ನಟ ಡೇನಿಯಲ್ ಬಾಲಾಜಿ ನಿಧನ

ತಿರುವನಂತಪುರಂ,ಮಾ.೩೦-ಕಾಲಿವುಡ್ ನ ಖ್ಯಾತ ನಟ ಡೇನಿಯಲ್ ಬಾಲಾಜಿ (೪೮) ನಿಧನರಾಗಿದ್ದಾರೆ. ಶುಕ್ರವಾರ ಮಧ್ಯರಾತ್ರಿ ಎದೆನೋವಿನಿಂದ ತೀವ್ರ ಅಸ್ವಸ್ಥಗೊಂಡ ಬಾಲಾಜಿ ಅವರನ್ನು ಕುಟುಂಬಸ್ಥರು ಚೆನ್ನೈನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಆಸ್ಪತ್ರೆಗೆ ಕರೆದೊಯ್ಯುವ ಮುನ್ನವೇ ಬಾಲಾಜಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಈ ಸುದ್ದಿಯಿಂದ ಕಾಲಿವುಡ್ ಸೇರಿದಂತೆ ಇಡೀ ಸೌತ್ ಇಂಡಸ್ಟ್ರಿ ಬೆಚ್ಚಿಬಿದ್ದಿದೆ. ಅವರ ನಿಧನಕ್ಕೆ ಹಲವು ಗಣ್ಯರು ಕಂಬನಿ ಮಿಡಿದಿದ್ದಾರೆ.
ತೆರೆಯ ಮೇಲೆ ಹೀರೋ ಆಗಿ ಸಿನಿಮಾ ಪಯಣ ಆರಂಭಿಸಿದ ಬಾಲಾಜಿ ಹೆಚ್ಚಾಗಿ ಸಿನಿಮಾಗಳಲ್ಲಿ ವಿಲನ್ ಪಾತ್ರಗಳಲ್ಲಿ ನಟಿಸಿದ್ದಾರೆ.ತೆಲುಗು, ತಮಿಳು, ಮಲಯಾಳಂ ಮತ್ತು ಕನ್ನಡದಲ್ಲಿ ಹಲವಾರು ಚಿತ್ರಗಳಲ್ಲಿ ನಟಿಸಿದ್ದಾರೆ.
ನೇತ್ರದಾನ:ಇದೀಗ ಅವರ ನಿಧನದ ನಂತರ ಡೇನಿಯಲ್ ಬಾಲಾಜಿ ಅವರ ಕಣ್ಣುಗಳನ್ನು ಅಲ್ಲಿನ ಸರ್ಕಾರಿ ಆಸ್ಪತ್ರೆಯವರು ಸಂರಕ್ಷಿಸಿದ್ದು, ಇಬ್ಬರಿಗೆ ದೃಷ್ಟಿ ನೀಡಲು ನೆರವಾಗಿದ್ದಾರೆ.
ಡೇನಿಯಲ್ ಬಾಲಾಜಿ ತಮಿಳು, ತೆಲುಗು, ಮಲಯಾಳಂ ಮತ್ತು ಕನ್ನಡದಲ್ಲಿ ೫೦ ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ನಟನೆಗೆ ಬರುವ ಮೊದಲು, ಅವರು ಚಲನಚಿತ್ರಗಳಿಗೆ ಯೂನಿಟ್ ಪ್ರೊಡಕ್ಷನ್ ಮ್ಯಾನೇಜರ್ ಆಗಿ ಕೆಲಸ ಮಾಡಿದರು. ಅದರ ನಂತರ, ಅವರು ತಮಿಳು ಧಾರಾವಾಹಿ ’ಚಿಟ್ಟಿ’ ಮೂಲಕ ನಟರಾಗಿ ಪಾದಾರ್ಪಣೆ ಮಾಡಿದರು. ಈ ಧಾರಾವಾಹಿ ತೆಲುಗಿನಲ್ಲಿ ’ಪಿನ್ನಿ’ ಎಂದು ಡಬ್ ಆಗಿದೆ. ‘ಏಪ್ರಿಲ್ ಮಡದಿಲ್’ ಚಿತ್ರದ ಮೂಲಕ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿದ ಬಾಲಾಜಿ. ಅದರ ನಂತರ ಅವಕಾಶಗಳು ಬರುತ್ತಲೇ ಇರುತ್ತವೆ. ಹಲವು ಸ್ಟಾರ್ ಹೀರೋ ಸಿನಿಮಾಗಳಲ್ಲಿ ಕ್ಯಾರೆಕ್ಟರ್ ಆರ್ಟಿಸ್ಟ್ ಆಗಿ, ವಿಲನ್ ಆಗಿ ನಟಿಸಿದ್ದಾರೆ. ಕಮಲ್ ಹಾಸನ್ ಅಭಿನಯದ ’ರಾಘವನ್’ ಚಿತ್ರದಲ್ಲಿ ಡೇನಿಯಲ್ ಅಭಿನಯಕ್ಕೆ ಮೆಚ್ಚುಗೆ ವ್ಯಕ್ತವಾಗಿತ್ತು.
