ನಟಿ ರಶ್ಮಿಕಾ ಇಷ್ಟ ಅಂತ ಹೇಳಿಲ್ಲ:ಗಿಲ್

ಮುಂಬೈ, ಮಾ ೮- ನಟಿ ರಶ್ಮಿಕಾ ಮಂದಣ್ಣ ನನಗೆ ಇಷ್ಟ ಅಂತ ನಾನು ಯಾವಾಗ ಹೇಳಿದ್ದೆ ಎಂದು ಯುವ ಕ್ರಿಕೆಟಿಗ ಶುಭ್‌ಮನ್ ಗಿಲ್ ಗರಂ ಆಗಿ ಸ್ಪಷ್ಟನೆ ಕೊಟ್ಟಿದ್ದಾರೆ.
ಶುಭ್ಮನ್ ಗಿಲ್ ಇತ್ತೀಚೆಗೆ ತಮಗೆ ನಟಿ ರಶ್ಮಿಕಾ ಮಂದಣ್ಣ ಎಂದರೆ ಇಷ್ಟ ಎಂದು ಹೇಳಿದ್ದರು ಎಂದು ಭಾರಿ ಸುದ್ದಿ ಹರಿದಾಡಿತ್ತು. ಇದ್ದರಿಂದ ಕೋಪಗೊಂಡ ಶುಭ್ಮನ್ ಗಿಲ್ ತಮಗೆ ನಟಿ ರಶ್ಮಿಕಾ ಮಂದಣ್ಣ ಎಂದರೆ ಇಷ್ಟ ಎಂದು ಯಾವಾಗ ಹೇಳಿದ್ದೆ ಎಂದು ಪ್ರಶ್ನೆ ಮಾಡಿದ್ದಾರೆ.ಅಲ್ಲದೇ ನ್ಯಾಷಿನಲ್ ಕ್ರಶ್ ರಶ್ಮಿಕಾ ಮಂದಣ್ಣ ವಿಚಾರವಾಗಿ ಅವರು ಅಸಮಾಧಾನಗೊಂಡಿದ್ದಾರೆ.
ಆಕೆ ನನ್ನ ಕ್ರಶ್ ಎಂದು ಗಿಲ್ ಹೇಳಿದ್ದಾರೆ ಎನ್ನುವುದು ಭಾರಿ ವೈರಲ್ ಆಗಿತ್ತು. ಅದನ್ನು ಕಂಡ ಗಿಲ್ ಮತ್ತೊಂದು ಅಚ್ಚರಿಯ ಹೇಳಿಕೆಯನ್ನು ನೀಡಿದ್ದಾರೆ. ನಾನು ಯಾವಾಗ ಈ ರೀತಿ ಹೇಳಿದ್ದೇನೆ, ನನಗೆ ಗೊತ್ತಿಲ್ಲ ಎಂದು ಹೇಳಿದ್ದಾರೆ.
ಎಲ್ಲಿಯೂ ನಾನು ಇದರ ಬಗ್ಗೆ ಮಾತಾಡಿಲ್ಲ ಅಂತ ಯೋಚನೆ ಮಾಡ್ತಿರುವ ಎಮೋಜಿ ಹಾಕಿ ಕಾಮೆಂಟ್ ಮಾಡಿದ್ದಾರೆ. ರಶ್ಮಿಕಾ ನನ್ನ ಕ್ರಶ್ ಎಂದು ಎಲ್ಲಿಯೂ ಹೇಳಿಲ್ಲ. ನನ್ನ ಕ್ರಶ್ ಅವಳಲ್ಲ. ಯಾವತ್ತೂ ನಾನು ಹೇಳಿಲ್ಲ, ಹೇಳುವುದೂ ಇಲ್ಲ ಎಂದು ಗರಂ ಆಗಿಯೇ ಸ್ಪಷ್ಟನೆ ನೀಡಿದ್ದಾರೆ
ಗಿಲ್ ಜೊತೆ ಈ ಹಿಂದೆ ಸಚಿನ್ ತೆಂಡೂಲ್ಕರ್ ಪುತ್ರಿ ಸಾರಾ ಹೆಸರು ತಳುಕು ಹಾಕಿಕೊಂಡಿತ್ತು.