ನಟ ಮಂಡ್ಯ ರಮೇಶ್‍ಗೆ ಬುದ್ದಿಮಾತು

ಪಿರಿಯಾಪಟ್ಟಣ:ಏ:25: ಮದುವೆ ಸಮಾರಂಭಕ್ಕೆ ತೆರಳುತ್ತಿದ್ದ ನಟ ಮಂಡ್ಯ ರಮೇಶ್ ಅವರ ಕಾರನ್ನು ಅಡ್ಡಗಟ್ಟಿ ಪೆÇಲೀಸರು ಬುದ್ದಿಮಾತು ಹೇಳಿರುವ ಘಟನೆ ನಡೆದಿದೆ.
ವಾಹನಗಳ ತಪಾಸಣೆ ವೇಳೆ, ವಾರಾಂತ್ಯ ಕಫ್ರ್ಯೂ ಜಾರಿಯಲ್ಲಿದೆ. ನೀವು ಎಲ್ಲಿಗೆ ಹೋಗುತ್ತಿದ್ದೀರಿ ಎಂದು ಬೈಲುಕುಪ್ಪೆ ಪಿಎಸ್‍ಐ ಪುಟ್ಟರಾಜು ಕೇಳಿದ್ದಾರೆ. ತಮ್ಮ ಮೊಬೈಲ್‍ನಲ್ಲಿ ಲಗ್ನ ಪತ್ರಿಕೆ ಚಿತ್ರದ ಸಂದೇಶ ತೋರಿಸಿದ ಮಂಡ್ಯ ರಮೇಶ್, ಮದುವೆ ಕಾರ್ಯಕ್ರಮಕ್ಕೆ ಹೋಗುತ್ತಿರುವುದಾಗಿ ತಿಳಿಸಿದ್ದಾರೆ.ನೀವು ಕಾರಿನಲ್ಲಿ ಹೋಗುವುದಕ್ಕೆ ಅನುಮತಿ ಪಡೆಯಬೇಕು. ಅದಕ್ಕೆ ಪಾಸ್ ಕೊಡುತ್ತಾರೆ, ತೆಗೆದುಕೊಳ್ಳಬೇಕು ಎಂದು ಪಿಎಸ್‍ಐ ತಿಳಿ ಹೇಳಿದ್ದಾರೆ.