ನಟ ವಿನೋದ್ ರಾಜ್ ಹೆಸರಲ್ಲಿ ನಕಲಿ ಫೇಸ್ ಬುಕ್ ಖಾತೆ: ದೂರು ದಾಖಲು

ಬೆಂಗಳೂರು, ನ 14 -ಅಭಿನಯದಿಂದ ದೂರವುಳಿದು ಕೃಷಿ ಕಾಯಕವಾಯಿತು, ತಾವಾಯಿತು ಎಂಬಂತಿರುವ ನಟ ವಿನೋದ್ ರಾಜ್ ಹೆಸರಿನಲ್ಲಿ ನಕಲಿ ಫೇಸ್ ಬುಕ್ ಖಾತೆ ತೆರೆದು ಅಶ್ಲೀಲ ಭಾವಚಿತ್ರಗಳನ್ನು ಅಪ್‍ ಲೋಡ್ ಮಾಡಲಾಗುತ್ತಿದೆ.

ಈ ಕುರಿತು ಸ್ವತಃ ನಟ ವಿನೋದ್ ರಾಜ್ ಈಗಾಗಲೇ ಉತ್ತರ ಸಿಎಎನ್ ಪೊಲೀಸ್‍ ಠಾಣೆಯಲ್ಲಿ ದೂರು ದಾಖಲಿಸಿ, ವಿಕೃತ ಕಿಡಿಗೇಡಿಗಳ ವಿರುದ್ದ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.

ಹಿರಿಯ ನಟಿ ಲೀಲಾವತಿಯವರ ಪುತ್ರ ವಿನೋದ್‍ ರಾಜ್ ಅವರು ಸಾಮಾಜಿಕ ಜಾಲತಾಣದಲ್ಲಿ ಅಷ್ಟೇನೂ ಆ್ಯಕ್ಟೀವ್ ಆಗಿಲ್ಲ. ಆದಗ್ಯೂ ಹೆಣ್ಣುಮಕ್ಕಳ ಆಶ್ಲೀಲ, ಅರೆನಗ್ನ ಫೋಟೋಗಳನ್ನು, ಅಸಭ್ಯ ಬರಹಗಳನ್ನು ಅಪ್ ಲೋಡ್ ಮಾಡಿ ಅವರ ಹೆಸರಿಗೆ ಮಸಿ ಬಳಿಯುವ ಕೆಲಸ ನಡೆಯುತ್ತಿದೆ.

ದೂರು ದಾಖಲಿಸಿಕೊಂಡಿರುವ ಪೊಲೀಸರು, ವಿಕೃತ ಮನಸ್ಕರ ಪತ್ತೆಗೆ ಕ್ರಮ ಕೈಗೊಂಡಿದ್ದಾರೆ