ನಟ ಪುನೀತಗೆ ನುಡಿನಮನ

ಕಲಬುರಗಿ: ಡಿ.2:ತಾಲೂಕಿನ ಕಲ್ಲಬೇನೂರ್ ಗ್ರಾಮದಲ್ಲಿ ರಾಷ್ಟ್ರ ಪ್ರಶಸ್ತಿ ಪುರಸ್ಕøತ ಕರನಾಟಕ ರತ್ನ ಹೆಮ್ಮೆಯ ನಟ ದಿ. ಪುನೀತ ರಾಜಕುಮಾರ ರವರಿಗೆ ನುಡಿನಮನ ಹಾಗೂ ಸಂಗೀತ ರಸಮಂಜರಿ ಕಾರ್ಯಕ್ರಮಕ್ಕೆ ಶಾಸಕ ಬಸವರಾಜ ಮತ್ತಿಮೂಡ ಅವರು ದಿ. ಪುನೀತ ರಾಜಕುಮಾರ ಅವರ ಭಾವ ಚಿತ್ರಕ್ಕೆ ಮಾಲಾರ್ಪಣೆ ಮಾಡುವ ಮೂಲಕ ಉದ್ಘಾಟಿಸಿದರು.
ಮಹಾನಗರ ಪಾಲಿಕೆ ಸದಸ್ಯೆ ಯಂಕಮ್ಮ ಜಗದೇವ ಗುತ್ತೇದಾರ, ಗ್ರಾಂ.ಪ.ಉಪಾಧ್ಯಕ್ಷ ರಾಜು ಧೋಟಿಕೊಳ, ಗ್ರಾ.ಪ. ಸದಸ್ಯ ರಾಜು ಹೊನಗುಂಟಿ, ಲಕ್ಷ್ಮಿಬಾಯಿ ಮಿನ್ನಯ್ಯ ಗುತ್ತೇದಾರ, ನಿಂಗಮ್ಮಾ ಅಣೆಪ್ಪ, ಗ್ರಾಮಸ್ಥರಾದ ರಾಮಯ್ಯ ಗುತ್ತೇದಾರ, ಮೊಹನರೆಡ್ಡಿ ತಿಪ್ಪರೆಡ್ಡಿ, ಅರುಣಕುಮಾರ ಗುತ್ತೇದಾರ, ಶಿವರಾಜ ಗುತ್ತೇದಾರÀ, ರಾಜು ಗುತ್ತೆದಾರ, ಅಶೋಕ ಬಡಿಗೇರ, ಸಾಬಯ್ಯ ನಂದೂರ ಇದ್ದರು.