ನಟ ವಿಜಯ್ ದೇವರಕೊಂಡ ನಟನೆಯ ‘ಲೈಗರ್’ ಚಿತ್ರದ ಟ್ರೇಲರ್ ಬಿಡುಗಡೆ

ಹೈದರಾಬಾದ್ , ಜು ೨೧- ಟಾಲಿವುಡ್ ನ ಮೋಸ್ಟ್ ಹ್ಯಾಂಡ್ ಸಮ್ ನಟ ವಿಜಯ್ ದೇವರಕೊಂಡ ನಟನೆಯ ‘ಲೈಗರ್’ ಚಿತ್ರದ ಟ್ರೇಲರ್ ಬಹು ಭಾಷೆಗಳಲ್ಲಿ ಬಿಡುಗಡೆಯಾಗಿದೆ.

ಪುರಿ ಜಗನ್ನಾಥ್ ನಿರ್ದೇಶನದ ಚಿತ್ರ ಬಹಳ ಕುತೂಹಲ ಮೂಡಿಸಿದೆ. ವಿಜಯ್ ದೇವರಕೊಂಡ ಜೊತೆಗೆ, ಲೈಗರ್ನಲ್ಲಿ ಅನನ್ಯ ಪಾಂಡೆ, ಮೈಕ್ ಟೈಸನ್ ಮತ್ತು ರಮ್ಯಾ ಕೃಷ್ಣನ್ ನಟಿಸಿದ್ದಾರೆ. ಈ ವರ್ಷದ ಆಗಸ್ಟ್ ೨೫ ರಂದು ಚಿತ್ರ ಬಿಡುಗಡೆಯಾಗಲಿದೆ.

ಮೆಗಾಸ್ಟಾರ್ ಚಿರಂಜೀವಿ ಹಾಗೂ ಪ್ರಭಾಸ್ ಜೊತೆಗೆ ಸೇರಿ ಈ ಸಿನಿಮಾದ ತೆಲುಗು ಟ್ರೈಲರ್ ಅನ್ನು ಬಿಡುಗಡೆ ಮಾಡಿದ್ದಾರೆ. ಇನ್ನು ದುಲ್ಕರ್ ಸಲ್ಮಾನ್ ಮಲಯಾಳಂ ಟ್ರೈಲರ್ ಅನ್ನು ಬಿಡುಗಡೆ ಮಾಡಿದ್ದಾರೆ, ಹಾಗೆಯೇ ಹಿಂದಿಯ ಟ್ರೈಲರ್ ಅನ್ನು ರಣವೀರ್ ಸಿಂಗ್ ಹಿಂದಿ ಟ್ರೈಲರ್ ರಿಲೀಸ್ ಮಾಡಿದ್ದಾರೆ.

ಈ ಟ್ರೈಲರ್ನಲ್ಲಿ ವಿಜಯ್ ದೇವರಕೊಂಡ ಅವರ ಪಾತ್ರವನ್ನು ಅದ್ಭುತವಾಗಿ ಪರಿಚಯ ಮಾಡಿಸಿದ್ದು, ಇದು ನಮ್ಮನ್ನ ವಿಭಿನ್ನ ಲೋಕ್ಕೆ ಕರೆದುಕೊಂಡು ಹೋಗುತ್ತದೆ. ವಿಜಯ್ ದೇವರಕೊಂಡ ಅವರು ಕಣಕ್ಕೆ ಇಳಿಯುವುದರೊಂದಿಗೆ ಇದು ಪ್ರಾರಂಭವಾಗುತ್ತದೆ, ರಮ್ಯಾ ಕೃಷ್ಣನ್ ಅವರ ಧ್ವನಿಯಲ್ಲಿ ತನ್ನ ಮಗನ ಲೈಗರ್’ ಎಂಬ ಹೆಸರಿನ ಹಿಂದಿನ ಕಾರಣವನ್ನು ವಿವರಿಸಲಾಗುತ್ತದೆ. “ನನ್ನ ಮಗ ಕ್ರಾಸ್ ಬ್ರೀಡ್, ಸಿಂಹ ಮತ್ತು ಹುಲಿಗೆ ಜನಿಸಿದವನು” ಎಂದು ಹೇಳುತ್ತಾರೆ. ಬಾಹುಬಲಿ ನಂತರ, ರಮ್ಯಾ ಕೃಷ್ಣನ್ ಮತ್ತೊಂದು ಪ್ಯಾನ್-ಇಂಡಿಯಾ ಚಿತ್ರದಲ್ಲಿ ತಾಯಿಯ ಪಾತ್ರದಲ್ಲಿ ಮರಳಿದ್ದಾರೆ.

ನಿರ್ದೇಶಕ ಪೂರಿ ಜಗನ್ನಾಥ್ ಉತ್ತಮ ತಾರಂಗಣವನ್ನು ಜೋಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಂತಾರಾಷ್ಟ್ರೀಯ ಐಕಾನ್ ಮೈಕ್ ಟೈಸನ್ ಅವರನ್ನು ಈ ಸಿನಿಮಾದಲ್ಲಿ ಕರೆ ತಂದಿದ್ದು, ಇದು ನಿಜಕ್ಕೂ ಒಂದು ಸಾಧನೆ. ವಿಜಯ್ ದೇವರಕೊಂಡ ಅವರನ್ನು ಹಿಂದೆಂದೂ ನೋಡಿರದ ಆಕ್ಷನ್-ಪ್ಯಾಕ್ಡ್ ಅವತಾರದಲ್ಲಿ ತೋರಿಸಿದ್ದಾರೆ. ಲೈಗರ್’ ಸಿನಿಮಾ ತೆರೆಗೆ ಬರಲು ಒಂದು ತಿಂಗಳು ಬಾಕಿ ಇದೆ. ಈ ಚಿತ್ರದ ಬಗ್ಗೆ ಅಭಿಮಾನಿಗಳು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ.