ನಟ ಅಮೀರ್ ಖಾನ್‌ಗೆ ಸೋಂಕು


ಮುಂಬೈ,ಮಾ.೨೪- ಬಾಲಿವುಡ್ ನಟ ಅಮೀರ್‌ಖಾನ್ ಅವರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಮಹಾರಾಷ್ಟ್ರದಲ್ಲಿ ಕೊರೊನಾ ೨ನೇ ಅಲೆ ಆರಂಭವಾಗಿದ್ದು, ಸೋಂಕಿತರ ಸಂಖ್ಯೆ ದಿನೇ ದಿನೇ ಏರುತ್ತಿದೆ. ಇತ್ತೀಚೆಗಷ್ಟೆ ರಣ್‌ವೀರ್ ಕಪೂರ್‌ಗೆ ಕೊರೊನಾ ಸೋಂಕು ದೃಢಪಟ್ಟು ಅವರು ಹೋಂ ಕ್ವಾರಂಟೈನ್‌ನಲ್ಲಿದ್ದಾರೆ. ಈಗ ನಟ ಅಮೀರ್‌ಖಾನ್ ಅವರಿಗೆ ಸೋಂಕು ದೃಢಪಟ್ಟಿದ್ದು, ಅವರ ಕೊರೊನಾ ವರದಿ ಪಾಸಿಟೀವ್ ಆಗಿದೆ. ಕೊರೊನಾ ಸೋಂಕು ತಗುಲಿರುವ ೫೬ ವರ್ಷದ ಅಮೀರ್‌ಖಾನ್ ಈಗ ಹೋಂ ಕ್ವಾರಂಟೈನ್ಗೆ ಒಳಗಾಗಿದ್ದಾರೆ.
೨೦೨೦ರ ಜೂನ್‌ನಲ್ಲಿ ಅಮೀರ್‌ಖಾನ್ ಅವರ ಮನೆಗೆಲಸದವರಿಗೆ ಕೊರೊನಾ ಸೋಂಕು ತಗುಲಿತ್ತು. ಆಗ ಅಮೀರ್‌ಖಾನ್ ಸೇರಿದಂತೆ ಅವರ ಕುಟುಂಬದವರಿಗೆ ಕೊರೊನಾ ವರದಿ ನೆಗೆಟೀವ್ ಬಂದಿತ್ತು, ಈಗ ಕೊರೊನಾ ೨ನೇ ಅಲೆಯ ಸಂದರ್ಭದಲ್ಲಿ ನಟ ಅಮೀರ್‌ಖಾನ್ ಅವರಿಗೆ ಕೊರೊನಾ ಸೋಂಕು ಆಗಿ ಅವರು ಹೋ ಕ್ವಾರಂಟೈನ್‌ನಲ್ಲಿರುವುದನ್ನು ಅಮೀರ್‌ಖಾನ್ ಕ್ತಾರರು ಖಚಿತಪಡಿಸಿದ್ದಾರೆ.
ಇತ್ತೀಚಿಗಷ್ಟೆ ಸಾಮಾಜಿಕ ಜಾಲತಾಣಕ್ಕೆ ಗುಡ್ ಬೈ ಹೇಳಿ ಸದ್ದು ಮಾಡಿದ್ದ ಅಮೀರ್‌ಖಾನ್, ಇದೀಗ ಕೊರೊನಾದಿಂದ
ಸುದ್ದಿಯಾಗಿದ್ದಾರೆ.