ನಟ ಕಿರಣ್‌ರಾಜ್‌ಗೆ ಹುಟ್ಟುಹಬ್ಬ ಸಂಭ್ರಮ

ಬೆಂಗಳೂರು,ಜು.೫-ಕನ್ನಡತಿ ಧಾರಾವಾಹಿ ಮೂಲಕ ಜನಮನ ಗೆದ್ದ ನಟ ಕಿರಣ್‌ರಾಜ್‌ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ.
ಕನ್ನಡ ಚಿತ್ರರಂಗ ಮತ್ತು ಕಿರುತೆರೆಯಲ್ಲಿ ಸಕ್ರಿಯವಾಗಿರುವ ಯುವನಟ. ಕಿರಣ್ ೧೯೯೩, ಜುಲೈ ೫ರಂದು ಜನಿಸಿದ್ದಾರೆ. ಕನ್ನಡದಲ್ಲಿ ಮಾತ್ರವಲ್ಲದೆ ತೆಲುಗು ಮತ್ತು ಹಿಂದಿಯ ಕೆಲ ಸೀರಿಯಲ್ ಮತ್ತು ಚಿತ್ರಗಳಲ್ಲೂ ಬಣ್ಣ ಹಚ್ಚಿದ್ದಾರೆ.
ಕನ್ನಡತಿ ಧಾರಾವಾಹಿ ಮುಗಿದ ಮೇಲೆ ಕಿರಣ್ ರಾಜ್ ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ನಾನು ಸಿನಿಮಾಗೆ ಹೆಚ್ಚು ಸಮಯ ಕೊಡ್ತೇನೆ ಎಂದು ಈ ಹಿಂದೆ ಹೇಳಿದ್ದ ಕಿರಣ್‌ರಾಜ್‌ಅದರಂತೆಯೇ ಫಿಲ್ಮ್ ಶೂಟಿಂಗ್ ನಲ್ಲಿ ತೊಡಗಿದ್ದಾರೆ.
ಅಲ್ಲದೇ ಕಿರಣ್ ಮಾರ್ಚ್ ೨೨, ಅಸತೋಮ ಸದ್ಗಮಯ, ಜೀವ್ನಾನೇ ನಾಟ್ಕ ಸ್ವಾಮಿ ಚಿತ್ರಗಳಲ್ಲಿ ನಾಯಕನಾಗಿ ನಟಿಸಿದ್ದಾರೆ. ಹಾಗೇ ತೆಲುಗುವಿನಲ್ಲಿ ನುವ್ವೇ ನಾ ಪ್ರಾಣಂ, ವಿಕ್ರಮ್ ಗೌಡ ಮುಂತಾದ ಚಿತ್ರಗಳಲ್ಲಿ ನಾಯಕನಾಗಿ ನಟಿಸಿದ್ದಾರೆ.
ಕಿರಣ್ ರಾಜ್ ರಾನಿ ಸಿನಿಮಾ ಮಾಡ್ತಾ ಇದ್ದಾರೆ. ಇವತ್ತು ಅವರ ಹುಟ್ಟುಹಬ್ಬ ಇರುವ ಕಾರಣ ರಾನಿ ಸಿನಿಮಾ ಟೀಸರ್ ಬಿಡುಗಡೆ ಮಾಡಲಾಗಿದೆ. ಈಗಾಗಲೇ ಪೋಸ್ಟರ್ ಮೂಲಕ ಸಿನಿಮಾ ಕುತೂಹಲ ಮೂಡಿಸುತ್ತಿದೆ. ಪೋಸ್ಟರ್ ನಲ್ಲಿ ಕಿರಣ್ ರಾಜ್ ಸಖತ್ ಮಾಸ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಸದ್ಯ ಈಗ ಟೀಸರ್‌ನೋಡಿದ ಜನರು ಭಾರೀ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.