ನಟ ಮನೋರಂಜನ್ ಗೆ ಸನ್ಮಾನ


ದಾವಣಗೆರೆ.ನ.೧೩; ಕ್ರೇಜಿಸ್ಟಾರ್ ವಿ ರವಿಚಂದ್ರನ್ ಪುತ್ರ ನಟ ಮನೋರಂಜನ್ ರವಿಚಂದ್ರನ್  ಮುಗಿಲುಪೇಟೆ ಚಿತ್ರದ ಪ್ರಚಾರಕ್ಕಾಗಿ  ಆಗಮಿಸಿದ ಸಂದರ್ಭದಲ್ಲಿ ದಾವಣಗೆರೆ ಜಿಲ್ಲಾ ಅಖಿಲ ಕರ್ನಾಟಕ ರವಿಚಂದ್ರನ್ ಅಭಿಮಾನಿಗಳ ಸಂಘದಿಂದ ವಿನೋಬನಗರದ ಮನು ಸ್ಟುಡಿಯೋದಲ್ಲಿ   ಜಿಲ್ಲಾಧ್ಯಕ್ಷರಾದ ಎಂ.ಮನು ಹಾಗೂ ಪಾಲಿಕೆ ವಿಪಕ್ಷದ ನಾಯಕ ಎ.ನಾಗರಾಜ್ ನೆನಪಿನ ಕಾಣಿಕೆ ನೀಡಿ ಶಾಲು ಹೊದಿಸಿ  ಸನ್ಮಾನಿಸಿದರು. ಈ ಸಂದರ್ಭದಲ್ಲಿ  ಪಾಲಿಕೆ ಸದಸ್ಯರಾದ,ನಾಗರಾಜ ಗಣೇಶ್ ಚಿನ್ನಿಕಟ್ಟೆ ದಯಾನಂದ ಮೋದಿ, ಮಹಾಲಿಂಗಪ್ಪ, ಗಿರೀಶ್,ಚೇತನ್ ಬಿ.ಆರ್ , ಮಂಜಣ್ಣ, ರಾಯ್ಕರ್ ಉಪಸ್ಥಿತರಿದ್ದರು.