ನಟ ಯಶ್ ಬಳಿ ಕ್ಷಮೆ ಕೇಳಿದ ಅಮೀರ್ ಖಾನ್!

ಮುಂಬೈ, ನ ೨೫- ಬಾಲಿವುಡ್ ಸೂಪರ್ ಸ್ಟಾರ್ ಅಮೀರ್ ಖಾನ್ ಸ್ಯಾಂಡಲ್ ವುಡ್ ಸ್ಟಾರ್ ನಟ ’ಯಶ್ ಬಳಿ ಕ್ಷಮೆ ಯಾಚಿಸಿದ್ದಾರೆ. ಅಮೀರ್ ಖಾನ್ ಅಭಿನಯದ ’ಲಾಲ್ ಸಿಂಗ್ ಚಡ್ಡಾ’ ಸಿನಿಮಾವು ಏಪ್ರಿಲ್ ೧೪ ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಈ ಚಿತ್ರವು ನಟ ಯಶ್ ಅಭಿನಯದ ಬಹು ನಿರೀಕ್ಷಿತ ಸಿನಿಮಾ ಕೆಜಿಎಫ್ ಚಾಪ್ಟರ್ ೨ ನೊಂದಿಗೆ ಪೈಪೋಟಿ ನೀಡಲಿದೆ. ಎರಡೂ ಸಿನಿಮಾಗಳು ಪೈಪೋಟಿಗೆ ಕಾರಣವಾಗಿದ್ದಕ್ಕೆ ಯಶ್ ಬಳಿ ಅಮೀರ್ ಕ್ಷಮೆ ಕೇಳಿದ್ದಾರೆ.
ಕೆಜಿಎಫ್ ಚಾಪ್ಟರ್ ೨ ನಿರ್ಮಾಪಕರು ಈಗಾಗಲೇ ಸಿನಿಮಾ ಬಿಡುಗಡೆ ದಿನಾಂಕವನ್ನು ಅಂತಿಮಗೊಳಿಸಿದ್ದಾರೆ. ಇದೀಗ ಅಮೀರ್ ಖಾನ್ ಅಭಿನಯದ ಸಿನಿಮಾ ಕೂಡ ಅದೇ ದಿನ ಬಿಡುಗಡೆ ಮಾಡಲು ನಿರ್ಧರಿಸಿದ್ದಾರೆ. ಇತರ ನಿರ್ಮಾಪಕರು ನಿಗದಿಪಡಿಸಿದ ದಿನಾಂಕವನ್ನು ನಾನು ಎಂದಿಗೂ ಆಯ್ಕೆ ಮಾಡುವುದಿಲ್ಲ. ನಾನು ಚಿತ್ರದಲ್ಲಿ ಸಿಖ್ ಪಾತ್ರದಲ್ಲಿ ನಟಿಸುತ್ತಿದ್ದೇನೆ, ಅದಕ್ಕಾಗಿಯೇ ನಾವು ಬೈಸಾಖಿಯಲ್ಲಿ ’ಲಾಲ್ ಸಿಂಗ್ ಚಡ್ಡಾ’ ಬಿಡುಗಡೆ ಮಾಡಲು ನಿರ್ಧರಿಸಿದ್ದೇವೆ.
ಅಮೀರ್ ಖಾನ್ ಈ ಘೋಷಣೆಗೂ ಮುನ್ನ ನಾನು ಕೆಜಿಎಫ್ ೨ ಚಿತ್ರದ ನಿರ್ಮಾಪಕ ಮತ್ತು ನಟ ಯಶ್ ಅವರಲ್ಲಿ ಕ್ಷಮೆಯಾಚಿಸಿದ್ದೆ. ’ಲಾಲ್ ಸಿಂಗ್ ಚಡ್ಡಾ’ ಬಿಡುಗಡೆಗೆ ಏಪ್ರಿಲ್ ೧೪ ಅತ್ಯಂತ ಸೂಕ್ತವಾದ ದಿನಾಂಕ ಎಂದು ನಾನು ಅವರಿಗೆ ವಿವರಿಸಿದೆ.
ಅವರು ನನ್ನ ಮಾತನ್ನು ಅರ್ಥಮಾಡಿಕೊಂಡರು ಮತ್ತು ನನ್ನ ಮಾತನ್ನು ಒಪ್ಪಿಕೊಂಡರು. ಅಮೀರ್ ಖಾನ್ ಅವರ ಚಿತ್ರ ’ಲಾಲ್ ಸಿಂಗ್ ಚಡ್ಡಾ’ ಹಾಲಿವುಡ್ ಚಿತ್ರ ’ಫಾರೆಸ್ಟ್ ಗಂಪ್ ನ ಹಿಂದಿ ರೀಮೇಕ್ ಆಗಿದೆ.