ನಟ ಸೈಫ್ ಅಲಿ ಖಾನ್ ಪುತ್ರಿ ಸಾರಾ ಬಳಿ ಡ್ರಗ್ ಪಡೆದುಕೊಂಡಿದ್ದ ರಿಯಾ

ಮುಂಬೈ,ಸೆ.14-ನ್ಯಾಯಾಂಗ ಬಂಧನದಲ್ಲಿರುವ ನಟಿ ರಿಯಾ ಚಕ್ರವರ್ತಿ ಹಲವು ಬಾರಿ ನಟ ಸೈಫ್ ಅಲಿ ಖಾನ್ ಪುತ್ರಿ ನಟಿ, ಸಾರಾ ಬಳಿ ಡ್ರಗ್ ಪಡೆದುಕೊಂಡಿದ್ದ ಮಾಹಿತಿ ಬಹಿರಂಗ ಗೊಂಡಿದೆ.
ಸಾರಾ ಅಲಿ ಖಾನ್ ಓರ್ವ ಹೈ ಪ್ರೊಫೈಲ್ ಡ್ರಗ್ಸ್ ಪೆಡ್ಲರ್ ಜೊತೆ ನಿಕಟ ಸಂಪರ್ಕದಲ್ಲಿದ್ದರು ಎಂಬ ಆರೋಪಗಳು ಸಹ ಕೇಳಿ ಬಂದಿವೆ.
ಸಾರಾಳಿಂದ ಡ್ರಗ್ಸ್ ಪಡೆದುಕೊಳ್ಳುತ್ತಿದ್ದ ರಿಯಾ ಅದನ್ನು ಗೆಳೆಯ, ನಟ ಸುಶಾಂತ್ ಸಿಂಗ್ ರಜಪೂತ್ ಗೆ ತಲುಪಿಸುತ್ತಿರುವ ಬಗ್ಗೆ ವರದಿಗಳು ಪ್ರಕಟವಾಗಿವೆ. ಸಾರಾ ಜೊತೆ ಸಂಪರ್ಕ ಹೊಂದಿದ್ದ ಡ್ರಗ್ ಪೆಡ್ಲರ್ ಬಂಧನಕ್ಕಾಗಿ ಎನ್‍ಸಿಬಿ ಅಧಿಕಾರಿಗಳು ಬಲೆ ಬೀಸಿದ್ದಾರೆ. ಎನ್‍ಸಿಬಿ ಮತ್ತೆ ಡ್ರಗ್ಸ್ ಕೇಸ್ ನಲ್ಲಿ ಕರಮ್ಜಿತ್ ಸಿಂಗ್ ಆನಂದ್, ಡ್ವೇನ್ ಫರ್ನಾಂಡೀಸ್, ಸಂಕೇತ್ ಪಟೇಲ್, ಅಂಕುಶ್ ಅನರೇಜಾ, ಸಂದೀಪ್ ಗುಪ್ತಾ ಮತ್ತು ಅಫ್ತಾಬ್ ಅನ್ಸಾರಿ ಆರು ಜನ ಬಂಧನವಾಗಿದೆ. ಸುಶಾಂತ್ ಸಿಂಗ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್‍ಸಿಬಿ ಅಧಿಕಾರಿಗಳು ರಿಯಾ ಸೇರಿದಂತೆ ಒಟ್ಟು 16 ಜನರನ್ನ ಬಂಧಿಸಿದೆ. 
ಬಂಧಿಯ ಕರಮ್ಜಿತ್ ಸಿಂಗ್ ಆನಂದ್ ವಿದೇಶದಿಂದ ಡ್ರಗ್ ಆಮದು ಮಾಡಿಕೊಂಡು ಸಿನಿಮಾ ರಂಗದಲ್ಲಿರುವವರಿಗೆ ಪೂರೈಕೆ ಮಾಡುತ್ತಿದ್ದನು. ಫನಾರ್ಂಡಿಸ್ ಗಾಂಜಾ ಮತ್ತು ಚರಸ್ ವ್ಯಾಪಾರಿಯಾಗಿದ್ದನು. ರಿಯಾ ಚಕ್ರವರ್ತಿಯ ಆಪ್ತ ವಲಯದಲ್ಲಿಯೂ ಫರ್ನಾಂಡಿಸ್ ಗುರುತಿಸಿಕೊಂಡಿದ್ದನು. ರಿಯಾ ಮಾತ್ರವಲ್ಲದೇ ಹಲವು ತಾರೆಯರಿಗೆ ಫರ್ನಾಂಡೀಸ್ ಡ್ರಗ್ಸ್ ಸರಬರಾಜು ಮಾಡುತ್ತಿರುವ ಬಗ್ಗೆ ಎನ್‍ಸಿಬಿ ಶಂಕೆ ವ್ಯಕ್ತಪಡಿಸಿದೆ. 
ಡ್ರಗ್ಸ್ ಪ್ರಕರಣದಲ್ಲಿ ಸಾರಾ ಅಲಿ ಖಾನ್ ಮತ್ತು ರಕುಲ್ ಪ್ರೀತ್ ಸಿಂಗ್‍ಗೆ ಎನ್‍ಸಿಬಿ ಸಮನ್ಸ್ ನೀಡಿದೆ ಎಂದು ಹೇಳಲಾಗಿದೆ. ಸುಶಾಂತ್ ಅಭಿನಯದ ‘ಕೇದಾರನಾಥ್’ ಸಿನಿಮಾದ ಮೂಲಕ ಸಾರಾ ಬಾಲಿವುಡ್ ಅಂಗಳಕ್ಕೆ ಪಾದಾರ್ಪಣೆ ಮಾಡಿದ್ದರು.