೆ.
48 ವರ್ಷ ವಯಸ್ಸಿನ ನಟ ಸೋನು ಸೂದ್ ಇತ್ತೀಚೆಗೆ ಸಾಕಷ್ಟು ಸಾಮಾಜಿಕ ಸೇವೆಗಳಿಂದ ಅನೇಕ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಕೊರೊನಾ ಲಾಕ್‌ಡೌನ್‌ ನಂತರ ಅವರು ಮಾಡಿದ ಸಾಮಾಜಿಕ ಸೇವೆ ಅವರಿಗೆ ಸಾಕಷ್ಟು ಜನಮನ್ನಣೆ ತಂದು ಕೊಟ್ಟಿದೆ.