ನಟ ಲೋಹಿತಾಶ್ವ ಅಂತ್ಯಕ್ರಿಯೆ

ಬೆಂಗಳೂರು,ನ.೯- ಅನಾರೋಗ್ಯದಿಂದ ನಿನ್ನೆ ನಿಧನರಾದ ಹಿರಿಯ ನಟ ಲೋಹಿತಾಶ್ವ ಅವರ ಪಾರ್ಥಿವಶರೀರದ ಅಂತ್ಯಕ್ರಿಯೆ ತುಮಕೂರು ತಾಲ್ಲೂಕಿನ ಸ್ವಗ್ರಾಮ ತೊಂಡಗೆರೆಯಲ್ಲಿ ಇಂದು ನಡೆಯಲಿದೆ.
ಸ್ವಗ್ರಾಮದಲ್ಲಿ ಹಿರಿಯ ನಟನ ಅಂತ್ಯಕ್ರಿಯೆನ್ನು ಕುಟುಂಬದ ಸದಸ್ಯರು ಮತ್ತು ಅಭಿಮಾನಿಗಳ ಸಮ್ಮುಖದಲ್ಲಿ ನಡೆಯಲಿದೆ,
ವಯೋಸಹಜ ಖಾಯಿಲೆಯಿಂದ ಬಳಲುತ್ತಿ ಲೋಹಿತಾಶ್ವ ಅವರು ವಿಭಿನ್ನ ಚಿತ್ರಗಳ ಮೂಲಕ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಸ್ಥಾನ ಪಡೆದಿದ್ದರು, ಅನಾರೋಗ್ಯದ ಹಿನ್ನೆಲೆಯಲ್ಲಿ ಕಳೆದ ಒಂದು ತಿಂಗಳಿನಿಂದ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಚಿಕಿತ್ಸೆ ಫಲಕಾರಿಯಾಗದೆ ಅವರು ನಿಧನರಾಗಿದ್ದರು.
ಕನ್ನಡದ ೫೦೦ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಲೋಹಿತಾಶ್ವ ಅವರು ನಟಿಸಿದ್ದರು ಚಿಕ್ಕ ವಯಸ್ಸಿನಿಂದಲೂ ಅವರಿಗೆ ನಟನೆಯಲ್ಲಿ ಆಸಕ್ತಿ ಇತ್ತು. ವಿದ್ಯಾರ್ಥಿ ಆಗಿದ್ದಾಗಿನಿಂದಲೇ ರಂಗಭೂಮಿಯಲ್ಲಿ ತೊಡಗಿಕೊಂಡಿದ್ದರು. ಚಿತ್ರರಂಗದಲ್ಲಿ ಪೊ?ಷಕ ಪಾತ್ರಗಳಲ್ಲಿ ಅವರು ತುಂಬ ಖ್ಯಾತಿ ಪಡೆದಿದ್ದರು.
ಕಳೆದ ಮೂರ್ನಾಲ್ಕು ವರ್ಷದಿಂದ ಯಾವುದೇ ಚಿತ್ರದಲ್ಲಿ ಕಾಣಿಸಿಕೊಳ್ಳದೆ ಚಿತ್ರರಂಗದಿಂದ ದೂರ ಉಳಿದಿದ್ದರು. ಕನ್ನಡ ಚಿತ್ರರಂಗ ಖ್ಯಾತ ನಟರ ಜೊತೆಗೆ ನಟಿಸಿದ ಹೆಗ್ಗಳಿಕೆ ದಿವಂಗತ ನಟ ಶರತ್ ಲೋಹಿತಾಶ್ವ ಅವರದು.
ಕನ್ನಡ ಚಿತ್ರರಂಗದಲ್ಲಿ ಹಿರಿಯ ನಟನ ಅಗಲಿಕೆಯಿಂದ ಕನ್ನಡ ಚಿತ್ರರಂಗದ ಕೊಂಡಿ ಕಳಚಿ ಬಿದ್ದಿದ್ದು ಬಹುಮುಖ ಪ್ರತಿಭೆಯ ನಟ ಇನ್ನೂ ನೆನಪು ಮಾತ್ರ.