ನಟಿ ರಮ್ಯಾ ಲುಕ್‌ಗೆ ಅಭಿಮಾನಿಗಳ ಫಿದಾ

ಬೆಂಗಳೂರು, ಸೆ. ೬- ಇತ್ತೀಚೆಗೆ ಸ್ಯಾಂಡಲ್‌ವುಡ್‌ನಟಿ ರಮ್ಯಾ ಅವರು ಭಾರಿ ಸುದ್ದಿಯಲ್ಲಿದ್ದಾರೆ. ರಮ್ಯಾ ಅವರು ಮತ್ತೆ ನಿರ್ಮಾಣ ಸಂಸ್ಥೆ ಮೂಲಕ ಚಂದನವನಕ್ಕೆ ಕಮ್ ಬ್ಯಾಕ್‌ಮಾಡುತ್ತಿದ್ದು, ಅಭಿಮಾನಿಗಳು ಅವರ ನಟನೆ ನೋಡಲು ಕೌತುಕದಿಂದ ಕಾಯುತ್ತಿದ್ದಾರೆ ಎಂದರೆ ತಪ್ಪಾಗಲಾರದು.
ಈ ಮಧ್ಯೆ ನಟಿ ರಮ್ಯಾ ಇತ್ತೀಚೆಗೆ ಅತ್ಮೀಯರ ವಿವಾಹ ಕಾರ್ಯಕ್ರಮದಲ್ಲಿ ಭಾಗಿಯಾಗಿ ಗಮನ ಸೆಳೆದಿದ್ದಾರೆ. ನಟಿ ಮದುವೆಯ ಫೋಟೋಸ್ ಶೇರ್ ಮಾಡಿದ್ದಾರೆ.
ಬಹುಭಾಷಾ ನಟಿ ಪ್ರಣೀತಾ ಸುಭಾಷ್ ಅವರು ಇತ್ತೀಚೆಗೆ ಫೇಸ್‌ಬುಕ್ ಹಾಗೂ ಇನ್ಸ್ಟಾಗ್ರಾಮ್‌ನಲ್ಲಿ ವಿವಾಹದ ಕೆಲವು ಫೋಟೋಸ್ ಹಂಚಿಕೊಂಡಿದ್ದಾರೆ. ಇದರಲ್ಲಿ ನಟಿ ಮದುವೆ ಮನೆಯಲ್ಲಿ ಸಂಭ್ರಮಿಸುವ ಕೆಲವು ಕ್ಷಣಗಳನ್ನು ನಾವು ಕಾಣಬಹುದು. ವಿಶೇಷ ಎಂದರೆ ನಟಿ ರಮ್ಯಾ ಅವರೂ ಈ ಮದುವೆಯಲ್ಲಿ ಭಾಗವಹಿಸಿದ್ದಾರೆ.
ನಟಿ ಶರ್ಮಿಳಾ ಮಾಂಡ್ರೆ, ರಮ್ಯಾ ಹಾಗೂ ಪ್ರಣೀತಾ ಸುಭಾಶ್ ಜೊತೆಯಾಗಿ ಫೋಟೋಗೆ ಪೋಸ್ ಕೊಟ್ಟಿದ್ದಾರೆ. ನಟಿ ಬ್ಲ್ಯಾಕ್ ಕಲರ್ ಸೀರೆ ಉಟ್ಟಿದ್ದು ಸಿಂಪಲ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಫೋಟೋ ಕಂಡ ನೆಟ್ಟಿಗರು ಮತ್ತೆ ರಮ್ಯಾ ಅವರ ಅಂದಕ್ಕೆ ಮನಸೋತಿದ್ದು ಮತ್ತೆ ಚಲನಚಿತ್ರಗಳಲ್ಲಿ ನಟಿಸಿ ಎಂದು ಮನವಿ ಮಾಡುತ್ತಿದ್ದಾರೆ.
ನಟಿ ರಮ್ಯಾ ಸದ್ಯ ನಿರ್ಮಾಣ ಸಂಸ್ಥೆ ಆಪಲ್ ಬಾಕ್ಸ್ ಶುರು ಮಾಡಿದ್ದು ಈ ಮೂಲಕ ನಿರ್ಮಾಪಕಿಯಾಗಿ ಸ್ಯಾಂಡಲ್‌ವುಡ್‌ಗೆ ಕಂ ಬ್ಯಾಕ್ ಮಾಡುತ್ತಿದ್ದಾರೆ. ಇವರ ಬ್ಯಾನರ್‌ಅಡಿ ರಾಜೇಶ್‌ಬಿ ಶೆಟ್ಟಿ ನಿರ್ದೇಶನ ಮಾಡಲಿದ್ದಾರೆ ಎನ್ನಲಾಗಿದ್ದು, ರಮ್ಯಾ ನಟಿಸುವ ಬಗ್ಗೆ ಅಧಿಕೃತವಾಗಿಲ್ಲ. ಇದಕ್ಕೆಲ್ಲಾ ರಮ್ಯಾ ಅವರೇ ಉತ್ತರ ಕೊಡಬೇಕು.