ನಟ ಪ್ರೇಮ್‌ಗೆ ಹುಟ್ಟುಹಬ್ಬ ಸಂಭ್ರಮ

ಬೆಂಗಳೂರು,ಏ.೧೮-ಕನ್ನಡ ಚಿತ್ರರಂಗದಲ್ಲಿ ಲವ್ಲಿ ಸ್ಟಾರ್ ಪ್ರೇಮ್ ಎಂದೇ ಚಿರಪರಿಚಿತಾದ ನೆನಪಿರಲಿ ಪ್ರೇಮ್ ಅವರಿಗೆ ಇಂದು ೪೭ನೇ ಹುಟ್ಟುಹಬ್ಬದ ಸಂಭ್ರಮ

೧೯೭೬ ರ ಏಪ್ರಿಲ್ ೧೮ ರಂದು ಜನಿಸಿದ ಪ್ರೇಮ್ ಕುಮಾರ್ ೪೭ನೇ ವಸಂತಕ್ಕೆ ಕಾಲಿಟ್ಟಿದ್ದಾರೆ ಎಲ್ಲೆಡೆ ಶುಭಾಶಯಗಳ ಮಹಾಪೂರ ಹರಿದು ಬಂದಿದೆ.

ನಟನೆಯಲ್ಲಿ ಆಸಕ್ತಿ ಹೊಂದಿದ್ದ ಪ್ರೇಮ್ ಅವರು ೨೦೦೪ ರಲ್ಲಿ ಪ್ರಾಣ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು. ೨೦೦೫ ರಲ್ಲಿ ನೆನಪಿರಲಿ ಚಿತ್ರಕ್ಕಾಗಿ ಅತ್ಯುತ್ತಮ ನಟ ಫಿಲ್ಮ್ಫೇರ್ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದರು.

ಬಳಿಕ ನೆನಪಿರಲಿ ಪ್ರೇಮ್ ಎಂದೇ ಖ್ಯಾತರಾದರು. ಈ ಮೂಲಕ ಅಪಾರ ಅಭಿಮಾನಿಗಳನ್ನು ಸಂಪಾದಿಸಿದರು. ಇವರ ನಟನೆಗೆ ಅನೇಕ ಪ್ರಶಸ್ತಿ, ಪುರಸ್ಕಾರ ಲಭಿಸಿವೆ

ನೆನಪಿರಲಿ ಪ್ರೇಮ್ ಹುಟ್ಟುಹಬ್ಬದ ಸಲುವಾಗಿ ಚಿತ್ರರಂಗದ ಗಣ್ಯರು, ಅಭಿಮಾನಿಗಳು ಶುಭ ಕೋರುತ್ತಿದ್ದಾರೆ.

ಪ್ರಾಣ, ನೆನಪಿರಲಿ. ಜೊತೆ ಜೊತೆಯಲಿ, ಪಲ್ಲಕ್ಕಿ, ಗುಣವಂತ, ಹೊಂಗನಸು, ಗೌತಮ್, ಸವಿ ಸವಿ ನೆನಪು, ಜೊತೆಗಾರ, ಚೆಲುವೆಯೆ ನಿನ್ನ ನೋಡಲು, ಎರಡನೇ ಮದುವೆ, ಐ ಆಮ್ ಸಾರಿ ಮತ್ತೆ ಬನ್ನಿ ಪ್ರೀತ್ಸೋಣ, ದನ್ ದನಾ ದನ್, ಚಾರ್ ಮಿನಾರ್, ಚಂದ್ರ, ಶತ್ರು, ಅತೀ ಅಪರೂಪ, ಫೇರ್ ಅಂಡ್ ಲವ್ಲಿ, ಮಳೆ ರಿಂಗ್ ರೋಡ್, ಮಸ್ತ್ ಮೊಹಬತ್, ಚೌಕ, ದಳಪತಿ, ಲೈಫ್ ಜೊತೆ ಒಂದು ಸೆಲ್ಫಿ ಹೀಗೆ ಅನೇಕ ಸಿನಿಮಾಗಳಲ್ಲಿ ನಟ ಪ್ರೇಮ್ ಅಭಿನಯಿಸಿದ್ದಾರೆ. ಅದರಲ್ಲೂ ಇವರ ಸಿನಿಮಾದ ಹಾಡುಗಳನ್ನಂತೂ ಜನರು ಗುನುಗುತ್ತಿರುತ್ತಾರೆ.

ಈ ದಂಪತಿಗೆ ಅಮೃತಾ ಮತ್ತು ಏಕಾಂತ್ ಎಂಬ ಎರಡು ಮಕ್ಕಳಿದ್ದಾರೆ.ಅವರಿಬ್ಬರು ಕೂಡ ಸಿನಿಮಾ ರಂಗಕ್ಕೆ ಈಗಾಗಲೇ ಪ್ರವೇಶಿಸಿದ್ದಾರೆ. ಮಾಮು ಟೀ ಅಂಗಡಿ, ರಾಮರಾಜ್ಯ- ಗಾಂಧಿ ತಾತನ ಕನಸು, ಸಾಹೇಬ, ಗುರುಶಿಷ್ಯರು ಚಿತ್ರದಲ್ಲಿ ಏಕಾಂತ್ ನಟಿಸಿದ್ದಾರೆ.

ಅಮೃತಾ ಟಗರು ಪಲ್ಯ ಚಿತ್ರದಲ್ಲಿ ಮೊದಲ ಬಾರಿಗೆ ಬಣ್ಣ ಹಚ್ಚಿದ್ದಾರೆ. ಸ್ಯಾಂಡಲ್ವುಡ್ನ ಆದರ್ಶ ಕುಟುಂಬ ಪ್ರೇಮ್ ಅವರದ್ದಾಗಿದೆ.