
ಬೆಂಗಳೂರು,ಮಾ.೧೬-ಸಿನಿಮಾ ರಂಗದಿಂದ ದೂರವಾಗಿ ಮಗುವಿನ ಪಾಲನೆ ಪೋಷಣೆಯಲ್ಲಿ ಬ್ಯುಸಿಯಾಗಿರುವ ನಟಿ ಸಂಜನಾ ಗಲ್ರಾನಿಗೆ ಕೊಲೆ ಬೆದರಿಕೆ ಹಾಕಿರುವ ಸಂಬಂಧಿಸಿದಂತೆ ಇಂದಿರಾನಗರ ಪೊಲೀಸರಿಗೆ ದೂರು ನೀಡಲಾಗಿದೆ.
ಕೊಲೆ ಬೆದರಿಕೆ ಹಾಕಿದವರ ವಿರುದ್ಧ ದೂರು ದಾಖಲಿಸಿರುವ ಸಂಜನಾ ಅವರು ಕಾನೂನು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.
ವಾಹನ ನಿಲುಗಡೆ ವಿಚಾರವಾಗಿ ಸ್ಥಳೀಯ ನಿವಾಸಿಗಳ ಜೊತೆ ಗಲಾಟೆ ನಡೆದಿದ್ದು, ಕೊಲೆ ಮಾಡಲಾಗುವುದು ಅಂತ ಬೆದರಿಕೆ ಹಾಕಿದ್ದಾರೆ ಎಂದು ಸಂಜನಾ ಇಂದಿರಾನಗರ ಠಾಣೆಗೆ ದೂರು ನೀಡಿದ್ದಾರೆ. ಇಂದಿರಾನಗರದ ಧೂಪನಹಳ್ಳಿಯಲ್ಲಿ ವಾಸವಾಗಿರುವ ಸಂಜನಾ ಗಲ್ರಾನಿ ಮನೆ ಬಳಿ ಯಶೋಧಮ್ಮ ಹಾಗೂ ರಾಜಣ್ಣ ಎಂಬುವವರ ಮನೆಯೂ ಇದ್ದು ಅವರ ಮೇಲೆಯೇ ಸಂಜನಾ ದೂರು ನೀಡಿದ್ದಾರೆ.
ಯಶೋಧಮ್ಮ ಹಾಗೂ ರಾಜಣ್ಣ ಎನ್ನುವವರು ರಸ್ತೆಗೆ ಅಡ್ಡಲಾಗಿ ಕಾರುಗಳನ್ನ ನಿಲ್ಲಿಸ್ತಾರಂತೆ. ಇದನ್ನ ಪ್ರಶ್ನೆ ಮಾಡಿದ್ರೆ ಕೊಲೆ ಮಾಡ್ತಿನಿ, ನಾವು ನಲವತ್ತು ವರ್ಷದಿಂದ ವಾಸ ಇದ್ದೀವಿ ಅಂತ ಆವಾಜ್ ಹಾಕಿದ್ದಲ್ಲದೆ, ವೇಶ್ಯೆ ಎಂದು ಅವ್ಯಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ಸಂಜನಾ ಗಲ್ರಾನಿ ಆರೋಪ ಮಾಡಿದ್ದು, ನ್ಯಾಯಲಯದ ಅನುಮತಿ ಮೇರೆಗೆ ಎಫ್‌ಐಆರ್ ದಾಖಲಾಗಿದೆ.