ನಟಿ ರಾಧಿಕಾಗೆ ಸಿಸಿಬಿ ಡ್ರಿಲ್

Radhika Kumarswamy in CCB office

ಬೆಂಗಳೂರು, ಜ. ೮- ಬ್ಯಾಂಕ್ ಖಾತೆಗಳಲ್ಲಿ ಅಕ್ರಮ ಹಣ ಜಮೆಯಾಗಿರುವ ಕುರಿತ ಆರೋಪಕ್ಕೆ ಸಂಬಂಧಿಸಿದಂತೆ, ನಟಿ ರಾಧಿಕಾ ಕುಮಾರಸ್ವಾಮಿಗೆ ಇಂದು ಸಿಸಿಬಿ ವಿಚಾರಣೆಗೆ ಹಾಜರಾಗಿದ್ದಾರೆ.
ರಾಧಿಕಾ ಅವರ ತಂದೆ ಸ್ನೇಹಿತ ಯುವರಾಜ್ ಅವರ ಖಾತೆಯಿಂದ ರಾಧಿಕಾ ಖಾತೆಗೆ ೭೫ ಲಕ್ಷ ರೂ. ಗಳು ವರ್ಗಾವಣೆಯಾಗಿರುವುದನ್ನು ರಾಧಿಕಾ ಒಪ್ಪಿಕೊಂಡಿದ್ದರು. ಯುವರಾಜ್ ಸಹ ರಾಧಿಕಾರ ಖಾತೆಗೆ ಹಣ ವರ್ಗಾವಣೆ ಮಾಡಿರುವುದನ್ನು ಸಿಸಿಬಿ ಮುಂದೆ ಒಪ್ಪಿಕೊಂಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ, ಈಗಾಗಲೇ ನಟಿ ರಾಧಿಕಾ, ಸಹೋದರನನ್ನು ಸಿಸಿಬಿ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ. ಆದರೆ ಸ್ಪಷ್ಟ ಮಾಹಿತಿಗಾಗಿ ನಟಿ ರಾಧಿಕಾ ಅವರಿಗೆ ಹಾಜರಾಗುವಂತೆ ಸಿಸಿಬಿ ಸೂಚಿಸಿತ್ತು.
ಇಂದು ಬೆಳಿಗ್ಗೆ ಸಿಸಿಬಿ ಕಚೇರಿಗೆ ಹಾಜರಾದ ರಾಧಿಕಾ ಅವರ ಮೊಬೈಲ್ ಫೋನ್ ಅನ್ನು ವಶಕ್ಕೆ ಪಡೆದಿರುವ ಅಧಿಕಾರಿಗಳು, ಯುವರಾಜ್ ಹಾಗೂ ನಾಗರಾಜ್ ಅವರಿಗೂ ನಿಮಗೂ ಇರುವ ಸಂಬಂಧವೇನು, ಎಷ್ಟು ದಿನಗಳಿಂದ ನಿಮ್ಮ ನಡುವಿನ ಪರಿಚಯವಿದೆ, ಒಂದು ಸಿನಿಮಾಗೆ ನೀವು ಪಡೆಯುವ ಸಂಭಾವನೆ ಎಷ್ಟು ಎಂದು ಅಧಿಕಾರಿಗಳಂದ ಪ್ರಶ್ನೆಗಳ ಸುರಿಮಳೆಯಾಗಿದೆ.
ಇಷ್ಟು ದೊಡ್ಡ ಮೊತ್ತದ ಹಣವನ್ನು ಯುವರಾಜ್ ಅವರು ನಿಮ್ಮ ಖಾತೆಗೆ ವರ್ಗಾಯಿಸಿದ ನಂತರ ಮತ್ತೆ ಅವರು ನಿಮ್ಮನ್ನು ಏಕೆ ಸಂಪರ್ಕಿಸಿಲ್ಲ. ನೀವು ಯುವರಾಜ್ ಜತೆ ದೆಹಲಿಗೆ ಹೋಗಿದ್ದೀರಿ ಎಂಬ ಮಾಹಿತಿ ಇದೆ. ದೆಹಲಿಗೆ ಅವರ ಜತೆ ಯಾತಕ್ಕಾಗಿ ಹೋಗಿದ್ದೀರಿ ಎಂದು ಪ್ರಶ್ನಿಸಿದ್ದಾರೆ.
ನಿಮ್ಮ ಪ್ರಕಾರ ಯುವರಾಜ್ ಅವರು ಚಿತ್ರನಿರ್ಮಾಣಕ್ಕೆ ಹಣ ನೀಡಿದ್ದಾರೆ ಎನ್ನುವುದಾದರೆ ಸಿನಿಮಾ ನಿರ್ಮಾನ ಕುರಿತು ನಿಮ್ಮಿಬ್ಬರ ನಡುವಿನ ಅಗ್ರಿಮೆಂಟ್ ಏನಿದೆ, ಅಗ್ರಿಮೆಂಟ್ ಇಲ್ಲದೆ ನಿಮಗೆ ಹಣ ವರ್ಗಾಯಿಸಿದ್ದಾರೆಯೇ, ಯುವರಾಜ್ ಹಾಗೂ ನಿಮ್ಮ ಕೊನೆಯ ಭೇಟಿ ಎಂದು ಮತ್ತು ಎಲ್ಲಿ, ಯಾವಾಗ ಭೇಟಿ ಮಾಡಿದ್ದೀರಿ ಎಂದು ಮಾಹಿತಿ ನೀಡಿ ಎಂದು ಕೇಳಿದ್ದಾರೆ.
ಹಣ ವರ್ಗಾವಣೆಗೆ ಸಂಬಂಧಿಸಿದಂತೆ ಅನೇಕ ಪ್ರಶ್ನೆಗಳನ್ನು ಕೇಳುತ್ತಿರುವ ಸಿಸಿಬಿ ಅಧಿಕಾರಿಗಳು ಇಂದು ಸಂಜೆವರೆಗೂ ವಿಚಾರಣೆಯನ್ನು ಮುಂದುವರೆಸಲಿದ್ದಾರೆ ಎನ್ನಲಾಗಿದ್ದು, ಡಾಲರ್‍ಸ್ ಕಾಲೋನಿಯಲ್ಲಿರುವ ಅವರ ಮನೆಗೆ ಸೂಕ್ತ ಪೊಲೀಸ್ ಬಂದೋಬಸ್ತ್ ಒದಗಿಸಿದ್ದಾರೆ.