ನಟ ನಾಗಭೂಷಣ್ ಪಾನಮತ್ತನಾಗಿರಲಿಲ್ಲ

ಬೆಂಗಳೂರು, ಅ.೨-ವೇಗವಾಗಿ ಕಾರು ಚಲಾಯಿಸಿ ದಂಪತಿಗೆ ಡಿಕ್ಕಿ ಹೊಡೆದು ಪತ್ನಿ ಸಾವಿಗೆ ಕಾರಣರಾಗಿರುವ ಸ್ಯಾಂಡಲ್ ವುಡ್ ನಟ ನಾಗಭೂಷಣ್ ರಕ್ತ ಪರೀಕ್ಷೆ ಹಾಗೂ ಮದ್ಯಪಾನದ ರಿಪೋರ್ಟ್ ನೆಗೆಟಿವ್ ಬಂದಿದೆ.
ನಟ ನಾಗಭೂಷಣ್ ಕುಡಿದು ಕಾರು ಚಲಾಯಿಸಿರುವ ಶಂಕೆಯ ಹಿನ್ನೆಲೆಯಲ್ಲಿ ನಿನ್ನೆ ಅವರನ್ನು ವೈದ್ಯಕೀಯ ಪರೀಕ್ಷಗೆ ಒಳಪಡಿಸಲಾಗಿದ್ದು ವರದಿಯಲ್ಲಿ ನಟ ಪಾನಮತ್ತನಾಗಿರಲಿಲ್ಲ ಎನ್ನುವುದು ಕಂಡು ಬಂದಿದೆ.
ಅಪಘಾತಕ್ಕೆ ಕಾರಣನಾಗಿದ್ದ ನಟ ನಾಗಭೂಷಣ್‌ನನ್ನು ಕುಮಾರಸ್ವಾಮಿ ಲೇಔಟ್ ಸಂಚಾರ ಪೊಲೀಸರು ಬಂಧಿಸಿ ಠಾಣೆಯಲ್ಲಿ ಸ್ಟೇಷನ್ ಬೇಲ್ ನೀಡಿ ಬಿಡುಗಡೆ ಮಾಡಲಾಗಿತ್ತು. ತನಿಖೆಯನ್ನು ಮುಂದುವರಿಸಿ ನಾಳೆ ವಿಚಾರಣೆಗೆ ಹಾಜರಾಗಬೇಕೆಂದು ಪೊಲೀಸರು ನೋಟೀಸ್ ಜಾರಿಗೊಳಿಸಿದ್ದಾರೆ.
ವೇಗವಾಗಿ ಚಾಲನೆ ಮಾಡಿದ್ದು, ನಿಜ ಆದರೆ ತಿರುವು ಇದ್ದ ಕಾರಣ ತಿಳಿಯಲಿಲ್ಲ. ತಿರುವಿನಲ್ಲಿ ನಿಯಂತ್ರಣ ಮಾಡಲು ಆಗದೆ ಈ ಅಪಘಾತ ನಡೆದಿದೆ ಎಂದು ನಟ ನಾಗಭೂಷಣ್ ಹೇಳಿಕೆ ದಾಖಲಿಸಿದ್ದಾರೆ.
ಈ ಮಧ್ಯೆ ಕಾರು ಅಪಘಾತದಲ್ಲಿ ಗಂಭೀರ ಗಾಯಗೊಂಡಿರುವ ಕೃಷ್ಣರಿಗೆ ಚಿಕಿತ್ಸೆ ಮುಂದುವರಿದಿದ್ದು ಅವರು ಚೇತರಿಸಿಕೊಳ್ಳುತ್ತಿದ್ದು ಮೃತಪಟ್ಟಿರುವ ಅವರ ಪತ್ನಿ ಪ್ರೇಮ ಅಂತ್ಯಸಂಸ್ಕಾರ ನೇರವೇರಿಸಲಾಗಿದೆ.
ದುರ್ಘಟನೆಯ ಸಂಬಂಧಿಸಿದಂತೆ ನಟ ನಾಗಭೂಷಣ್ ವಿರುದ್ಧ ಐಪಿಸಿ ೨೭೯ , ೩೩೭ ಹಾಗೂ ೩೦೪ಎ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ನಿರ್ಲಕ್ಷ್ಯದಿಂದ ಕಾರು ಚಾಲನೆ ಹಾಗೂ ಅತಿ ವೇಗವಾಗಿ ಫುಟ್‌ಪಾತ್ ಮೇಲೆ ಚಲಾಯಿಸದ್ದಕ್ಕೆ ಐಪಿಸಿ ೨೭೯ ಹಾಕಲಾಗಿದೆ. ೩೩೭ ಜೀವಕ್ಕೆ ಹಾನಿ ಹಾಗೂ ೩೦೪ಎಅಡಿ ಅಪಘಾತ ಪ್ರಕರಣವನ್ನು ದಾಖಲು ಮಾಡಲಾಗಿದೆ.
ನಟ ನಾಗಭೂಷಣ್‌ನನ್ನು ನ್ಯಾಯಾಧೀಶರ ಮುಂದೆ ಹಾಜರು ಪಡಿಸಲ್ಲ. ಇದು ಹಿಟ್ ಆ?ಯಂಡ್ ರನ್ ಕೇಸ್ ಅಲ್ಲ, ಇದೊಂದು ಅಪಘಾತದ ಪ್ರಕರಣವಾಗಿದೆ. ಹೀಗಾಗಿ ಠಾಣಾ ಜಾಮೀನು ಕೊಟ್ಟಿದ್ದೇವೆ ಎಂದು ಸಂಚಾರ ದಕ್ಷಿಣ ವಿಭಾಗ ಡಿಸಿಪಿ ಶಿವಪ್ರಕಾಶ್ ದೇವರಾಜ್ ತಿಳಿಸಿದ್ದಾರೆ.