ನಟ ನೀನಾಸಂ ಮತದಾನ ಜಾಗೃತಿ ರಾಯಭಾರಿ

ಮಂಡ್ಯ,ಏ. ೧೪:ರಾಜ್ಯ ರಾಜಕೀಯಲ್ಲಿ ಮತಬೇಟೆಗಾಗಿ ಕಿಚ್ಚ ಸುದೀಪ್ ಬಳಿಕ ರಾಕಿಂಗ್ ಸ್ಟಾರ್ ಯಶ್ ಹೆಸರು ಕೇಳಿ ಬಂದ ಬೆನ್ನಲ್ಲೆ ಮಂಡ್ಯ ಜಿಲ್ಲಾ ಮತದಾನ ಜಾಗೃತಿ ರಾಯಭಾರಿಯಾಗಿ ನಟ ಸತೀಶ್ ನೀನಾಸಂ ನೇಮಕವಾಗಿದ್ದಾರೆ ಎಂದು ತಿಳಿದು ಬಂದಿದೆ. ಮುಂದಿನ ವಿಧಾನ ಸಭೆ ಚುನಾವಣೆ ರಂತ್ರರೂಪಿಸುತ್ತಿದ್ದ ಬೆನ್ನಲ್ಲೆ ಮಂಡ್ಯ ಜಿಲ್ಲೆಯಲ್ಲಿ ಮತದಾರರ ಸೆಳೆಯೋದಕ್ಕೆ ಮಂಡ್ಯ ಜಿಲ್ಲೆಯವರೇ ಆಗಿರುವ ಸತೀಶ್ ಅವರನ್ನು ನೇಮಿಸಿ ಜಾಗೃತಿ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಅಷ್ಟೇ ಅಲ್ಲದೇ ಮಂಡ್ಯದಲ್ಲಿ ನಡೆದ ಮತದಾನ ಜಾಗೃತಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಸತೀಶ್ ಮಾತನಾಡಿ, ಜಾತಿ, ಮತ, ಕುಲ ಯಾವುದನ್ನೂ ಲೆಕ್ಕಿಸದೇ, ಆಮಿಷಗಳಿಗೆ ಒಳಗಾಗದೇ ಪ್ರಮಾಣಿಕ ವ್ಯಕ್ತಿಗಳಿಗೆ ಮತದಾನ ಮಾಡಿ, ಮತದಾನ ಅಮೂಲ್ಯವಾದದ್ದು ಹಾಳು ಮಾಡಬೇಡಿ ಎಂದಿದ್ದಾರೆ.
ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡಬೇಕು. ಮತದಾನ ಮಾಡುವುದನ್ನು ನಿರ್ಲಕ್ಷ್ಯಿಸಬೇಡಿ. ರಾಜ್ಯದಲ್ಲೇ ಮಂಡ್ಯದಲ್ಲಿ ಅತೀ ಹೆಚ್ಚು ಮತದಾನ ಆಗುವಂತೆ ಮಾಡಬೇಕಾಗಿದ್ದು ನಮ್ಮೆಲ್ಲರ ಜವಾಬ್ದಾರಿ ಆಗಿದೆ’ ಎಂದು ಸತೀಶ್ ತಿಳಿಸಿದರು.