ನಟಿ ರಾಗಿಣಿಗೆ ಸದ್ಯಕ್ಕೆ ರಿಲೀಫ್ ಇಲ್ಲ

ಬೆಂಗಳೂರು, ಸೆ 14 -ಸ್ಯಾಂಡಲ್ ವುಡ್ ನಲ್ಲಿ ಡ್ರಗ್ಸ್ ಜಾಲ ಆರೋಪಕ್ಕೆ ಸಂಬಂಧಿಸಿ ಕಳೆದ 11 ದಿನಗಳಿಂದ ಸಿಸಿಬಿ ವಶದಲ್ಲಿರುವ ನಟಿ ರಾಗಿಣಿಯವರ ಜಾಮೀನು ಅರ್ಜಿಯನ್ನು ಎನ್‍ ಡಿಪಿಎಸ್‍ ವಿಶೇಷ ನ್ಯಾಯಾಲಯ ಇದೇ 16ಕ್ಕೆ ಮುಂದೂಡಿದೆ.

ಸರ್ಕಾರಿ ವಕೀಲರು ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ಕೋರಿದ ಹಿನ್ನೆಲೆಯಲ್ಲಿ ಅರ್ಜಿ ವಿಚಾರಣೆ ಮುಂದೂಡಿಕೆಯಾಗಿದೆ.ಇದೇ ವೇಳೆ ಡ್ರಗ್ ಪೆಡ್ಲರ್ ರಾಹುಲು, ಶಿವಪ್ರಕಾಶ್, ವಿನಯ್ ಕುಮಾರ್‍, ವೈಭವ್ ಜೈನ್ ಅವರ ಜಾಮೀನು ವಿಚಾರಣೆಯನ್ನೂ ಮುಂದೂಡಲಾಗಿದೆ
ದಂಧೆಯಿಂದ ಅಕ್ರಮ ಲಾಭ ಪಡೆದಿರುವ ಗಂಭೀರ ಆರೋಪವನ್ನು ರಾಗಿಣಿ ಎದುರಿಸುತ್ತಿದ್ದಾರೆ. ಒಂದು ವೇಳೆ ಆರೋಪ ಸಾಬೀತಾದಲ್ಲಿ 20 ವರ್ಷ ಜೈಲುಶಿಕ್ಷೆ ಎದುರಿಸುವ ಸಾಧ್ಯತೆ ಇರುತ್ತದೆ.