ನಟ ಚಿರಂಜೀವಿ ಬರ್ತಡೆಗೆರಕ್ತದಾನ ಮಾಡಿದ ಅಭಿಮಾನಿಗಳು

(ಸಂಜೆವಾಣಿ ವಾರ್ತೆ)ಬಳ್ಳಾರಿ, ಆ.20: ನಗರದ ಸ್ಪಂದನ ಬ್ಲಡ್ ಬ್ಯಾಂಕಿನಲ್ಲಿ ಇಂದು ತೆಲುಗು ಚಲನ‌ಚಿತ್ರ ನಟ ಚಿರಂಜೀವಿ ಅವರ ಜನ್ಮ ದಿನದ ಅಂಗವಾಗಿ ಅವರ 30 ಕ್ಕೂ ಹೆಚ್ಚು  ಅಭಿಮಾನಿಗಳು ರಕ್ತದಾನ ಮಾಡಿದರು.ಈ‌ ಕಾರ್ಯಕ್ಕೆ ಸ್ವತಃ ರಕ್ತದಾನ ಮಾಡುವ ಮೂಲಕ ಬುಡಾ ಮಾಜಿ ಅಧ್ಯಕ್ಷ ಮಾರುತಿ ಎಸ್ ಪ್ರಸಾದ್ ಚಾಲನೆ ನೀಡಿ, ರಕ್ತದಾನ ಮಾಡಿದವರಿಗೆ ಡಾ.ಮುಖೇಶ್ ಕುಡಪಲಿ ಅವರೊಂದಿಗೆ ಪ್ರಮಾಣ ಪತ್ರ ವಿತರಿಸಿದರು.ಅನ್ನದಾನ, ಅಕ್ಷರ ದಾನ, ನೇತ್ರ ದಾನ ಹೀಗೆ ಸನಾಜದಲ್ಲಿ ನೊಂದವರಿಗೆ ವಿವಿಧ ರೀತಿಯ ದಾನಗಳನ್ನು ಮಾಡಲಾಗುತ್ತದೆ.  ಬೇರೆ ಏನನ್ನಾದರೂ ಮುಕ್ತ ಮಾರುಕಟ್ಟೆಯಲ್ಲಿ  ಸುಲಭವಾಗಿ ಹಣ ಕೊಟ್ಟು ಪಡೆಯಬಹುದು. ಆದರೆ ರಕ್ತ ಹಾಗಲ್ಲ, ದಾನುಗಳಿಂದಲೇ ದೊರೆಯಬೇಕು. ಅದಕ್ಕಾಗಿ ಯುವ ಜನತೆ ರಕ್ತದಾನ ಮಾಡಿ ಸಮಾಜ ಸೇವೆಗೆ ಮುಂದಾಗಬೇಕು ಎಂದರು.ಚಿರಂಜೀವ ಅಭಿಮಾನಿಗಳ ಸಂಘದ ವೆಂಕಟೇಶ್ ಮತ್ತಿತರರು ಇದ್ದರು.