ನಟ, ರಾಜಕಾರಣಿ ಶಿವರಾಂಗೆ ಅಂತಿಮ ನಮನ

ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ನಿವೃತ್ತ ಐಎಎಸ್ ಅಧಿಕಾರಿ, ನಟ ಕೆ. ಶಿವರಾಮ್ ಅವರ ಪಾರ್ಥೀವ ಶರೀರವನ್ನು ದರ್ಶನಕ್ಕೆ ಇಡಲಾಗಿದ್ದು, ಸಚಿವ ಪ್ರಿಯಾಂಕ್ ಖರ್ಗೆರವರು ಕೆ. ಶಿವರಾಂ ಪಾರ್ಥೀವ ಶರೀರಕ್ಕೆ ಪುಷ್ಪಗುಚ್ಛ ಇಟ್ಟು ಅಂತಿಮ ನಮನ ಸಲ್ಲಿಸಿದರು.

ಬೆಂಗಳೂರು, ಮಾ.೧- ಹೃದಯಾಘಾತದಿಂದ ನಿನ್ನೆ ನಿಧನರಾದ ನಿವೃತ್ತ ಹಿರಿಯ ಐಎಎಸ್ ಅಧಿಕಾರಿ, ನಟ, ರಾಜಕಾರಣಿ ಕೆ.ಶಿವರಾಮ್ ಅವರ ಪಾರ್ಥೀವ ಶರೀರದ ಅಂತಿಮ ದರ್ಶನಕ್ಕೆ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ವ್ಯವಸ್ಥೆ ಮಾಡಲಾಗಿತ್ತು
ಸಚಿವ ಪ್ರಿಯಾಂಕ ಖರ್ಗೆ, ವಿಧಾನ ಪರಿಷತ್ ಸದಸ್ಯ ಛಲವಾದಿ ನಾರಾಯಣ ಸ್ವಾಮಿ, ಸರ್ಕಾರದ ಅಪರ ಮುಖ್ಯಕಾರ್ಯದರ್ಶಿ ಮಂಜುನಾಥ ಪ್ರಸಾದ್ ಸೇರಿದಂತೆ ಅನೇಕ ರಾಜಕೀಯ ನಾಯಕರು, ಸಿನಿಮಾ ಮತ್ತು ಆಡಳಿತ ಸೇವೆಯ ಹಿರಿಯ ಅಧಿಕಾರಿಗಳು ಅಗಲಿದ ನಾಯಕನ ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆದರು.
ರಾಜಕೀಯ,ಸಿನಿಮಾ ಮತ್ತು ಸಮಾಜಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ ಕೆ.ಶಿವರಾಮ್ ಅವರ ನಿಧನಕ್ಕೆ ಅವರ ಅಪಾರ ಅಭಿಮಾನಿಗಳು ಕಂಬನಿ ಸುರಿಸು ಮೃತರ ಬಗ್ಗೆ ಮೆಚ್ಚುಗೆ ಮಾತನಾಡಿದ್ದಾರೆ.ಕನ್ನಡದಲ್ಲಿ ಐಎಎಸ್ ಪರೀಕ್ಷೆ ಬರೆದು ಐಎಎಸ್ ಆದ ಹಿರಿಮೆಗೆ ಪಾತ್ರರಾಗಿದ್ದ ಕೆ. ಶಿವರಾಮ್ ಅವರು ನಿನ್ನೆ ಹೃದಯಾಘಾತದಿಂದ ನಿಧನರಾಗಿದ್ದರು.ಐಎಎಸ್ ಅಧಿಕಾರಿಯಾಗಿದ್ದ ವೇಳೆ ಸಿನಿಮಾ ದಲ್ಲಿ ನಟಿಸಿ ಸೈ ಎನಿಸಿಕೊಂಡಿದ್ಸರು. ಬಾ ನಲ್ಲೆ ಮಧು ಚಂದ್ರಿಕೆ ಚಿತ್ರದ ಮೂಲಕ ಅಪಾರ ಜನಪ್ರಿಯತೆ ಪಡೆದಿದ್ದರು. ಆ ನಂತರ ಹಲವು ಸಿನಿಮಾಗಳಲ್ಲಿ ನಟಿಸಿದ್ದರು.ಮದ್ಯಾಹ್ನ ೩ ಗಂಟೆಯ ತನಕ ರವೀಂದ್ರ ಕಲಾಕ್ಷೇತ್ರದಲ್ಲಿ ಕೆ. ಶಿವರಾಮ್ ಅವರ ಪಾರ್ಥೀವ ಶರೀರವನ್ನು ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು ಸಂಜೆ ಅಂತ್ಯಕ್ತಿಯೆಯನ್ನು ಕುಟುಂಬದ ಸದಸ್ಯರ ಇಚ್ಚೆಯಂತೆ ನಡೆಸಲಾಗುವುದು ಎಂದು ಕುಟುಂದಬ ಮೂಲಗಳು ತಿಳಿಸಿವೆ
ಕನಸಾಗಿಯೇ ಉಳಿದ ರಾಜಕಾರಣ
ರಾಜಕಾರಣದಲ್ಲಿ ಜನರಿಗೆ ಮತ್ತಷ್ಟು ಸೇವೆ ಸಲ್ಲಿಸುವ ಉದ್ದೇಶದಿಂದ ಅವಧಿಗೆ ಮುನ್ನವೇ ಉನ್ನತ ಹುದ್ದೆಯಲ್ಲಿದ್ದರೂ ಐಎಎಸ್ ಪದವಿಗೆ ರಾಜೀನಾಮೆ ನೀಡಿ ಸ್ವಯಂ ನಿವೃತ್ತಿ ಪಡೆದಿದ್ದರು. ಲೋಕಸಭೆ ಮತ್ತು ವಿಧಾನಸಭೆ ಪ್ರವೇಶಿಸಿ ಜನರ ಸೇವೆ ಮಾಡುವ ಕೆ.ಶಿವರಾಮ್ ಅವರ ಆಸೆ ಕೈಗೂಡದೆ ಕನಸಾಗಿ ಉಳಿದು ಹೋಗಿದೆ.
ನಿನ್ನೆ ಮನೆಯಲ್ಲಿ ದರ್ಶನ
ಹೃದಯಾಘಾತದಿಂದ ನಿನ್ನೆ ಸಂಜೆ ನಿಧನರಾದ ನಿವೃತ್ತ ಐಎಎಸ್ ಅಧಿಕಾರಿ ಶಿವರಾಮ್ ಅವರ ಪಾರ್ಥಿವ ಶರೀರವನ್ನು ಅವರ ನಿವಾಸಕ್ಕೆ ತೆಗೆದುಕೊಂಡು ಹೋಗಿ ವಿಧಿವಿಧಾನ ಪೂರೈಸಲಾಗಿತ್ತು. ಕುಟುಂಬದ ಸದಸ್ಯರು ಮತ್ತು ಅಭಿಮಾನಿಗಳು ದರ್ಶನ ಪಡೆದು ಅಗಲಿದ ನಾಯಕನನ್ನು ನೆನದು ಕಣ್ಣೀರು ಹಾಕಿದರು.
ಈ ನಡುವೆ ಕೆ.ಶಿವರಾಮ್ ಅಭಿಮಾನಿಗಳು ಪ್ರತಿಭಟನೆ ನಡೆಸಿದ ಘಟನೆಯೂ ನಡೆಯಿತು