ನಟಿ ಸಮಂತಾ ಧರಿಸಿದ ಗೌನ್ ವೈರಲ್

ಹೈದರಾಬಾದ್,ಜೂ.೧-ಟಾಲಿವುಡ್ ನ ‘ಶಕುಂತಲಂ’ ಸಿನಿಮಾದ ಸೋಲಿನ ನಂತರ ನಟಿ ಸಮಂತಾ ಬೇರೆ ಚಿತ್ರದ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದಾರೆ. ಸ್ಯಾಮ್‌ಗೆ ಅವಕಾಶ ಕಡಿಮೆ ಆಗಿಲ್ಲ. ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ ಇದೀಗ ಸಮಂತಾ ಧರಿಸಿರುವ ಡ್ರೆಸ್ ಬೆಲೆ ವೈರಲ್ ಆಗಿದೆ.
ಟಾಲಿವುಡ್ ನಟಿ ಸಮಂತಾ ದಕ್ಷಿಣ ಚಿತ್ರರಂಗದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿ. ಸ್ಯಾಂ ಒಂದು ಚಿತ್ರಕ್ಕೆ ೮ ರಿಂದ ೧೦ ಕೋಟಿ ಸಂಭಾವನೆ ಪಡೆಯುತ್ತಾರೆ. ಅನೇಕ ನಿರ್ಮಾಪಕರು ಕೂಡ ನಟಿಯ ಡೇಟ್ಸ್ ಗಾಗಿ ಕಾಯುತ್ತಿದ್ದಾರೆ.
ಸಮಂತಾ ಭಾರೀ ಸಂಭಾವನೆಯೊಂದಿಗೆ ಐಷಾರಾಮಿ ಜೀವನ ನಡೆಸುತ್ತಿದ್ದಾರೆ. ಇತ್ತೀಚಿಗಷ್ಟೆ ಸ್ಯಾಂ ಇನ್ಸ್ಟಾಗ್ರಾಂನಲ್ಲಿ ಫೋಟೋ ಶೇರ್ ಮಾಡಿದ್ದರು. ಹಸಿರು ಬಣ್ಣದ ಡ್ರೆಸ್ ಧರಿಸಿ ಹುಲ್ಲಿನ ಮೇಲೆ ಪೋಸ್ ಕೊಟ್ಟಿದ್ದಾಳೆ.
ಸಮಂತಾ ಶೇರ್ ಮಾಡಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಫೋಟೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಸಮಂತಾ ಧರಿಸಿದ್ದ ಬಟ್ಟೆಯ ಬೆಲೆ ಬಗ್ಗೆ ತಿಳಿಯಲು ಯತ್ನಿಸಿದ್ದಾರೆ.
ಸಮಂತಾ ಧರಿಸಿರುವ ಈ ಹಸಿರು ಬಣ್ಣದ ಉದ್ದನೆಯ ಗೌನ್ ಬೆಲೆ ೧.೫೮,೦೦೦. ರೂಪಾಯಿ. ಈ ಸೀದಾ ಸಾದಾ ಉಡುಗೆಗೆ ಸಮಂತಾ ಲಕ್ಷಾಂತರ ರೂಪಾಯಿ ಖರ್ಚು ಮಾಡಿರುವುದು ನೆಟ್ಟಿಗರಿಗೆ ಶಾಕ್ ನೀಡಿದೆ. ಇತ್ತೀಚೆಗೆ ಸಮಂತಾ ಧರಿಸಿದ್ದ ನೆಕ್ ಪೀಸ್ ಬೆಲೆ ಕೂಡ ದೊಡ್ಡ ಸುದ್ದಿಯಾಗಿತ್ತು.
ಸಮಂತಾ ಸದ್ಯ ವಿಜಯ್ ದೇವರಕೊಂಡ ಜೊತೆ ಖುಷಿ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ’ಖುಷಿ’ ಚಿತ್ರದ ಬಗ್ಗೆ ಅಭಿಮಾನಿಗಳಲ್ಲಿ ಸಾಕಷ್ಟು ನಿರೀಕ್ಷೆಗಳಿವೆ. ’ಖುಷಿ’ ಚಿತ್ರದ ಪೋಸ್ಟರ್ ಹಾಗೂ ಹಾಡುಗಳಿಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ.
ಸ್ಯಾಂ ಬಾಲಿವುಡ್ ವೆಬ್ ಸೀರಿಸ್ ನಲ್ಲಿ ಬ್ಯುಸಿಯಾಗಿದ್ದಾರೆ. ಸಮಂತಾ ವರುಣ್ ಧವನ್ ಜೊತೆ ಸಿಟಾಡೆಲ್ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಸ್ಯಾಂ ಈ ಚಿತ್ರ ಪಾತ್ರಕ್ಕಾಗಿ ಸಿಕ್ಕಾಪಟ್ಟೆ ತಯಾರಿ ನಡೆಸಿ ಬಾಲಿವುಡ್ ನಲ್ಲಿ ಮಿಂಚಲು ಈ ನಟಿ ಸಜ್ಜಾಗಿದ್ದಾರೆ.
ಸಮಂತಾ ಹಾಲಿವುಡ್‌ಗೆ ಎಂಟ್ರಿ ಕೊಡುತ್ತಿದ್ದಾರೆ ಎಂಬ ಸುದ್ದಿಯೂ ಹಬ್ಬಿದೆ. ನಟಿ ಸಮಂತಾ ‘ಚೈನ್ ಸ್ಟೋರಿ’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಹಾಲಿವುಡ್ ನಟ ವಿವೇಕ್ ಕಲ್ರಾ ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಫಿಲಿಪ್ ಜಾನ್ ನಿರ್ದೇಶಿಸಲಿದ್ದಾರೆ.
ಹಾಲಿವುಡ್ ಗೆ ಹಾರಿದ ನಟಿ ಸ್ಯಾಂ ಲವ್ ಸ್ಟೋರಿ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇದು ಇಂಗ್ಲೆಂಡಿನ ಯುವಕ ಮತ್ತು ಚೀನಾದ ಯುವತಿ ನಡುವಿನ ಪ್ರೇಮಕಥೆ. ಈ ಸಿನಿಮಾ ಕೂಡ ಸದ್ಯದಲ್ಲೇ ಸೆಟ್ಟೇರಲಿದೆ.ಜೀವನದಲ್ಲಿ ಅನೇಕ ಏಳುಬೀಳುಗಳನ್ನು ಕಂಡಿರುವ ಸಮಂತಾ ಈಗ ಟಾಲಿವುಡ್ ಸ್ಟಾರ್ ಹೀರೋಯಿನ್ ಆಗಿ ಮಿಂಚುತ್ತಿದ್ದಾರೆ. ಸಮಂತಾ ಸಂಪೂರ್ಣವಾಗಿ ತಮ್ಮ ವೃತ್ತಿ ಜೀವನದತ್ತ ಗಮನ ಹರಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ತನ್ನ ಬಗ್ಗೆ ಬರುವ ಯಾವುದೇ ಸುದ್ದಿಗೂ ಸ್ಯಾಂ ತಲೆಕೆಡಿಸಿಕೊಳ್ಳುವುದಿಲ್ಲ.