ನಟ ಅನಿರುಧ್ ಸಾಮಾಜಿಕ ಕಳಕಳಿ: ಸ್ಪಂದಿಸಿದ ಪಾಲಿಕೆ ಸಿಬ್ಬಂದಿ

ಬೆಂಗಳೂರು, ನ.11- ನಗರದ ಪ್ರಮುಖ ರಸ್ತೆಯಲ್ಲಿ ರಾಶಿ ರಾಶಿ ಕಸ ಬಿದ್ದರೂ ಅದರ ಬಗ್ಗೆ ತಲೆಕೆಡಿಸಿಕೊಳ್ಳದೆ ನಮಗ್ಯಾಕೆ ಉಸಾಬರಿ ಎನ್ನುವ ಮನೋಭಾವ ಹೆಚ್ಚು…

ನಟ‌ ಅನಿರುದ್ದ್ ಸಾಮಾಜಿಕ ಕಳಕಳಿ ಪ್ರದರ್ಶಿಸಿ ಕಸದ ರಾಶಿಯನ್ನು ತೆರವು ಮಾಡಿಸುವ ಮೂಲಕ ಕಸ ಬಿದ್ದ ಜಾಗವನ್ನು ಸ್ವಚ್ಚ ಮಾಡಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕುಮಾರಸ್ವಾಮಿ ಬಡಾವಣೆಯ ಮೊದಲ ಹಂತದ ಮುಖ್ಯರಸ್ತೆಯಲ್ಲಿ ರಾಶಿರಾಶಿ ಕಸ ಬಿದ್ದಿದ್ದನ್ನು ಛಾಯಾಚಿತ್ರ ತೆಗೆದು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸುತ್ತಿದ್ದಂತೆ ಮಾಹಾನಗರ ಪಾಲಿಕೆ ಸಿಬ್ಬಂದಿ ಎತ್ತೆಚ್ಚಿಕೊಂಡು ಸ್ವಚ್ಚತೆ ಮಾಡಿದೆ

ಅನಿರುದ್ಧ್ ಅವರು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ ಕಸದ ರಾಶಿಯ ಫೋಟೋಗಳನ್ನು ನೋಡಿದ ಮಹಾನಗರಪಾಲಿಕೆ ಆಯುಕ್ತ ಮಂಜುನಾಥ್ ಪ್ರಸಾದ್ ತಕ್ಷಣ ಸ್ಪಂದಿಸುವ ಜೊತೆಗೆ ಅನಿರುದ್ಧ್ ಅವರನ್ನು ಸಂಪರ್ಕಿಸಿ ಯಾವ ಪ್ರದೇಶಗಳಲ್ಲಿ ಕಸದ ರಾಶಿ ಎನ್ನುವುದು ತಿಳಿದು ತಕ್ಷಣ ಅದನ್ನು ತೆರವು ಮಾಡಿ ಸುಂದರ ರಸ್ತೆಯನ್ನಾಗಿ ಮಾಡಿದ್ದಾರೆ.

ಎಲ್ಲೆಲ್ಲಿ ಕಸದ ರಾಶಿ ಬಿದ್ದಿದೆ ಎನ್ನುವುದನ್ನು ತಿಳಿದು ಮೂರೇ ದಿನದಲ್ಲಿ ಪಾಲಿಕೆ ಅಧಿಕಾರಿಗಳು ಮತ್ತು ಸಿಬ್ಬಂದಿ ಗಳನ್ನು ಕಳುಹಿಸಿ ಸ್ವಚ್ಛ ಮಾಡಿದ್ದಾರೆ ಇದು ಶ್ಲಾಘನೀಯ ಎಂದು ನಟ ಅನಿರುದ್ಧ ಹೇಳಿದ್ದಾರೆ.

ಜಾಗದಲ್ಲಿ ಮತ್ತೆ ಯಾರು ಕಸ ಸರಿಯಾದ ಹಾಗೆ ಸಿಸಿಟಿವಿಯನ್ನು ಅಳವಡಿಸಿದ್ದಾರೆ.ಹೀಗಾಗಿ ಪಾಲಿಕೆ ಆಯುಕ್ತ ಮಂಜುನಾಥ್ ಪ್ರಸಾದ್,ವಲಯ ಸೂಪ್ರ ವೈಸರ್ ಸೋಮಶೇಖರ್ ಪಾಟೀಲ್,ವಿಭಾಗೀಯ ಸೂಪರ್‌ ವೈಸರ್ ವೀರೇಶ್,ವಿಭಾಗೀಯ ಮಾರ್ಷಲ್ ಸೂಪರ್ ವೈಸರ್ ಶಿವ ಸೇರಿದಂತೆ 35 ಅಧಿಕಾರಿ ಸಿಬ್ಬಂದಿ ಪಾಲ್ಗೊಂಡಿದ್ದರು ಅವರಿಗೆಲ್ಲರಿಗೂ ಧನ್ಯವಾದ ಹೇಳಿದ್ದಾರೆ.

ನಾಳೆ ಸನ್ಮಾನ:

ಕಸದ ರಾಶಿಯನ್ನು ತೆಗೆದ ಬಿಬಿಎಂಪಿ ಅಧಿಕಾರಿಗಳು ಮತ್ತು ಪೌರ ಕಾರ್ಮಿಕರಿಗಾಗಿ ನಾಳೆ ಬೆಳಗ್ಗೆ 11 ಗಂಟೆಗೆ ಕುಮಾರಸ್ವಾಮಿ ಲೇಔಟ್ ಮುಖ್ಯರಸ್ತೆಯಲ್ಲಿ
ಸನ್ಮಾನ ಸಮಾರಂಭವನ್ನು ನಟ ಅನಿರುದ್ಧ ಹಮ್ಮಿಕೊಂಡಿದ್ದಾರೆ.

ಈ ರೀತಿ ಮಾಡುವುದರಿಂದ ಪಾಲಿಕೆ ಸಿಬ್ಬಂದಿಯನ್ನು ಪ್ರೋತ್ಸಾಹಿಸಿದಂತೆ ಆಗುತ್ತದೆ ಇಂತಹ ಕೆಲಸದಲ್ಲಿ ನಾವೆಲ್ಲ ಕೈಜೋಡಿಸೋಣ ಎಂದು ಅವರು ಹೇಳಿದ್ದಾರೆ.