ನಟಿ ರಶ್ಮಿ ದೇಸಾಯಿ ಆರತಿ ಸಿಂಗ್ ಮದುವೆಗೆ ಲೆಹೆಂಗಾ ಧರಿಸಿ ಬಂದರು ಆದರೂ ಸಾಮಾಜಿಕ ಮಾಧ್ಯಮದಲ್ಲಿ ಟ್ರೋಲ್ ಆಗುತ್ತಿದ್ದಾರೆ!

ಟಿವಿ ನಟಿ ಆರತಿ ಸಿಂಗ್ ಅವರ ಮದುವೆಯ ಸಂಗೀತ ಸಮಾರಂಭ ಏಪ್ರಿಲ್ ೨೩ರ ರಾತ್ರಿ ನಡೆದಿದ್ದು, ರಶ್ಮಿ ದೇಸಾಯಿ ಸೇರಿದಂತೆ ಹಲವು ತಾರೆಯರು ಭಾಗವಹಿಸಿದ್ದರು. ಈ ಮದುವೆ ಸಮಾರಂಭದಲ್ಲಿ ರಶ್ಮಿ ದೇಸಾಯಿ ತಮ್ಮ ಉಡುಪಿನಿಂದಾಗಿ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಟ್ರೋಲ್ ಆಗುತ್ತಿದ್ದಾರೆ.
ಖ್ಯಾತ ಕಿರುತೆರೆ ನಟಿ ಆರತಿ ಸಿಂಗ್ ಅವರು ಉದ್ಯಮಿ ದೀಪಕ್ ಚೌಹಾಣ್ ಅವರನ್ನು ಏಪ್ರಿಲ್ ೨೫ ರಂದು ವಿವಾಹವಾಗಲಿದ್ದಾರೆ. ಅವರ ಮದುವೆ ಸಮಾರಂಭಗಳು ಶುರುವಾಗಿವೆ. ಆರತಿ ಸಿಂಗ್ ಅವರ ಮೆಹಂದಿ ಕಾರ್ಯಕ್ರಮವು ಏಪ್ರಿಲ್ ೨೩ ರಂದು ಮಧ್ಯಾಹ್ನ ನಡೆಯಿತು ಮತ್ತು ಸಂಗೀತ ಸಮಾರಂಭವು ೨೩ ರಂದು ರಾತ್ರಿಯೇ ನಡೆಯಿತು. ಈ ಸಮಯದಲ್ಲಿ ಆರತಿ ಸಿಂಗ್ ತುಂಬಾ ಸುಂದರವಾಗಿ ಕಾಣುತ್ತಿದ್ದರು. ಅವರು ತಮ್ಮ ಸಂಗೀತ ಸಮಾರಂಭದಲ್ಲಿ ಹುರುಪಿನಿಂದ ನೃತ್ಯ ಮಾಡಿದರು.


ಆರತಿಯ ಸಂಗೀತ ಸಮಾರಂಭವನ್ನು ಅದ್ಧೂರಿಯಾಗಿ ಮಾಡಲಾಯಿತು, ಇದರಲ್ಲಿ ಅನೇಕ ದೊಡ್ಡ ಕಿರುತೆರೆ ತಾರೆಯರು ಸಹ ಭಾಗವಹಿಸಿದ್ದರು. ಅವರಲ್ಲಿ ಕಿರುತೆರೆ ಖ್ಯಾತ ನಟಿ ರಶ್ಮಿ ದೇಸಾಯಿ ಕೂಡ ಒಬ್ಬರು. ರಶ್ಮಿ ದೇಸಾಯಿ ಈ ಸಮಾರಂಭದಲ್ಲಿ ಭಾಗವಹಿಸಿದಾಗ, ಫೋಟೋಗ್ರಾಫರ್ ಗಳು ಅವರ ಚಿತ್ರಗಳು ಮತ್ತು ವೀಡಿಯೊಗಳನ್ನು ತೆಗೆದುಕೊಂಡರು. ಆದರೆ ರಶ್ಮಿ ದೇಸಾಯಿ ಈಗ ಅವರ ಉಡುಪಿನಿಂದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಟ್ರೋಲ್ ಆಗುತ್ತಿದ್ದಾರೆ.


