ನಟ ಧರ್ಮೇಂದ್ರ ಅಮೆರಿಕದಿಂದ ವಾಪಸ್

ಮುಂಬೈ,ಅ.೧೨-ತಮ್ಮ ಮಗ ಸನ್ನಿ ಡಿಯೋಲ್ ಜತೆ ಕೆಲ ದಿನಗಳ ಹಿಂದೆ ಚಿಕಿತ್ಸೆಗಾಗಿ ಅಮೆರಿಕ ತೆರಳಿದ್ದ ಎವರ್ ಗ್ರೀನ್ ನಟ ಧರ್ಮೇಂದ್ರ ಕೆಲ ದಿನಗಳ ಹಿಂದೆ ಅಲ್ಲಿಂದ ಭಾರತಕ್ಕೆ ವಾಪಸ್ಸಾಗಿದ್ದು ಈಗ ಅವರು ಸಂಪೂರ್ಣ ಫಿಟ್ ಆಗಿದ್ದಾರೆ ಎನ್ನಲಾಗಿದೆ.
ಜೊತೆಗೆ ಅಭಿಮಾನಿಗಳಿಗೆ ಸಂತಸದ ಸುದ್ದಿ ಸಹ ನೀಡಿದ್ದಾರೆ ಸದ್ಯದಲ್ಲಿಯೇ ಹೊಸ ಚಿತ್ರ ಆರಂಭಿಸಲಿರುವ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ.
ಧರ್ಮೇಂದ್ರ ಅವರ ಇತ್ತೀಚಿನ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ನಟ ಸೈಕ್ಲಿಂಗ್ ಮಾಡುತ್ತಿರುವುದು ಕಂಡುಬಂದಿದೆ. ಅಲ್ಲದೇ ಅಭಿಮಾನಿಗಳಿಗೆ ಸಂದೇಶ ನೀಡಿದ್ದು ವೈರಲ್ ಆಗುತ್ತಿದೆ.
೮೭ ವರ್ಷದ ಧರ್ಮೇಂದ್ರ ಅವರ ವಯಸ್ಸು ಹೆಚ್ಚಿರಬಹುದು ಆದರೆ ಅವರ ಎನರ್ಜಿ ಲೆವೆಲ್ ಎಷ್ಟಿದೆಯೆಂದರೆ ಫಿಟ್‌ನೆಸ್‌ನಲ್ಲಿ ತನಗಿಂತ ಕಿರಿಯರಿಗೆ ಕಠಿಣ ಸವಾಲನ್ನು ನೀಡಬಲ್ಲರು. ಇದಕ್ಕೆ ಸಾಕ್ಷಿ ಎಂಬಂತೆ ಧರ್ಮೇಂದ್ರ ಅವರು ಇತ್ತೀಚಿನ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ನಟ ಕ್ಯಾಮರಾ ಮುಂದೆ ಬರಿಗಾಲಿನಲ್ಲಿ ಸೈಕಲ್ ತುಳಿಯುತ್ತಿರುವುದನ್ನು ಕಾಣಬಹುದು.
ವಿಡಿಯೋದಲ್ಲಿ ನಟ ಹೇಳಿದ್ದೇನು?
ಈ ವೀಡಿಯೊದಲ್ಲಿ, ನಟ ನೀಲಿ ಬಣ್ಣದ ಪೈಜಾಮ ಮತ್ತು ತಿಳಿ ಬಣ್ಣದ ಟೀ ಶರ್ಟ್ ಧರಿಸಿದ್ದಾರೆ. ಸೈಕ್ಲಿಂಗ್ ಮಾಡುವಾಗ ಧರ್ಮೇಂದ್ರ ಹೇಳುತ್ತಿದ್ದಾರೆ – ಸೈಕ್ಲಿಂಗ್ ಮಾಡಿ ಅರ್ಧ ಗಂಟೆಯಾಗಿದೆ. ನನ್ನ ಕಾಲುಗಳಲ್ಲಿ ನೋವು ಇದೆ ಆದರೆ ನಾನು ಇನ್ನೂ ಸೈಕ್ಲಿಂಗ್ ಮಾಡುತ್ತಿದ್ದೇನೆ ಎಂದು ತಿಳಿಸಿದ್ದಾರೆ.ಚಿತ್ರದಲ್ಲಿ ಧರ್ಮೇಂದ್ರ ದಣಿದಿರುವುದು ಕಂಡು ಬರುತ್ತದೆ
ಈ ಸೈಕ್ಲಿಂಗ್ ವಿಡಿಯೋ ಕೆಲವೇ ನಿಮಿಷಗಳಲ್ಲಿ ವೈರಲ್ ಆಗಿದೆ.
ಎಕ್ಸ್‌ನಲ್ಲಿ ತಮ್ಮ ಚಿತ್ರವನ್ನು ಹಂಚಿಕೊಳ್ಳುವಾಗ, ಧರ್ಮೇಂದ್ರ ಅವರು ಸ್ನೇಹಿತರೇ, ನಾನು ಯುಎಸ್‌ಎಯಿಂದ ಹಿಂತಿರುಗಿದ್ದೇನೆ … ಹೊಸ ಚಲನಚಿತ್ರವನ್ನು ಪ್ರಾರಂಭಿಸುತ್ತಿದ್ದೇನೆ … ಯಾವಾಗಲೂ ನಿಮ್ಮ ಶುಭ ಹಾರೈಕೆಗಳು ಮತ್ತು ಆಶೀರ್ವಾದ ಇರಲಿ ಎಂದು ಬರೆದಿದ್ದಾರೆ.
ಅಭಿಮಾನಿಗಳು ಒಳ್ಳೆಯದು ಸರ್, ನಿಮ್ಮ ಬಗ್ಗೆ ಹೆಮ್ಮೆ, ಮತ್ತು ಗ್ರೇಟ್ ಸರ್, ನೀವು ತುಂಬಾ ಕಷ್ಟಪಟ್ಟು ಕೆಲಸ ಮಾಡುವುದು ತುಂಬಾ ಸ್ಫೂರ್ತಿದಾಯಕವಾಗಿದೆ ಎಂದರೆ ಇತರರು, ಈ ವಯಸ್ಸಿನಲ್ಲಿ ನಿಮ್ಮ ಫಿಟ್‌ನೆಸ್ ತುಂಬಾ ಸ್ಪೂರ್ತಿದಾಯಕವಾಗಿದೆ ವಾವ್ ಎಂಬಂತಹ ಕಾಮೆಂಟ್‌ಗಳನ್ನು ಬಿಟ್ಟಿದ್ದಾರೆ. ನಿಮ್ಮನ್ನು ನೋಡಲು ತುಂಬಾ ಸಂತೋಷವಾಗಿದೆ. ನೀವು ಎಲ್ಲರಿಗೂ ಸ್ಫೂರ್ತಿ. ನಿಮ್ಮನ್ನು ತುಂಬಾ ಪ್ರೀತಿಸುತ್ತೇನೆ ಸರ್. ನಿಮ್ಮ ಆಶೀರ್ವಾದ ಬೇಕು ಎಂದು ಅಭಿಮಾನಿಗಳು ತಮ್ಮ ಪ್ರೀತಿಯನ್ನು ತೋರಿದ್ದಾರೆ.