ನಟಿ ಸೊನಾಲಿ ಬೇಂದ್ರೆಗೆ ಪಾಕ್ ಕ್ರಿಕೆಟರ್ ಶೋಯೆಬ್ ಅಕ್ತರ್ ಕಿಡ್ನ್ಯಾಪ್ ಮಾಡುವ ಬೆದರಿಕೆ ಹಾಕಿದ್ದರು!

ರಾಜ್ ಠಾಕ್ರೆ ವಿವಾಹವಾಗಲು ಇಚ್ಚಿಸಿದ್ದರು!

ಬಾಲಿವುಡ್ ನಟಿ ಸೊನಾಲಿ ಬೇಂದ್ರೆ ನಿನ್ನೆ ೪೬ ವರ್ಷಗಳನ್ನು ಪೂರೈಸಿದರು . ಸರ್ಫ್ ರೋಶ್, ಹಮ್ ಸಾಥ್ ಸಾಥ್ ಹೈ…… ಮೊದಲಾದ ಯಶಸ್ವಿ ಫಿಲ್ಮ್ ಗಳನ್ನು ನೀಡಿದ ನಟಿ ಸೋನಾಲಿ ಬೇಂದ್ರೆ ಕ್ರಿಕೆಟ್ ದಿಗ್ಗಜರಿಂದ ಹಿಡಿದು ರಾಜಕಾರಣಿಗಳ ತನಕ ಯವ್ವನದಲ್ಲಿ ಆಕರ್ಷಿಸಿದ್ದು ಅನೇಕರಿಗೆ ನೆನಪಿರಲಾರದು.
ಹಲವಾರು ಪ್ರಸಿದ್ಧರು ಆ ದಿನಗಳಲ್ಲಿ ಸೋನಾಲಿ ಬೇಂದ್ರೆಯನ್ನು ವಿವಾಹವಾಗಲು ತುದಿಗಾಲಲ್ಲಿ ನಿಂತಿದ್ದರು. ಇಂದಿನ ಪ್ರಮುಖ ರಾಜಕಾರಣಿ ಮಹಾರಾಷ್ಟ್ರ ನವನಿರ್ಮಾಣ ಸೇನೆಯ ಅಧ್ಯಕ್ಷ ರಾಜ್ ಠಾಕ್ರೆ ಅವರು ಒಂದೊಮ್ಮೆ ಸೊನಾಲಿ ಬೇಂದ್ರೆಯವರನ್ನು ವಿವಾಹವಾಗಲು ಇಚ್ಛಿ ಸಿದ್ದೂ ಇದೆ! ರಾಜ್ ಠಾಕ್ರೆ ಮತ್ತು ಸೊನಾಲಿ ಬೇಂದ್ರೆಯವರು ಆ ದಿನಗಳಲ್ಲಿ ಬಹಳಷ್ಟು ಸಮೀಪಕ್ಕೆ ಬಂದಿದ್ದರು. ಇಬ್ಬರೂ ಪರಸ್ಪರರನ್ನು ಇಷ್ಟಪಟ್ಟಿದ್ದರು .ಆದರೆ ಸೊನಾಲಿ ಬೇಂದ್ರೆ ಅವರು ರಾಜ್ ಠಾಕ್ರೆಯ ಸಮೀಪಕ್ಕೆ ಬಂದಿದ್ದಾಗ ರಾಜ್ ಠಾಕ್ರೆ ಆಗಲೇ ವಿವಾಹಿತ ರಾಗಿದ್ದರು .

