ನಟ ದಿಗಂತ್ ಗೆ ಗಂಭೀರ ಗಾಯ ಗೋವಾದಿಂದ ಬೆಂಗಳೂರಿಗೆ ಏರ್‌ಲಿಫ್ಟ್

ಗೋವಾ,ಜೂ.21-ಖ್ಯಾತ ನಟ ದಿಗಂತ್ ಮಂಚಾಲೆ ಅವರ ಕುತ್ತಿಗೆ ಪೆಟ್ಟಾಗಿದ್ದು, ಕೆಲವೇ ಕ್ಷಣಗಳಲ್ಲಿ ‌ ಏರ್‌ಲಿಫ್ಟ್ ಮೂಲಕ ನಗರದಿಂದ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಗೋವಾ ಪ್ರವಾಸಕ್ಕೆ ಹೋದ ಸಂದರ್ಭದಲ್ಲಿ ಸಮುದ್ರ ತಟದಲ್ಲಿ ಸಮ್ಮರ್ ಶಾಟ್ ಹೊಡೆಯುವ ವೇಳೆ ಮಿಸ್ಸಾಗಿ ದಿಗಂತ್ ಕುತ್ತಿಗೆಗೆ ಪೆಟ್ಟು ಬಿದ್ದಿದೆ .
ಕುಟುಂಬದ ಜೊತೆ ಗೋವಾಗೆ ಪ್ರವಾಸ ಹೋಗಿದ್ದ ವೇಳೆಯಲ್ಲಿ ದಿಗಂತ್ ಕುತ್ತಿಗೆಗೆ ಬಲವಾದ ಪೆಟ್ಟು ಬಿದ್ದಿರುವ ಬಗ್ಗೆ ದಿಗಂತ್ ಆಪ್ತರಿಂದ ಮಾಹಿತಿ ಲಭ್ಯವಾಗಿದ್ದು, ಸಂಜೆ 4.20ರ ಸುಮಾರಿಗೆ ಏರ್ ಲಿಫ್ಟ್ ಮೂಲಕ ಬೆಂಗಳೂರಿನ ಮಣಿಪಾಲ್‌ಗೆ ದಿಗಂತ್ ಅವರನ್ನು ಕುಟುಂಬಸ್ಥರು ಕರೆತರಲಿದ್ದಾರೆ