ನಟ ಸುಣಗದಗೆ ‘ರಂಗ ಸ್ನೇಹಿತ’ ಪ್ರಶಸ್ತಿ


ಧಾರವಾಡ ಮಾ.26-ಕರ್ನಾಟಕ ನಾಟಕ ಅಕಾಡೆಮಿ, ಬೆಂಗಳೂರು ಹಾಗೂ ಸ್ನೇಹಿತರು ಕಲಾಸಂಘ(ರಿ), ಧಾರವಾಡ ಇವರ ಆಶ್ರಯದಲ್ಲಿ ವಿಶ್ವರಂಗಭೂಮಿ ದಿನಾಚರಣೆ ನಿಮಿತ್ತ 2021ನೇ ಸಾಲಿನ ಸಮಾರಂಭ ನಾಳೆ ಸಾಯಂಕಾಲ 5.30ಕ್ಕೆ ಡಾ: ಪಾಟೀಲ ಪುಟ್ಟಪ್ಪ ಸಭಾಭವನ, ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಜರುಗಲಿದೆ ಎಂದು ಸ್ನೇಹಿತರು ಕಲಾ ಸಂಘದ ಅಧ್ಯಕ್ಷ ವಿಜಯೇಂದ್ರ ಅರ್ಚಕ ತಿಳಿಸಿದರು.
ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ ಈ ಬಾರಿಯ ರಂಗ ಸ್ನೇಹಿತ ಪ್ರಶಸ್ತಿ ಸಾಮಾಜಿಕ, ಪೌರಾಣಿಕ, ಇತಿಹಾಸಿಕ ಹಲವಾರು ನಾಟಕಗಳಲ್ಲಿ ತಮ್ಮದೆ ವಿಶೇಷ ಛಾಪು ಮೂಡಿಸಿರುವ ಗ್ರಾಮೀಣ ರಂಗಭೂಮಿಯ ಹಿರಿಯ ನಟ ಹನಮಂತ ನಿಂಗಪ್ಪ ಸುಣಗದ ಇವರಿಗೆ ನೀಡಿ ಗೌರವಿಸಲಾಗುವುದು ಎಂದರು.
ಕಾರ್ಯಕ್ರಮ ಉಧ್ಘಾಟಿನೆ ಪ್ರೊ.ಎಸ್.ವಿ.ಸಂಕನೂರ, ವಿಧಾನ ಪರಿಷತ್ ಸದಸ್ಯರು, ಕರ್ನಾಟಕ ಸರಕಾರ, ಮುಖ್ಯ ಅತಿಥಿಗಳಾಗಿ ಡಾ: ಹೇಮಾ ಪಟ್ಟಣಶೆಟ್ಟಿ, ಖ್ಯಾತ ಸಾಹಿತಿಗಳು ಶಿವಣ್ಣ ಅದರಗುಂಚಿ, ಸದಸ್ಯರು ಕರ್ನಾಟಕ ನಾಟಕ ಅಕಾಡೆಮಿ, ಧಾರವಾಡ, ರಮೇಶ ಎಸ್.ಪರವಿನಾಯ್ಕರ, ನಿರ್ದೇಶಕರು, ರಂಗಾಯಣ, ಧಾರವಾಡ ಇವರು ವಹಿಸಲಿದ್ದು, ವಿಜಯೀಂದ್ರ ಅರ್ಚಕ, ಅಧ್ಯಕ್ಷರು, ಸ್ನೇಹಿತರು ಕಲಾ ಸಂಘ, ಧಾರವಾಡ ಇವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ನಂತರ ವಿಜಯೀಂದ್ರ ಅರ್ಚಕರವರ ಪರಿಕಲ್ಪನೆ, ನಿರ್ದೇಶನದಲ್ಲಿ ಸೋಮು ರೆಡ್ಡಿ ಇವರು ರಚಿಸಿದ “ದ್ವಂದ್ವ” ನಾಟಕ ಪ್ರದರ್ಶನಗೊಳ್ಳಲಿದೆ. ರಂಗದ ಮೇಲೆ ಸಿ.ಎಸ್.ಪಾಟೀಲ ಕುಲಕರ್ಣಿ, ಪವನ ದೇಶಪಾಂಡೆ, ಕುಮಾರಿ ರತ್ನಾ ಅರ್ಚಕ, ರುತ್ವಿಕ್ ಹಿರೇಮಠ ಹಾಗೂ ವಿಜಯೀಂದ್ರ ಅರ್ಚಕ ಅಭಿನಯಿಸಲಿದ್ದಾರೆ. ರಂಗದ ಹಿಂದೆ ಸಂಗೀತ ಡಾ:ಶ್ರೀಧರ ಕುಲಕರ್ಣಿ, ಪ್ರಸಾಧನ
ಸಂತೋಷ ಮಹಾಲೆ, ಬೆಳಕು ಕಿಟ್ಟಿ ಗಾಂವಕರ, ವಸ್ತ್ರ ವಿನ್ಯಾಸ ಕುಮಾರಿ ರತ್ನಾ ಅರ್ಚಕ.
ಪ್ರೇಕ್ಷಕ ಕಲಾವಿದರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕು ಎಂದು ಅಧ್ಯಕ್ಷರಾದ ವಿಜಯೀಂದ್ರ ಅರ್ಚಕ ಹಾಗೂ ಸಂಘಟನಾ ಕಾರ್ಯದರ್ಶಿ ಸಂತೋಷ ಗಜಾನನ ಮಹಾಲೆ ಈ ಮೂಲಕ ವಿನಂತಿಸಿಕೊಂಡಿದ್ದಾರೆ.