ತೆಲುಗಿನಲ್ಲೂ ಸ್ಟಾರ್ ಹೀರೋಗಳ ಜೊತೆ ಸಿನಿಮಾ ಮಾಡಿದ್ದಾರೆ. ಬಾಲಾಜಿ ೨೦೦೪ ರಲ್ಲಿ ಎನ್‌ಟಿಆರ್ ಅವರ ’ಸಾಂಬಾ’ ಚಿತ್ರದ ಮೂಲಕ ಟಾಲಿವುಡ್‌ಗೆ ಎಂಟ್ರಿ ಕೊಟ್ಟರು. ಆ ನಂತರ ವೆಂಕಟೇಶ್ ಜತೆಗಿನ ‘ಘರ್ಷಣ’ ಸಿನಿಮಾದಲ್ಲಿ ನಟಿಸಿ ಇಂಪ್ರೆಸ್ ಆಗಿದ್ದರು. ಈ ಸಿನಿಮಾದಲ್ಲಿ ಗನ್ ನಿಂದ ಶೂಟ್ ಮಾಡಿಕೊಳ್ಳುವ ದೃಶ್ಯ ಜನಪ್ರಿಯತೆ ಪಡೆದಿದೆ.ಅದಾದ ನಂತರ ರಾಮ್ ಚರಣ್ ಮೊದಲ ಸಿನಿಮಾ ’ಚೀರುಟ’ದಲ್ಲೂ ವಿಲನ್ ರೋಲ್ ನಲ್ಲಿ ಕಾಣಿಸಿಕೊಂಡಿದ್ದರು. ಅದೇ ರೀತಿ ನಾಗ ಚೈತನ್ಯ ಅಭಿನಯದ ’ಸಾಹಸಂ ಶ್ವಾಸ ಸಾಗಿಪೋ’ ಹಾಗೂ ಇತ್ತೀಚೆಗೆ ನಾನಿ ಜೊತೆ ’ಟಕ್ ಜಗದೀಶ್’ ಚಿತ್ರದಲ್ಲೂ ಬಾಲಾಜಿ ಮಿಂಚಿದ್ದರು. ಟಾಲಿವುಡ್ ನಲ್ಲೂ ಒಳ್ಳೆಯ ಸಿನಿಮಾಗಳಲ್ಲಿ ನಟಿಸಿದ್ದಾರೆ. ಹಲವು ವಿಭಿನ್ನ ಪಾತ್ರಗಳನ್ನು ನಿರ್ವಹಿಸಿರುವ ಅವರ ಚಿಕ್ಕ ವಯಸ್ಸಿನಲ್ಲಿಯೇ ನಿಧನರಾದ ಬಗ್ಗೆ ಪ್ರೇಕ್ಷಕ ವರ್ಗ ಅಪಾರ ವೇದನೆ ವ್ಯಕ್ತಪಡಿಸಿದ್ದಾರೆ.ಅವರು ಚಲನಚಿತ್ರಗಳ ದೃಶ್ಯಗಳನ್ನು ಹಂಚಿಕೊಳ್ಳುತ್ತಿದ್ದಾರೆ ಮತ್ತು ಆರ್ ಐ ಪಿ ಡೇನಿಯಲ್ ಬಾಲಾಜಿ ಎಂದು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡುತ್ತಿದ್ದಾರೆ.
ಡೇನಿಯಲ್ ಬಾಲಾಜಿ ೧೯೭೫ ರಲ್ಲಿ ಜನಿಸಿದ್ದು. ಬಾಲ್ಯದಿಂದಲೂ ಚಿತ್ರರಂಗದಲ್ಲಿ ಆಸಕ್ತಿ ಹೊಂದಿದ್ದ ತಾರಾಮಣಿ ಫಿಲ್ಕ್ ಕಾಲೇಜಿಗೆ ಸೇರಿ ತರಬೇತಿ ಪಡೆದರು. ಡೇನಿಯಲ್ ಬಾಲಾಜಿ ಅವರ ಕನಸ್ಸು ಒಳ್ಳೆಯ ನಿರ್ದೇಶಕನಾಗಬೇಕು ಎಂಬುದು ಆದರೆ ಆ ಆಸೆ ಈಡೇರದೆ ಇಹಲೋಕ ತ್ಯಜಿಸಿದ್ದಾರೆ. ತಾರಾಮಣಿ ಕಾಲೇಜಿನಲ್ಲಿ ತರಬೇತಿ ಮುಗಿಸಿದ ನಂತರ ಕಮಲ್ ಹಾಸನ್ ಅಭಿನಯದ ಮರುದನಾಯಕಂ ಚಿತ್ರದಲ್ಲಿ ಅವಕಾಶ ಸಿಕ್ಕಿತು. ನಿರ್ದೇಶಕನಾಗುವ ಆಸೆಯಿಂದ ಈ ಚಿತ್ರಕ್ಕೆ ಪ್ರೊಡಕ್ಷನ್ ಮ್ಯಾನೇಜರ್ ಆಗಿ ಬಹಳ ದಿನ ಕೆಲಸ ಮಾಡಿದ್ದಾರೆ. ಈ ಸಿನಿಮಾ ಮಾಡುವಾಗ ಅವರಿಗೆ ರಾಧಿಕಾ ಶರತ್ ಕುಮಾರ್ ಅಭಿನಯದ ಚಿಟ್ಟಿ.. (ಪಿನ್ನಿ) ಧಾರಾವಾಹಿಯಲ್ಲಿ ಅವಕಾಶ ಸಿಕ್ಕಿದೆ. ಹಾಗಾಗಿ ಬೆಳ್ಳಿತೆರೆಗೂ ಮುನ್ನ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿದರು. ಈ ಧಾರಾವಾಹಿಯಲ್ಲಿ ಅವರು ಡೇನಿಯಲ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅಂದಿನಿಂದ ಅವರನ್ನು ಅಭಿಮಾನಿಗಳು ಡೇನಿಯಲ್ ಬಾಲಾಜಿ ಎಂದು ಕರೆಯುತ್ತಾರೆ.