ನಟ ದರ್ಶನ ಪ್ರಕರಣ ಸಿಬಿಐಗೆ ಒಪ್ಪಿಸುವಂತೆ ಕೆ.ಆರ್.ಎಸ್. ಪಾರ್ಟಿ ಆಗ್ರಹ

ವಿಜಯಪುರ,ಜೂ.15: ನಟ ದರ್ಶನ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಕೆಆರ್‍ಎಸ್ ಪಕ್ಷ ಸರ್ಕಾರವನ್ನು ಒತ್ತಾಯಿಸಿದೆ.
ಅಭಿಮಾನಿಯನ್ನೇ ಕೊಲ್ಲುವ ಮೃಗೀಯ ಭಾವನೆ ಹೊಂದಿರುವ ನಟ ದರ್ಶನ ಪ್ರಭಾವಿ ರಾಜಕಾರಣಿಗಳ ಆಪ್ತರಾಗಿದ್ದು ಸಾಕ್ಷಿ ನಾಶದ ಜೊತೆಯಲ್ಲಿ ಪ್ರಕರಣದ ತನಿಖೆಯಲ್ಲಿ ಪ್ರಭಾವ ಬೀರುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ. ಅದು ಅಲ್ಲದೆ ನಟ ದರ್ಶನರವರು ತಮ್ಮನ್ನು ಈ ಪ್ರಕರಣದಿಂದ ಕೈಬಿಟ್ಟರೆ ಕೇಳಿದಷ್ಟು ಹಣ ಕೊಡುವುದಾಗಿ ಪೆÇಲೀಸ್ ಅಧಿಕಾರಿಗಳಿಗೆ ಆಮಿಷವೊಡ್ಡಿರುವುದು ಮಾಧ್ಯಮಗಳಲ್ಲಿ ಬಿತ್ತರಗೊಂಡಿದೆ. ಹಾಗಾಗಿ ಈ ಪ್ರಕರಣವನ್ನು ರಾಜ್ಯ ಸರ್ಕಾರ ಸಿಬಿಐಗೆ ವಹಿಸಬೇಕೆಂದು ಕೆಆರ್‍ಎಸ್ ಪಕ್ಷವು ಜಿಲ್ಲಾಧಿಕಾರಿ ಮೂಲಕ ಮನವಿ ಸಲ್ಲಿಸಲಾಯಿತು.
ಇದೇ ಸಂದರ್ಭದಲ್ಲಿ ರಾಜ್ಯ ಸಂಘಟನಾ ಕಾರ್ಯದರ್ಶಿ ಶಿವಾನಂದ ಯಡಹಳ್ಳಿ, ಗಣಪತಿ ರಾಠೋಡ, ದೀಪಾ ಮರನೂರ, ದುರ್ಗಪ್ಪ ಬೂದಿಹಾಳ, ಲಕ್ಷ್ಮಣ ಚಡಚಣ, ರಾಕೇಶ ಇಂಗಳಗಿ, ಪ್ರವೀಣ ಕನಸೆ ಇತರರು ಇದ್ದರು.