ನಟಿ ರಿಯಾಗೆ ಅ.6 ರವರೆಗೆ ಸೆರೆವಾಸ

ಮುಂಬೈ,ಸೆ.22- ಬಾಲಿವುಡ್ ನಟ ಸುಶಾಂತ್ ಸಿಂಗ್ ಅನುಮಾನಾಸ್ಪದ ಸಾವಿನ ಪ್ರಕರಣ‌‌ ಹಾಗು ಮಾದಕ ವಸ್ತು ಜಾಲ ಪ್ರಕರಣದಲ್ಲಿ ಬಂಧಿತರಾಗಿ ನ್ಯಾಯಾಂಗ ಬಂಧನದಲ್ಲಿದ್ದ ನಟಿ ರಿಯಾ ಚಕ್ರವರ್ತಿ ಗೆ ಮತ್ತೆ ಅಕ್ಟೋಬರ್ ‌6 ವರೆಗೆ ನ್ಯಾಯಾಂಗ ಬಂಧನ ಅವಧಿ ವಿಸ್ತರಿಸಲಾಗಿದೆ.

ರಾಷ್ಟ್ರೀಯ ಮಾದಕ ವಸ್ತು ನಿಯಂತ್ರಣ ‌ಕುರಿತ ವೆಶೇಷ ನ್ಯಾಯಾಲಯ ರಿಯಾಗೆ ಅ.6 ರವರೆಗೆ ಮತ್ತೆ ನ್ಯಾಯಾಂಗ ಬಂಧನವಿಸಿದೆ.‌ ಜೊತೆಗೆ ಸಹೋದರನಿಗೂ ನ್ಯಾಯಾಂಗ ಬಂಧನ ವಿಸ್ತರಿಸಲಾಗಿದೆ.

ಹೀಗಾಗಿ ನಟಿ ರಿಯಾ ಮತ್ತು ಆಕೆಯ ಸಹೋದರ ಶೋವಿಕ್ ಚಕ್ರವರ್ತಿ ಜಾಮೀನಿಗಾಗಿ ಬಾಂಬೆ ಹೈಕೋರ್ಟ್ ಮೊರೆ ಹೋಗಿದ್ದಾರೆ.

ಸುಶಾಂತ್ ಸಾವು ಮತ್ತು ಮಾದಕ ವಸ್ತು ಜಾಲ ಪ್ರಕರಣಕ್ಕೆ ಸಂಬಂಧಿಸಿದಂತೆ ಸೆ.8 ರಂದು ರಾಷ್ಟ್ರೀಯ ಮಾದಕ‌ ವಸ್ತು ನಿಯಂತ್ರಣ ಘಟಕ ರಿಯಾ ಚಕ್ರವರ್ತಿಯನ್ನು ಬಂದಿಸಿ‌ ನ್ಯಾಯಾಲಯದ ಮುಂದೆ ಹಾಜರುಪಡಿಸಿತ್ತು.‌ನ್ಯಾಯಾಲಯ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿತ್ತುಮ ಅದರ ಅವಧಿ ಮುಗಿದ ಹಿನ್ನೆಲೆಯಲ್ಲಿ ಮತ್ತೆ ನ್ಯಾಯಾಲಯದ ಮುಂದೆ ಹಾಜರು ಪಡಿಸಲಾಗಿತ್ತು.

ಸುಶಾಂತ್ ಸಿಂಗ್ ಸಾವಿನ ಪ್ರಕರಣ ಮತ್ತು ಮಾದಕವಸ್ತು ಸರಬರಾಜು ಮಾಡಿದ ಪ್ರಕರಣಕ್ಕೆ ಸಂಬಂಧಿಸಿದ ಸುಶಾಂತ್ ಮನೆಯ ಕೆಲಗಾರರಾದ ಸ್ಯಾಮುಯಲ್ ಮಿರಾಂಡ ಮತ್ತು ದಿಪೇಶ್ ಸಾವಂತ್ ನೀಡಿದ್ದ ಹೇಳಿಕೆ ಆಧರಿಸಿ ಜಾಮೀನು ನೀಡಲು ಆಕ್ಷೇಪ‌ ವ್ಯಕ್ತಪಡಿಸಲಾಗಿತ್ತು.

ನಟಿ ರಿಯಾ ಚಕ್ರವರ್ತಿ ವಿರುದ್ದ ಮಾದಕ ವಸ್ತು ನಿಗ್ರಹದ ‌ಕಲಂ 8 ಸಿ ಅಡಿ,ಉತ್ಪಾದನೆ, ಮಾರಾಟ,ಖರೀದಿ, ‌ಸಾಗಾಟ, ಬಳಕೆ, ಅಮದು ಸೇರಿದಂತೆ ವಿವಿಧ ಪ್ರಕರಗಳಡಿ ದೂರು ದಾಖಲಾಗಿತ್ತು.

ಮಾದಕ ವಸ್ತು ಜಾಲ ಪ್ರಕರಣಕ್ಕೆ ಸಂಬಂದಿಸಿದಂತೆ ನಟಿ ರಿಯಾ ಚಕ್ರವರ್ತಿ ಮತ್ತು ಆಕೆಯ ಸಹೋದರ ಶೋವಿಕ್ ಸೇರಿದಂತೆ ಬಾಂಬೆ ಗೋವಾ ಸೇರಿದಂತೆ ವಿವಿಧ ಕಡೆ 12ಕ್ಕೂ ಹೆಚ್ಚು ಮಾದಕ ವಸ್ತು ಪೂರೈಲಲಕೆದಾರರನ್ನು ಬಂಧಿಸಲಾಗಿದೆ.

  • ನಟ ಸುಶಾಂತ್ ಅನುಮಾನಾಸ್ಪದ‌ ಸಾವು ಹಾಗು ಮಾದಕ ವಸ್ತು ‌ಜಾಲ‌ ಪ್ರಕರಣ
  • ಅ. 6 ರವೆರೆಗೆ ರಿಯಾ ಮತ್ತು ಶೋವಿಕ್ ಚಕ್ರವರ್ತಿ ಗೆ ನ್ಯಾಯಾಂಗ ಬಂಧನ
  • ಜಾಮೀನಿಗಾಗಿ ಬಾಂಬೆ ಹೈಕೋರ್ಟ್ ಮೊರೆ
  • ಈವರೆಗೆ 12 ಮಂದಿ ಬಂಧನ
    *ರಿಯಾ ಸೇರಿ ಹಲವರ‌‌‌ ವಿರುದ್ದ ಪ್ರಕರಣ ದಾಖಲು