ನಟಿ, ಸಂಸದೆ ಕಿರಣ್ ಖೇರ್ ಗೆ ರಕ್ತ ಕ್ಯಾನ್ಸರ್

ನವದೆಹಲಿ, ಏ.೧- ಬಾಲಿವುಡ್ ಹಿರಿಯ ನಟಿ ಹಾಗೂ ಸಂಸದೆ ಕಿರಣ್ ಖೇರ್ ಅವರು ರಕ್ತ ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆ.

ಈ ವಿಷಯವನ್ನು ಅವರ ಪತಿ ಅನುಪಮ್ ಖೇರ್ ಖಚಿತಪಡಿಸಿದ್ದು,ಕಿರಣ್ ಹೋರಾಟದ ಹಿನ್ನೆಲೆಯಲ್ಲಿ ಉಳ್ಳವರು ರೋಗದ ವಿರುದ್ಧ ಹೋರಾಡಲಿದ್ದಾರೆ ಎಂದು ತಿಳಿಸಿದ್ದಾರೆ.

ಕಿರಣ್ ಖೇರ್ ಅವರು ರಕ್ತ ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆ ಎನ್ನುವ ಸಂಗತಿಯನ್ನು ಸಾಮಾಜಿಕ ಜಾಲತಾಣದಲ್ಲಿ ಪತಿ ಅನುಪಮ್ ಖೇರ್ ಪ್ರಕಟಿಸುತ್ತಿದ್ದಂತೆ ಬಾಲಿವುಡ್ ಸೇರಿದಂತೆ ರಾಜಕೀಯ ಪಕ್ಷದ ಹಲವು ಗಣ್ಯರು ಶೀಘ್ರ ಚೇತರಿಸಿಕೊಳ್ಳಲಿ ಎಂದು ಶುಭ ಹಾರೈಸಿದ್ದಾರೆ.

ಚಂಡಿಗಢದ ಸಂಸದರಾಗಿರುವ ನಟಿ ಕಿರಣ್ ಅವರು ರಕ್ತ ಕ್ಯಾನ್ಸರ್ ಸಮಸ್ಯೆಗಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ ಆಕೆಯ ಚೇತರಿಕೆಗಾಗಿ ಎಲ್ಲರ ಹಾರೈಕೆ ಇರಲಿ ಎಂದು ಅವರು ತಿಳಿಸಿದ್ದಾರೆ.

ಪತ್ನಿ ಕಿರಣ್ ಅವರು ಮೊದಲಿನಿಂದಲೂ ಹೋರಾಟದ ಸ್ವಭಾವ ಹೊಂದಿರುವವರು ರಕ್ತ ಕ್ಯಾನ್ಸರ್ ವಿರುದ್ಧ ಅವರು ಹೋರಾಟ ನಡೆಸಲಿದ್ದಾರೆ ಅವರು ಶೀಘ್ರ ಚೇತರಿಸಿಕೊಳ್ಳಲಿ ಎನ್ನುವ ಹಾರೈಕೆ ಮೇಲಿರಲಿ ಎಂದು ಟ್ವಟ್ಟರ್ ನಲ್ಲಿ ತಿಳಿಸಿದ್ದಾರೆ.