ಆ ದಿನಗಳಲ್ಲಿ ರಾಜ್ ಶಿವಸೇನೆಯ ಯುವ ನೇತಾರ ಆಗಿದ್ದು ಮೈಕಲ್ ಜಾಕ್ಸನ್ ಸಂಗೀತ ಕಾರ್ಯಕ್ರಮವನ್ನು ಮುಂಬಯಿಯಲ್ಲಿ ಆಯೋಜಿಸಿದ್ದರು. ಆವಾಗ ವಿಮಾನ ನಿಲ್ದಾಣದಲ್ಲಿ ಮರಾಠಿ ಪಾರಂಪರಿಕ ಸೀರೆಯಲ್ಲಿ ಮೈಕಲ್ ಜಾಕ್ಸನ್ ರನ್ನು ಸ್ವಾಗತಿಸಿದ್ದು ಸೊನಾಲಿ ಬೇಂದ್ರೆ .ಈ ದೃಶ್ಯ ಆ ದಿನಗಳಲ್ಲಿ ಬಹಳ ಚರ್ಚೆಯಾಗಿತ್ತು. ತಾನು ವಿವಾಹಿತನಾಗಿದ್ದರೂ ರಾಜ್ ಠಾಕ್ರೆಯವರು ಸೋನಾಲಿಯನ್ನು ವಿವಾಹವಾಗುವುದಾಗಿ ಪಟ್ಟುಹಿಡಿದಿದ್ದರು. ಈ ಮಾತು ಶಿವಸೇನೆಯ ಆಗಿನ ಅಧ್ಯಕ್ಷರಾದ ಬಾಳಾ ಸಾಹೇಬ್ ಠಾಕ್ರೆ ಯವರಿಗೆ ತಿಳಿದುಬಂದಾಗ ಅವರು ಇಬ್ಬರ ವಿವಾಹವನ್ನು ಯಾವುದೇ ದಾಕ್ಷಿಣ್ಯವಿಲ್ಲದೆ ನಿರಾಕರಿಸಿದರು. ಅಂದಿನಿಂದ ಇವರಿಬ್ಬರು ನಂತರ ದೂರವಾದರು.
ಕ್ರಿಕೆಟರ್ ನ ಪ್ರೀತಿ:
ಪಾಕಿಸ್ತಾನಿ ಕ್ರಿಕೆಟರ್ ಶೋಯಬ್ ಅಖ್ತರ್ ಮೊದಲ ಭೇಟಿ ಭಾರತ ಪ್ರವಾಸದ ಸಮಯ ಆಯ್ತು. ಮೊದಲ ಭೇಟಿಯಲ್ಲೇ ಶೋಯೆಬ್ ಅಖ್ತರ್ ಸೊನಾಲಿ ಬೇಂದ್ರೆ ಯ ಸೌಂದರ್ಯಕ್ಕೆ ಬೋಲ್ಡ್ ಆದರು. ಅದಕ್ಕಿಂತ ಮೊದಲೇ ಸೊನಾಲಿಯ ಫಿಲ್ಮ್ ನೋಡಿ ಬಹಳಷ್ಟು ಇಷ್ಟಪಟ್ಟಿದ್ದರು. ಸೋನಾಲಿಯನ್ನು ಮೊದಲಬಾರಿಗೆ ಫಿಲ್ಮ್ ಇಂಗ್ಲಿಷ್ ಬಾಬು ದೇಸಿ ಮ್ಯಾಮ್ ನಲ್ಲಿ ನೋಡಿದ್ದರು. ಅಂದಿನಿಂದಲೇ ಸೊನಾಲಿ ಯನ್ನು ಇಷ್ಟಪಟ್ಟಿದ್ದರು.
ಒಂದು ಸಂದರ್ಶನದಲ್ಲಿ ತನ್ನ ಏಕಮುಖದ ಪ್ರೀತಿಯನ್ನು ಶೋಯೆಬ್ ಬಹಿರಂಗಪಡಿಸಿದ್ದರು. ಒಂದು ವೇಳೆ ತನ್ನ ಪ್ರೀತಿಯನ್ನು ನಿರಾಕರಿಸಿದರೆ ಕಿಡ್ನಾಪ್ ಮಾಡುವುದಾಗಿಯೂ ನಿಶ್ಚಯಿಸಿದ್ದರಂತೆ.

