ನಟ ಶಿವರಾಜ್ ಕುಮಾರ್ ಹುಟ್ಟುಹಬ್ಬ ಆಚರಣೆ

ರಾಯಚೂರು,ಜು.೧೨-
ಇಂದು ನಗರದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ೬೧ ಹುಟ್ಟುಹಬ್ಬದ ಸಂದರ್ಭವಾಗಿ ಡಾಕ್ಟರ್ ಪುನೀತ್ ರಾಜಕುಮಾರ್ (ಅಪ್ಪು) ಚಾರಿಟೇಬಲ್ ಟ್ರಸ್ಟ್ ರಾಯಚೂರು ವತಿಯಿಂದ
ನಗರದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಮೈಲಾರ ನಗರದಲ್ಲಿ ಆಚರಿಸಲಾಯಿತು.
ಈ ಸಂಧರ್ಭದಲ್ಲಿ ಟ್ರಸ್ಟ್ ಅಧ್ಯಕ್ಷರಾದ ಸಾದಿಕ್ ಖಾನ್ ಅವರು ಶಾಲೆಯ ವಿದ್ಯಾರ್ಥಿಗಳಿಗೆ ಉಚಿತವಾಗಿ ನೋಟ್ ಬುಕ್ ಮತ್ತು ಪೆನ್ ವಿತರಣೆ ಮಾಡಿದರು.
ಈ ಸಂದರ್ಭದಲ್ಲಿ ಟ್ರಸ್ಟ್ ಅಧ್ಯಕ್ಷರಾದ ಸಾದಿಕ್ ಖಾನ್, ಬಿ. ಸುರೇಶ, ನಸೀರ್, ತಿಮ್ಮ ರೆಡ್ಡಿ, ಜಿಲನ್, ಉಸ್ಮಾನ್, ನರಸರೆಡ್ಡಿ, ಸಾಗರ ಮತ್ತಿತರರು ಈ ಸಮಯದಲ್ಲಿ ಉಪಸ್ಥಿತರಿದ್ದರು.