ನಟಿ ರಶ್ಮಿ ದೇಸಾಯಿ ಅವರು ಮಂಗಳವಾರ ರಾತ್ರಿ ತಮ್ಮ ಸ್ನೇಹಿತೆ ಮತ್ತು ನಟಿ ಆರತಿ ಸಿಂಗ್ ಅವರ ತಾರಾ ಸಂಗೀತ ರಾತ್ರಿಗೆ ಆಗಮಿಸಿದಾಗ, ಅವರು ತುಂಬಾ ಉತ್ಸುಕರಾಗಿದ್ದರು. ಆದರೆ ಅವರು ತಮ್ಮ ಅಭಿಮಾನಿಗಳನ್ನು ತೀವ್ರವಾಗಿ ನಿರಾಶೆಗೊಳಿಸಿದರು. ಹೌದು, ಈ ಫಂಕ್ಷನ್‌ನಲ್ಲಿ ರಶ್ಮಿ ದೇಸಾಯಿ ಭಾರವಾದ ಲೆಹೆಂಗಾವನ್ನು ಧರಿಸಿದ್ದರು, ಅದನ್ನು ಅವರು ಬಯಸಿದ್ದರೂ ಸಹ ಸರಿಯಾಗಿ ನಿಭಾಯಿಸಲು ಸಾಧ್ಯವಾಗಲಿಲ್ಲ. ಈ ಲೆಹೆಂಗಾದಿಂದ ರಶ್ಮಿ ದೇಸಾಯಿ ನಡೆಯಲು ಕಷ್ಟಪಡುತ್ತಿದ್ದರು. ಮಾತ್ರವಲ್ಲದೆ, ಬಿಗ್ ಬಾಸ್ ೧೩ ಖ್ಯಾತಿಯ ರಶ್ಮಿ ನಿಸ್ಸಂದೇಹವಾಗಿ ಗುಲಾಬಿ ಚಿನ್ನದ ಲೆಹೆಂಗಾದಲ್ಲಿ ಸುಂದರವಾಗಿ ಕಾಣುತ್ತಿದ್ದರು. ಆದರೆ ಅದು ರಶ್ಮಿ ದೇಸಾಯಿಗೆ ಸರಿಹೊಂದುತ್ರಿರಲಿಲ್ಲ. ಆಕೆಯ ಬ್ಲೌಸ್ ಬಗ್ಗೆ ಟ್ರೋಲರ್ ಗಳೂ ಸಾಕಷ್ಟು ಕಾಮೆಂಟ್ ಮಾಡಿದ್ದಾರೆ.

“ಖಂಡಿತ ನಿಮ್ಮ ತೂಕ ಜಾಸ್ತಿ, ಇದರಲ್ಲಿ ಯಾವುದೇ ತೊಂದರೆ ಇಲ್ಲ. ಆದರೆ ನಿಮ್ಮ ದೇಹಕ್ಕೆ ತಕ್ಕಂತೆ ಬಟ್ಟೆಗಳನ್ನು ಧರಿಸಿ” ಎಂದು ಟ್ರೋಲರ್ ಗಳು ಹೇಳಿದ್ದಾರೆ. ಸರಿಯಾಗಿ ಮುಚ್ಚದಂತಹ ಅಹಿತಕರ ಬಟ್ಟೆಗಳನ್ನು ನೀವು ಹೇಗೆ ಧರಿಸುತ್ತೀರಿ? ನೀವು ನಿಭಾಯಿಸಲು ಸಾಧ್ಯವಾಗದಂತಹ ಉಡುಪನ್ನು ಏಕೆ ಧರಿಸುತ್ತೀರಿ? ಕುಪ್ಪಸ ಒಡೆದು ಹೋಗುತ್ತಿದೆಯೇನೋ ….”.ಎಂದೆಲ್ಲ ಪ್ರಶ್ನೆ ಮಾಡಿದರು. ರಶ್ಮಿ ದೇಸಾಯಿ ಅವರು ತಮ್ಮ ತೂಕ, ಉಡುಗೆ ಮತ್ತು ತೆರೆದ ಬಟನ್ ಕುಪ್ಪಸದ ಬಗ್ಗೆ ಅನೇಕ ಅಸಭ್ಯ ಕಾಮೆಂಟ್‌ಗಳನ್ನು ಸ್ವೀಕರಿಸಿದ್ದಾರೆ. ಆದರೆ, ಈ ಭಾರೀ ಲೆಹೆಂಗಾದಲ್ಲಿಯೂ ರಶ್ಮಿ ದೇಸಾಯಿ ಕ್ಯಾಮರಾ ಮುಂದೆ ನಗುತ್ತಾ ಕಾಣಿಸಿಕೊಂಡಿದ್ದಾರೆ. ಸಂಗೀತ ಸಮಾರಂಭಕ್ಕೆ ರಶ್ಮಿ ದೇಸಾಯಿ ತಮ್ಮ ತಾಯಿಯೊಂದಿಗೆ ಬಂದಿದ್ದರು.