ಆದರೆ ಸಂದರ್ಶನದಲ್ಲಿ ಸೋನಾಲಿ ಯವರನ್ನು ಈ ಬಗ್ಗೆ ಕೇಳಿದರೆ “ಶೋಯೆಬ್ ಅಖ್ತರ್ ಎನ್ನುವ ಹೆಸರಿನ ಕ್ರಿಕೆಟರ್ ಇದ್ದಾರೆ ಎನ್ನುವುದೇ ನನಗೆ ತಿಳಿದಿಲ್ಲ. ಯಾಕೆಂದರೆ ನನಗೆ ಕ್ರಿಕೆಟ್ ನಲ್ಲಿ ಆಸಕ್ತಿ ಇಲ್ಲ. ಒಂದು ವೇಳೆ ಅವರು ನನ್ನ ಫ್ಯಾನ್ ಆಗಿದ್ದರೆ ಅದಕ್ಕಾಗಿ ನಾನು ಶುಕ್ರಿಯಾ ಎನ್ನುವೆ” ಎಂದಿದ್ದರು. ಸೋನಾಲಿಯವರ ಈ ಮಾತು ಕೇಳಿದ್ದರೆ ಕ್ರಿಕೆಟರ್ ನ ಹೃದಯ ಚೂರುಚೂರಾಗಿ ಹೋಗಬಹುದು.
ಸುನಿಲ್ ಶೆಟ್ಟಿ ಲವ್ :
೯೦ರ ದಶಕದಲ್ಲಿ ಎಲ್ಲಕ್ಕಿಂತ ಹೆಚ್ಚು ಚರ್ಚೆ ಹುಟ್ಟಿಸಿದ ಜೋಡಿ ಎಂದರೆ ಸೊನಾಲಿ ಬೇಂದ್ರೆ ಮತ್ತು ಸುನಿಲ್ ಶೆಟ್ಟಿ ಜೋಡಿ. ಬಹಳ ಸುದ್ದಿ ಹುಟ್ಟಿಸಿದವರು. ಇವರಿಬ್ಬರು ರಕ್ಷಕ್ ಸಪೂತ್, ಮತ್ತು ತಕ್ರಾರ್… ಫಿಲ್ಮ್ ಗಳಲ್ಲಿ ಅಭಿನಯಿಸಿದ್ದರು. ಸೆಟ್ ನಲ್ಲಿ ಇವರಿಬ್ಬರು ಬಹಳ ಸಮೀಪಕ್ಕೆ ಬಂದಿದ್ದರು. ಈ ಸುದ್ದಿ ಸುನಿಲ್ ಶೆಟ್ಟಿ ಮನೆಯವರಿಗೆ ತಿಳಿಯುತ್ತಲೇ ನಂತರ ಸುನಿಲ್ ಶೆಟ್ಟಿ ಸೊನಾಲಿಯಿಂದ ದೂರವಾದರು.

ಆ ದಿನಗಳಲ್ಲಿ ಕೆಲವರು ಸೊನಾಲಿ ಬೇಂದ್ರೆಯು ಸುನಿಲ್ ಶೆಟ್ಟಿ ಅವರ ಮನೆಯನ್ನು ಒಡೆಯುತ್ತಾರೆ ಎಂದು ಆರೋಪ ಕೂಡ ಮಾಡಿದ್ದಿದೆ.
ಒಂದು ಸಂದರ್ಶನದಲ್ಲಿ ಸೊನಾಲಿ ಬೇಂದ್ರೆ ಪ್ರತಿಕ್ರಿಯಿಸುತ್ತಾ ಸುನಿಲ್ ಶೆಟ್ಟಿ ಮತ್ತು ನನ್ನ ಅಫೇರ್ ಕಾರಣದಿಂದ ಅನಂತರ ಸುನಿಲ್ ಶೆಟ್ಟಿ ಮತ್ತು ನನ್ನ ಸ್ನೇಹಕ್ಕೆ ಬಿರುಕು ಬಿಟ್ಟಿತು. ಇಂತಹ ಅನಾವಶ್ಯಕ ಆರೋಪಗಳಿಗೆ ಉತ್ತರ ಕೊಡುವುದು ನನ್ನ ಕೆಲಸವಲ್ಲ “ಎಂದಿದ್ದರು ಸೊನಾಲಿ.
ವಿವಾಹವಾದರು ಗೋಲ್ಡಿಯನ್ನು:ನಿರ್ಮಾಪಕ ಗೋಲ್ಡಿ ಬಹಲ್ ಸೊನಾಲಿ ಯವರ ಮೊದಲ ಬೇಟಿ ಫಿಲ್ಮ್ ನಾರಾಜ್ ಸೆಟ್ಟ್ ನಲ್ಲಿ ಆಗಿತ್ತು.

