ನಟ ರಜನಿಕಾಂತ್ ಆಸ್ಪತ್ರೆಯಿಂದ ಬಿಡುಗಡೆ

ಹೈದರಾಬಾದ್, ಡಿ. 27- ರಕ್ತದೊತ್ತಡದಲ್ಲಿ ಏರುಪೇರಾಗಿ ಆಸ್ಪತ್ರೆಗೆ ದಾಖಲಾಗಿದ್ದ ಸೂಪರ್ ಸ್ಟಾರ್ ರಜನಿಕಾಂತ್ ಆಸ್ಪತ್ರೆಯಿಂದ ಇಂದು ಬಿಡುಗಡೆ ಯಾಗಿದ್ದಾರೆ.
ಡಿ.25 ರಂದು ರಕ್ತದೊತ್ತಡದಲ್ಲಿ ಏರುಪೇರಾಗಿದ್ದರಿಂದ ಹೈದರಾಬಾದ್ ನ ಅಪಲೊ ಆಸ್ಪತ್ರೆಗೆ ದಾಖಲಾಗಿದ್ದರು. ಈಗ ಆರೋಗ್ಯದಲ್ಲಿ ಸ್ಥಿರತೆ ಕಂಡು ಬಂದ ಹಿನ್ನೆಲೆಯಲ್ಲಿ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ ಎಂದು ಆಸ್ಪತ್ರೆಯ ಪ್ರಕಟಣೆ ತಿಳಿಸಿದೆ.
ಒಂದು ವಾರಗಳ ಕಾಲ ವಿಶ್ರಾಂತಿ ಪಡೆಯುವಂತೆ ವೈದ್ಯರು ರಜನಿಕಾಂತ್ ಗೆ ಸೂಚಿಸಿದ್ದಾರೆ. ರಕ್ತದೊತ್ತಡದ ಬಗ್ಗೆ ನಿಗಾವಹಿಸುವಂತೆಯೂ ಸೂಚಿಸಲಾಗಿದೆ.
ಹೈದರಾಬಾದ್ ನಲ್ಲಿ ಅಣ್ಷಾತೆ ಚಿತ್ರದ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದ ವೇಳೆ ರಜನಿಕಾಂತ್ ರಕ್ತದೊತ್ತಡದಲ್ಲಿ ಏರು ಪೇರಾಗಿತ್ತು. ಚತ್ರೀಕರಣ ಮೊಟಕುಗೊಳಿಸಿ ಅಪಲೊ ಆಸ್ಪತ್ರೆಗೆ ರಜನಿ ದಾಖಲಾಗಿದ್ದರು.