ನಟ ಶಂಕರ್ ನಾಗ್ ಜನ್ಮದಿನಾಚರಣೆ


ದಾವಣಗೆರೆ.ನ.೯:  ಈ ಲೋಕಕ್ಕೆ ಬರುವಾಗ ಹಾಗೂ ಹೋಗುವಾಗ ಜನನ, ಮರಣ ಎಂಬ ಮೂರು ಅಕ್ಷರದಿಂದ ಬಂದು ಹೋಗುತ್ತೇವೆ ನಡುವೆ 3 ಅಕ್ಷರದ ಜೀವನ ಎಂಬುದು ಮುಖ್ಯವಾಗಿದೆ ಎಂದು ವಿರಕ್ತ ಮಠದ ಬಸವ ಪ್ರಭು ಮಹಾಸ್ವಾಮಿಗಳು ತಿಳಿಸಿದರು. ಎಸ್ ಪಿ ಕಚೇರಿ ಮುಂಭಾಗದಲ್ಲಿ ಗೋಪಿಕಾ ಡ್ರೈವಿಂಗ್ ಶಾಲೆ ಹಾಗೂ ಆಟೋ ಕನ್ಸ್ ಲೆಂಟ್ ಕಚೇರಿ ಉದ್ಘಾಟನೆ ಮತ್ತು ಶಂಕರನಾಗ್ ಹಾಗೂ ಭಗತ್ ಸಿಂಗ್  ಹುಟ್ಟುಹಬ್ಬ ಆಚರಣೆ ವೇಳೆ ಈ ವಿಷಯ ತಿಳಿಸಿದರು. ಮನುಷ್ಯ ಇಂದು ದುರಾಸೆಗೆ ತುತ್ತಾಗುತ್ತಿದ್ದಾನೆ ಅವಶ್ಯಕತೆಗಿಂತ ಹೆಚ್ಚು ಸಂಪಾದನೆ ಮಾಡಲು ಮುಂದಾಗಿ ತಮ್ಮ ಜೀವನವನ್ನೇ  ಹಾಳು ಮಾಡಿಕೊಳ್ಳುತ್ತಿದ್ದಾನೆ. ಅಪರಾಧ, ಭ್ರಷ್ಟಾಚಾರ ಮಾಡಿ ಕಾರಾಗೃಹದ ಕಡೆ ನಡೆಯುವಂತುವುದು ಹೆಚ್ಚಾಗಿದೆ ಎಂದರು.

ಮನುಷ್ಯ ಜೀವನದಲ್ಲಿ ಉತ್ತಮ ಕೆಲಸ ಮಾಡಬೇಕು ಬಸವಣ್ಣನವರು ಹುಟ್ಟಿ 900 ವರ್ಷಗಳಾದರು ಇಂದು ಅವರನ್ನ ಸ್ಮರಿಸುತ್ತೇವೆ ಮಹತ್ವರನ್ನ ಇಂದಿಗೂ ನೆನಪಿಸಿಕೊಳ್ಳುತ್ತೇವೆ ಎಂದರೆ ಅವರು ಮಾಡಿಕ ಒಳ್ಳೆ ಕಾರ್ಯ ಎಂದು ಬಸವಪ್ರಭು ಶ್ರೀಗಳು ಹೇಳಿದರು. ಸಮಾಜಕ್ಕೆ ದೇಶಕ್ಕೆ ಎಷ್ಟು ಒಳ್ಳೆ ಕೆಲಸ ಮಾಡುತ್ತೇವೆ ಅಷ್ಟು ಒಳ್ಳೆಯದಾಗುತ್ತದೆ ಎಂದರು. ಮನೆ ಹಾಗೂ ಸಮಾಜಕ್ಕೆ ಹುಟ್ಟಿದ ಮೇಲೆ ಕೊಡುಗೆ ನೀಡಿದರೆ ನಮ್ಮ ಜೀವನ ಸ‍ರ್ಥಕವಾಗುತ್ತದೆ ಎಂದರು. ಶಂಕರನಾಗ್ ಅವರು ನಮ್ಮ ಜೊತೆ ಇಲ್ಲದಿರಬಹುದು ಅವರ ಅಭಿನಯ ಇಂದಿನ ಜಮನದಲ್ಲಿದೆ ಎಂದು ಆರ್ ಟಿ  ಓ ಇನ್ಸ್ ಪೆಕ್ಟರ್  ಶಾನಭೋಗ್ ಅವರು ತಿಳಿಸಿದರು.  ಮಾಲ್ಗುಡಿ ಡೇಸ್ ನಂತ ಅದ್ಭುತ ಧಾರವಾಹಿ ಮೂಲಕ ಶಂಕರನಾಗ್ ಮನೆ ಮಾತಾಗಿದ್ದರು ಕನ್ನಡ ಚಿತ್ರ ರಂಗವನ್ನ ವಿಶ್ವಮಟ್ಟಕ್ಕೆ ಕೊಂಡುಯ್ಯುವಲ್ಲಿ ಶಂಕರನಾಗ್ ಅವರ ಪಾತ್ರ ಮಹತ್ವದ್ದು ಎಂದರು. ರಕ್ತದಾನಿಯಾದ ಶ್ರೀಕಾಂತ್ ಮಾತಾಡಿ ಮನುಷ್ಯ ಹುಟ್ಟಿದ ಮೇಲೆ ಸಾಮಾಜ ಸೇವೆ ಮಾಡಬೇಕು ಕೊರೊನಾ ಸಂದರ್ಭ ರಕ್ತದ ಅವಶ್ಯಕತೆ ಹೆಚ್ಚಾಗಿದೆ ಎಲ್ಲರೂ ರಕ್ತದಾನ ಮಾಡಿ ಎಂದು ಸಲಹೆ ನೀಡಿದರು. ಅಲ್ಲದೇ ದೇಶಕ್ಕಾಗಿ ಹೋರಾಡಿ ಹುತಾತ್ಮರಾದ ಭಗತ್ ಸಿಂಗ್ ರಂತವರ ಆದರ್ಶಗಳನ್ನ ಎಲ್ಲರೂ ಮೈಗೊಡಿಸಿಕೊಳ್ಳಬೇಕೆಂದರು. ಈ ಸಂದರ್ಭದಲ್ಲಿ ಗೋಪಿಕಾ ಡ್ರೈವಿಂಗ್ ಸ್ಕೂಲ್ ಮತ್ತು ಆನ್ ಲೈನ್ ಕನ್ಸ್ ಲೆಂಟ್ಸ್ ಮಾಲೀಕರಾದ ನಾಗರಾಜ್, ಹಂಸ ಟಿವಿ ಮಾಲೀಕರಾದ ಮಾಲತೇಶ್ ಹಾಗೂ ಸುದ್ದಿ ಪಾರಿಜಾತ ಪತ್ರಿಕೆ ಸಂಪಾದಕರಾದ ಅಶೋಕ್ ಯಡೆಹಳ್ಳಿ ಸೇರಿದಂತೆ ಸಿಬ್ಬಂದಿಗಳು ಹಿತೈಷಿಗಳು ಉಪಸ್ಥಿತರಿದ್ದರು.