ಮೊದಲ ಭೇಟಿಯಲ್ಲೇ ಗೋಲ್ಡಿ ಸೋನಾಲಿ ಅವರನ್ನು ಇಷ್ಟಪಟ್ಟಿದ್ದರು. ಗೋಲ್ಡಿ ಅವರ ಸಹೋದರಿ ಸೃಷ್ಟಿ ಆರ್ಯ ಮತ್ತು ಸೊನಾಲಿ ಅವರ ನಡುವೆ ಸ್ನೇಹವಿತ್ತು. ಆಕೆ ಇವರಿಬ್ಬರ ಮೀಟಿಂಗ್ ನಡೆಸಿದ್ದಿದೆ. ಮೊದಲ ಮೀಟಿಂಗ್ ನಲ್ಲಿ ಗೋಲ್ಡಿ ಸೋನಾಲಿ ಯವರ ಊಟದ ವಿಷಯದಲ್ಲಿ ಒಂದು ಕಮೆಂಟ್ ಮಾಡಿ ಸೊನಾಲಿಗೆ ಸಿಟ್ಟು ಬಂದದ್ದೂ ಇದೆ .ಆದರೆ ಅವರ ಸ್ನೇಹಕ್ಕೆ ಇದು ಅಡ್ಡಿಯಾಗಲಿಲ್ಲ.ಸೊನಾಲಿ ಆ ಸಮಯ ಫಿಲ್ಮ್ ಮೇಜರ್ ಸಾಹಬ್ ನ ಶೂಟಿಂಗ್ ನಲ್ಲಿ ಭಾಗವಹಿಸುತ್ತಿದ್ದರು. ಗೋಲ್ಡಿ ಸ್ನೇಹಿತ ಅಭಿಷೇಕ್ ಬಚ್ಚನ್ ತನ್ನ ತಂದೆಯವರನ್ನು ಭೇಟಿಯಾಗಲು ಫಿಲ್ಮ್ ಸೆಟ್ಟ್ ಗೆ ಆಗಾಗ ಬರುತ್ತಿದ್ದರು. ಅತ್ತ ಗೋಲ್ಡಿ ಕೂಡ ಅಭಿಷೇಕ್ ನೆಪದಲ್ಲಿ ಶೂಟಿಂಗಿಗೆ ಬರುತ್ತಿದ್ದರು. ಈ ಮೂವರೂ ಸಮಯವನ್ನು ಒಟ್ಟಿಗೆ ಕಳೆಯುತ್ತಿದ್ದರು. ಸೊನಾಲಿ ಅವರ ಮುಂದಿನ ಫಿಲ್ಮ್ ’ಅಂಗಾರೆ’ ಗೆ ಗೋಲ್ಡಿ ಬಹಲ್ ಅವರೇ ಪ್ರೊಡ್ಯೂಸರ್ ಆಗಿದ್ದರು. ಒಂದು ದಿನ ಸೆಟ್ಟ್ ನಲ್ಲಿ ನಡೆಯುತ್ತಿದ್ದ ಪಾರ್ಟಿಯಲ್ಲಿ ಅಭಿಷೇಕ್ ಗೋಲ್ಡಿಗೆ ಪ್ರಪೋಸ್ ಮಾಡಲು ಹೇಳಿದರು. ಗೋಲ್ಡಿ ಧೈರ್ಯ ತೋರಿ ಸೋನಾಲಿ ಬಳಿ ಈ ಕುರಿತು ಮಾತಾಡಿದರು.ತಕ್ಷಣ ಸೋನಾಲಿ ಹಾಂ ಎಂದು ಒಪ್ಪಿಗೆಯ ಉತ್ತರ ನೀಡಿದ್ದರು.

ನಾನಾ ಪಾಟೇಕರ್ ಗೆ ೭೦

ಮರಾಠಿ ರಂಗಭೂಮಿ ಹಾಗೂ ಬಾಲಿವುಡ್ ನ ಪ್ರಸಿದ್ಧ ನಟ ವಿಶ್ವನಾಥ ಪಾಟೇಕರ್ ಉರುಫ್ ನಾನಾ ಪಾಟೇಕರ್ ಗೆ ೭೦ ವರ್ಷ ಪೂರ್ಣಗೊಂಡಿತು. ೧ ಜನವರಿ ೧೯೫೧ ರಂದು ಮಹಾರಾಷ್ಟ್ರದ ಮುರುಡ್ ಜಂಜಿರಾ ದಲ್ಲಿ ಜನಿಸಿದವರು ನಾನಾ ಪಾಟೇಕರ್.


ಹದಿಮೂರನೇ ವರ್ಷದಲ್ಲಿ ಪೋಸ್ಟರ್ ಪೇಂಟಿಂಗ್ ಮಾಡಿ ತನ್ನ ಮನೆಯನ್ನು ಸಾಕುವುದಕ್ಕೆ ಆರಂಭಿಸಿದವರು ನಾನಾ. ’ಗಮನ್’ ಫಿಲ್ಮ್ ನಲ್ಲಿ ಸಣ್ಣ ಪಾತ್ರದಲ್ಲಿ ಅಭಿನಯಿಸುವ ಮೂಲಕ ಬಾಲಿವುಡ್ ಪ್ರವೇಶಿಸಿದವರು. ಅಗ್ನಿಸಾಕ್ಷಿ, ಪರಿಂದಾ, ಕ್ರಾಂತಿವೀರ್, ತಿರಂಗಾ, ಪ್ರಹಾರ್, ಅಬ್ ತಕ್ ಛಪ್ಪನ್ ,ಖಾಮೋಶೀ…. ಹೀಗೆ ಅನೇಕ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.