ನಟ ಭಯಂಕರ ತಂಡಕ್ಕೆ ಮಿಡಿದ ಪ್ರಥಮ್

ನಟ ನಿರ್ದೇಶಕ ಪ್ರಥಮ್  ಅಭಿನಯದ “ನಟಭಯಂಕರ” ಚಿತ್ರ ಚಿತ್ರೀಕರಣ ಪೂರ್ಣಗೊಳಿಸಿ ಬಿಡುಗಡೆ ಹಂತಕ್ಕೆ ಬಂದಿದೆ. ಲಾಕ್ ಡೌನ್ ಮುಗಿದ ಬಳಿಕ ಸೂಕ್ತ ಸಮಯ ನೋಡಿಕೊಂಡು ಚಿತ್ರ ತೆರೆಗೆ ತರುವ ಎಲ್ಲ ಯೋಚನೆ ಅವರಿಗಿದೆ

ಇದರ ನಡುವೆ‌ “ಕರ್ನಾಟಕದ ಅಳಿಯ”  ಎನ್ನುವ  ಮತ್ತೊಂದು ಸಿನಿಮಾದಲ್ಲೂ  ಪ್ರಥಮ್ ನಾಯಕನಾಗಿ  ಕಾಣಿಸಿಕೊಂಡಿದ್ದಾರೆ. ಇಲ್ಲಿ ಹಿರಿಯ ನಟ ರಾಘವೇಂದ್ರ ರಾಜ್‍ಕುಮಾರ್ ಅವರೊಂದಿಗೆ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದರ ಜೊತೆಗೆ ಕಿರುತೆರೆಯಲ್ಲಿ ಪ್ರಸಾರವಾಗುತ್ತಿರುವ ಕುಕ್ಕು ವಿಥ್ ಕಿರಿಕ್ ಎನ್ನುವ  ಕಾಮಿಡಿ ಕಾರ್ಯಕ್ರಮದಲ್ಲೂ ಸಹ ಪ್ರಥಮ್ ಭಾಗವಹಿಸುತ್ತಿದ್ದಾರೆ.

ಈ‌ ನಡುವೆ  ನಟ ಪ್ರಥಮ್ ,ತಮ್ಮ ಚಿತ್ರ “ನಟಭಯಂಕರ “ದಲ್ಲಿ ಕೆಲಸ ಮಾಡಿದ  ಎಲ್ಲರಿಗೂ ಆಹಾರ ಕಿಟ್ ಹಾಗು ಕಷ್ಟದಲ್ಲಿ ನೆರವಿಗೆ ಎಂದು ಹಣಕಾಸಿನ‌ ನೆರವು ನೀಡಿ ಸಂಕಷ್ಟಕ್ಕೆ ಸ್ಪಂದಿಸಿದ ಕೆಲವೇ ಕೆಲವು ನಟರ ಪೈಕಿ ಪ್ರಥಮ ಒಬ್ಬರಾಗಿದ್ದಾರೆ.

“ನಟ ಭಯಂಕರ” ಚಿತ್ರತಂಡದ ನೂರಕ್ಕೂ ಹೆಚ್ಚು  ಕಾರ್ಮಿಕ, ತಂತ್ರಜ್ಞರಿಗೆ  ಉತ್ತಮ ಗುಣಮಟ್ಟದ ಆಹಾರ ಪದಾರ್ಥಗಳು ಅಲ್ಲದೆ  ಕೊರೋನಾ ಸೋಂಕು ನಿಗ್ರಹಿಸುವ ಮೆಡಿಕಲ್ ಕಿಟ್ ಕೂಡ ನೀಡಿದ್ದಾರೆ  ಉತ್ತಮ ಗುಣಮಟ್ಟದ ಪದಾರ್ಥದ ಜೊತೆಗೆ  ಆರು ಸಾವಿರ ರೂ. ಮೌಲ್ಯದ ವಸ್ತುಗಳನ್ನು ಚಿತ್ರದಲ್ಲಿ ದುಡಿದ ಎಲ್ಲಾ ಸದಸ್ಯರಿಗೆ  ವಿತರಿಸುವ ಮೂಲಕ ತಮ್ಮ ಆರೋಗ್ಯ ಕಾಪಾಡಿಕೊಳ್ಳುವಂತೆ ಮನವಿ ಮಾಡಿದ್ದಾರೆ

ಕೊರೋನಾ ಸೋಂಕಿನ ಸಮಯದಲ್ಲಿ ಜನರಿಗೆ ಕೈಲಾದ ಮಟ್ಟಿಗೆ ಸಹಾಯ ಮಾಡುತ್ತಾ ಕಷ್ಟಕಾಲದಲ್ಲಿ ಮಿಡಿಯುತ್ತಿದ್ದಾರೆ. ಕಳೆದ ಬಾರಿ ಸಾಮಾಜಿಕ ಕೆಲಸ ಮುಂದುವರಿಸಿದ ಅವರು ಇದೀಗ ಮತ್ತೆ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಜನರ ಕಷ್ಟಕ್ಕೆ ಸ್ಪಂದಿಸುತ್ತಿದ್ದಾರೆ. ಅಗತ್ಯವಿರುವ ಮಂದಿಗೆ ಸಹಾಯ ಮಾಡಿ ಮಾನವೀಯತೆ ಮೆರದಿದ್ದ ಪ್ರಥಮ್ ಇದೀಗ ತನ್ನ ಚಿತ್ರತಂಡದ ಕಲಾವಿದರು ಕಾರ್ಮಿಕರು ತಂತ್ರಜ್ಞಾನ ನೆರವಿಗೆ ಧಾವಿಸಿದ್ದಾರೆ.

“ನಟಭಯಂಕರ “ಚಿತ್ರವನ್ನು ಸಂಪೂರ್ಣ ಚಿತ್ರೀಕರಣ ಪೂರ್ಣಗೊಳಿಸಿರುವ ನಟ ಪ್ರಥಮ ಇದೀಗ “ಕರ್ನಾಟಕ ಅಳಿಯ “ಚಿತ್ರವನ್ನು ಒಪ್ಪಿಕೊಂಡಿದ್ದಾರೆ. ಈ ನಡುವೆ ಸಾಮಾಜಿಕ ಕೆಲಸ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