ನಟ ಉಪೇಂದ್ರ ವಿರುದ್ಧ ದೂರು ದಾಖಲು

ಸಂಜೆವಾಣಿ ವಾರ್ತೆ
ಕೊಳ್ಳೇಗಾಲ: ಆ 15:- ದೂರ ದರ್ಶನದಲ್ಲಿ ಸಂದರ್ಶನದ ವೇಳೆ ದಲಿತ ಸಮುದಾಯವನ್ನು ಅವಮಾನಿಸುವ ರೀತಿಯಲ್ಲಿ ಮಾತ ನಾಡಿರುವ ಚಲನಚಿತ್ರ ನಟ ಉಪೇಂದ್ರ ವಿರುದ್ಧ ನಗರದ ಮಹಾನಾಯಕ ಭೀಮರಾವ್ ಆಟೋ ಮಾಲೀಕರು ಹಾಗೂ ಚಾಲಕರ ಸಂಘ ಪಟ್ಟಣ ಪೆÇಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಆ.12ರಂದು ಊರು ಎಂದರೆ ಹೊಲಿಗೇರಿ ಇರು ಇದೆ ಎಂಬ ಮಾತುಗಳನ್ನಾಡಿರುವ ಉಪೇಂದ್ರ, ರಾಜ್ಯದಲ್ಲಿರುವ ಬಹುಸಂಖ್ಯಾತ ಪರಿಶಿಷ್ಟ ಜಾತಿ ಸಮುದಾಯಕ್ಕೆ ಅವಮಾನ ಮಾಡಿದ್ದಾರೆ. ಹಾಗಾಗಿ, ಉಪೇಂದ್ರ ವಿರುದ್ದ ಎಸ್ಸಿ, ಎಸ್ಟಿ ದೌರ್ಜನ್ಯ ಕಾಯ್ದೆ ಯಡಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸಂಘದ ಅಧ್ಯಕ್ಷ ಹರೀಶ್ ಕುಮಾರ್, ಗೌರವಾಧ್ಯಕ್ಷ ಬಿ.ಮೂರ್ತಿ, ಉಪಾಧ್ಯಕ್ಷ ಮಹೇಶ್, ಕಾರ್ಯ ದರ್ಶಿ ನೀಲಪ್ಪ, ಖಜಾಂಚಿ ಪ್ರದೀಪ್, ಮುಖಂಡರು ರೇಚಣ್ಣ, ಲೋಕೇಶ್, ಪರಮೇಶ್, ಅರುಣ್, ವಿನೋದ್, ವೆಂಕಟೇಶ್, ರಮೇಶ್, ನವಿನ್, ಶಿವಾನಂದ್ ಠಾಣೆಗೆ ದೂರು ನೀಡಿದ್ದಾರೆ.
ಠಾಣೆಯಲ್ಲಿ ದೂರು ಸ್ವೀಕರಿಸಿದ ಹೆಡ್ ಕಾನ್ಸ್ಟೇಬಲ್ ರಾಜೀವ್, ಇದೇ ರೀತಿಯ ಪ್ರಕರಣ ಈಗಾಗಲೇ ಬೆಂಗಳೂರಿನ ಹಲಸೂರು ಗೇಟ್ ಪೆÇಲೀಸ್ ಠಾಣೆ ಯಲ್ಲಿ ನಟ ಉಪೇಂದ್ರ ವಿರುದ್ಧ ಎಸ್ಸಿ, ಎಸ್ಟಿ ದೌರ್ಜನ್ಯ ಕಾಯ್ದೆಯಡಿಯಲ್ಲಿ ದಾಖಲಾಗಿದೆ. ಹಾಗಾಗಿ, ಈ ದೂರನ್ನು ಎಸ್‍ಪಿ ಮೂಲಕ ಹಲಸೂರು ಗೇಟ್ ಪೆÇಲೀಸ್ ಠಾಣೆಗೆ ರವಾನೆ ಮಾಡುವುದಾಗಿ ತಿಳಿಸಿದರು.