“ಎಲ್ಲರನ್ನು ಸಂತೋಷವಾಗಿರಿಸುವುದು ಕಷ್ಟ, ಪ್ರಧಾನಿ ಕೂಡ ಮನುಷ್ಯ” ಎಂದರು ನಟಿ ಲಾರಾದತ್ತಾ

ನಟಿ ಲಾರಾ ದತ್ತಾ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಇತ್ತೀಚಿನ ಭಾಷಣದ ಬಗ್ಗೆ ಪ್ರತಿಕ್ರಿಯೆ ರೂಪದಲ್ಲಿ ಮಾತನಾಡಿದ್ದಾರೆ.
ಮೋದಿ ಅವರು ತಮ್ಮ ನಂಬಿಕೆಗಳಿಗೆ ಅಂಟಿಕೊಂಡಿದ್ದಾರೆ ಎಂದೂ ಶ್ಲಾಘಿಸಿದರು. “ದೇಶದ ಸಂಪತ್ತನ್ನು ಮುಸ್ಲಿಮರಿಗೆ ಹಂಚಲು ಕಾಂಗ್ರೆಸ್ ಪಕ್ಷ ಯೋಜಿಸುತ್ತಿದೆ” ಎಂದು ಪ್ರಧಾನಿ ತಮ್ಮ ಭಾಷಣದಲ್ಲಿ ಹೇಳಿದ್ದರು. ಪ್ರಧಾನಿ ಹೇಳಿಕೆಗಳ ಸತ್ಯಾಸತ್ಯತೆಯನ್ನು ವಿರೋಧಿಗಳು ಪ್ರಶ್ನಿಸಿದ್ದಾರೆ.
ಇತ್ತೀಚಿನ ಸಂದರ್ಶನವೊಂದರಲ್ಲಿ ಲಾರಾ ದತ್ತಾ, “ಪ್ರಧಾನಿ ನರೇಂದ್ರ ಮೋದಿ ಅವರು ನಂಬಿಕೆಗೆ ತಕ್ಕಂತೆ ನಡೆದುಕೊಳ್ಳುತ್ತಿದ್ದಾರೆ” ಎಂದು ಹೊಗಳಿದರು. ನಟಿ ಹೇಳಿದರು – ’ಎಲ್ಲರನ್ನು ಸಂತೋಷವಾಗಿರಿಸುವುದು ಕಷ್ಟ, ಪ್ರಧಾನಿ ಕೂಡ ಮನುಷ್ಯ.’


ಪ್ರಧಾನಿ ಮೋದಿಯವರ ಹೇಳಿಕೆಯಿಂದ ರಾಜಕೀಯ ಸಮರ ಶುರುವಾಗಿದೆ:
ಭಾನುವಾರ ರಾಜಸ್ಥಾನದ ಬನ್ಸ್ವಾರಾದಲ್ಲಿ ರ?ಯಾಲಿಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಜನರು ಕಷ್ಟಪಟ್ಟು ದುಡಿದ ಹಣ ಮತ್ತು ಆಸ್ತಿಯನ್ನು ಒಳನುಸುಳುಕೋರರು ಮತ್ತು ಹೆಚ್ಚು ಮಕ್ಕಳನ್ನು ಹೊಂದಿರುವ ಜನರಿಗೆ ನೀಡಲು ಕಾಂಗ್ರೆಸ್ ಯೋಜಿಸಿದೆ ಎಂದು ಹೇಳಿದ್ದರು.
ಈ ಹಿಂದೆ ಅವರ ಕಾಂಗ್ರೆಸ್ ಸರಕಾರ ಅಧಿಕಾರದಲ್ಲಿದ್ದಾಗ ದೇಶದ ಆಸ್ತಿಯಲ್ಲಿ ಮುಸ್ಲಿಮರಿಗೆ ಮೊದಲ ಹಕ್ಕು ಎಂದು ಹೇಳಿದ್ದರು. ಇದರರ್ಥ ಅವರು ಈ ಆಸ್ತಿಯನ್ನು ಸಂಗ್ರಹಿಸಿ ಯಾರಿಗೆ ಹಂಚುತ್ತಾರೆ? “ಹೆಚ್ಚು ಮಕ್ಕಳಿರುವವರಿಗೆ ಹಂಚುತ್ತೇವೆ” ಎಂದಿದ್ದರು. ಅಂದು ಈ ಹೇಳಿಕೆಗೆ ಸಂಬಂಧಿಸಿದಂತೆ ಯಾವುದೇ ರಾಜಕೀಯ ಚರ್ಚೆ ನಡೆದಿಲ್ಲ ಯಾಕೆ? ಎಂದು ಹೇಳಿದ್ದು ವಿವಾದ ಎಬ್ಬಿಸಿದೆ.


ಬಾಲಾಕೋಟ್ ಆ?ಯಂಡ್ ಬಿಯಾಂಡ್’ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ:
ಸಂತೋಷ್ ಸಿಂಗ್ ನಿರ್ದೇಶನದಲ್ಲಿ ಬಾಲಾಕೋಟ್ ಏರ್ ಸ್ಟ್ರೈಕ್’ ಆಧಾರಿತ ವೆಬ್ ಸರಣಿಯಲ್ಲಿ ಲಾರಾ ದತ್ತಾ ತುಂಬಾ ವಿಶೇಷವಾದ ಪಾತ್ರ ನಿರ್ವಹಿಸಿದ್ದಾರೆ.
ಈ ಸರಣಿಯು ಏಪ್ರಿಲ್ ೨೫ ರಂದು ಪ್ರದರ್ಶನ ನಡೆಯಲಿದೆ.ಓಟಿಟಿ ಪ್ಲಾಟ್‌ಫಾರ್ಮ್ ಜಿಯೋ ಸಿನಿಮಾದಿಂದ ಇದು ಸ್ಟ್ರೀಮ್ ಆಗಲಿದೆ.