ನಟ ಧನುಷ್ ಮೋಹಕ ತಾರೆ ರಮ್ಯಾ ಭೇಟಿ

ಚೆನ್ನೈ, ನ ೧೦- ನಟಿ ರಮ್ಯಾ ಅವರು ಈ ಹಿಂದ ಅಷ್ಟೇ ಉತ್ತರಕಾಂಡ ಸಿನಿಮಾ ಮುಹೂರ್ತದಲ್ಲಿ ಕಾಣಿಸಿಕೊಂಡಿದ್ದರು. ಇದೀಗ ಟ್ವೀಟರ್ ನಲ್ಲಿ ನಟ ಧನುಷ್ ಜತೆಗಿನ ಫೋಟೊವನ್ನು ಹಂಚಿಕೊಂಡಿದ್ದಾರೆ. ಹದಿನೈದು ವರ್ಷಗಳ ಹಿಂದೆ ಧನುಷ್ ಜತೆಗೆ ನಟಿಸಿರುವ ಪೊಲ್ಲಾಧವನ್ ಸಿನಿಮಾ ಕುರಿತು ಹೇಳಿಕೊಂಡಿದ್ದಾರೆ.
ಪೊಲ್ಲಾಧವನ್ ಚಿತ್ರತಂಡದ ಜತೆ ಫೋಟೊಗಳನ್ನು ಹಂಚಿಕೊಂಡಿರುವ ರಮ್ಯಾ ಅವರು ಪೊಲ್ಲಾಧವನ್ ಸಿನಿಮಾಗೆ ೧೫ ವರ್ಷ ಪೂರ್ಣಗೊಂಡಿದೆ. ಹಲವು ವರ್ಷಗಳ ನಂತರ ಈ ನೆನಪಿನಲ್ಲಿ ನನ್ನ ಸ್ನೇಹಿತನನ್ನು ಭೇಟಿಯಾದೆ. ಅಲ್ಲದೇ, ನಾನು ಮೆಚ್ಚುವ ಪ್ರತಿಭಾವಂತ ನಿರ್ದೇಶಕರನ್ನೂ ಭೇಟಿಯಾಗಿದ್ದು ಖುಷಿ ತಂದಿತು. ನಾನು ಈ ಟೀಮ್ನಿಂದ ಸಾಕಷ್ಟು ಕಲಿತಿದ್ದೇನೆ. ಈ ಸಿನಿಮಾ ನನಗೆ ತುಂಬಾ ವಿಷಯಗಳನ್ನು ಕಲಿಸಿದೆ. ನಾನು ಪೊಲ್ಲಾಧವನ್- ೨ ಚಿತ್ರಕ್ಕಾಗಿ ಕಾಯುತ್ತಿದ್ದೇನೆ ಎಂದು ರಮ್ಯಾ ಬರೆದುಕೊಂಡಿದ್ದಾರೆ.
ಈ ಕಾರ್ಯಕ್ರಮದ ಫೋಟೋಗಳನ್ನು ನಟಿ ಹಂಚಿಕೊಂಡಿದ್ದಾರೆ. ಚಿತ್ರದ ಸೀಕ್ವೆಲ್ ಬರಲಿ ಎಂದು ನಾನು ಬಯಸುತ್ತೇನೆ ಎಂದು ಅವರು ಹೇಳಿದರು. ತನ್ನೊಂದಿಗೆ ಸದಾ ನಿಂತಿರುವ “ದೀರ್ಘಕಾಲದ ಸ್ನೇಹಿತ” ಧನುಷ್ ಅವರನ್ನು ಭೇಟಿಯಾದ ಕಾರಣ ಪೊಲ್ಲಾದವನ್ ಸಿನಿಮಾಗೆ ನಾನು ಕೃತಜ್ಞಳಾಗಿದ್ದೇನೆ ಎಂದು ದಿವ್ಯಾ ಹೇಳಿದರು. ನಟ ಧನುಷ್ ಅವರೇ ರಮ್ಯಾ ಅವರು ಹೀರೋಯಿನ್ ಆಗಬಹುದೆಂದು ಸೂಚಿಸಿದ್ದಾರೆ ಎಂದು ಕೂಡ ಉಲ್ಲೇಖಿಸಿದ್ದಾರೆ.
ಧನುಷ್ ಮತ್ತು ರಮ್ಯಾ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಈ ಚಲನಚಿತ್ರವು ಪ್ರಭು (ಧನುಷ್)ಜೀವನದ ಸುತ್ತ ಸುತ್ತುತ್ತದೆ. ಲಕ್ಕಿ ಎಂದು ಅವರು ಪರಿಗಣಿಸುವ ಅವರ ಬೈಕ್ ಅನ್ನು ವ್ಯಕ್ತಿಯೊಬ್ಬ ಕದ್ದ ನಂತರ ಸಿನಿಮಾದಲ್ಲಿ ಟ್ವಿಸ್ಟ್ ಬರುತ್ತದೆ. ಇವರು ಸೆಲ್ವಂ (ಕಿಶೋರ್) ಎಂಬ ಕುಖ್ಯಾತ ಡಾನ್ನೊಂದಿಗೆ ನಿಕಟ ಸಂಪರ್ಕ ಹೊಂದಿದ್ದಾರೆ. ಪ್ರಭುವಿನ ಪ್ರೇಮಕತೆಯಲ್ಲಿ ನಟಿ ರಮ್ಯಾ ಹೇಮಾ ಪಾತ್ರದಲ್ಲಿ ನಟಿಸಿದ್ದಾರೆ. ಜಿವಿ ಪ್ರಕಾಶ್ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ. ಇದರಲ್ಲಿ ಭಾನುಪ್ರಿಯಾ, ಸಂತಾನಂ, ಕರುಣಾಸ್ ಮತ್ತು ಡೇನಿಯಲ್ ಬಾಲಾಜಿ ಸೇರಿದಂತೆ ಇತರ ಪ್ರಮುಖ ನಟರು ಕಾಣಿಸಿಕೊಂಡಿದ್ದಾರೆ.
ಪೊಲ್ಲಾಧವನ್ ಚಿತ್ರತಂಡ ಇದೇ ಖುಷಿಗೆ ಕೇಕ್ ಕತ್ತರಿಸಿ ಸಂತಸವನ್ನು ಹಂಚಿಕೊಂಡಿದೆ. ರಮ್ಯಾ ಅವರ ಟ್ವೀಟ್ಗೆ ನಟ ಧನುಷ್ ಪ್ರತಿಕ್ರಿಯೆ ನೀಡಿದ್ದಾರೆ.