ನಟಿ ರಚಿತಾ ರಾಮ್ ಅವರು ಬಹಿರಂಗ ಕ್ಷಮೆಗೆ ಆಗ್ರಹ

ಚಾಮರಾಜನಗರ, ನ.13:- ನಟಿ ರಚಿತಾ ರಾಮ್ ಅವರು ಫಸ್ಟ್‍ನೈಟ್ ಹೇಳಿಕೆಗೆ ಬಹಿರಂಗ ಕ್ಷಮೆ ಕೇಳಬೇಕು. ಅμÉ್ಟೀ ಅಲ್ಲದೇ ಅವರನ್ನು ಚಿತ್ರರಂಗದಿಂದ ಬ್ಯಾನ್ ಮಾಡಬೇಕೆಂದು ಕನ್ನಡ ಕ್ರಾಂತಿದಳ ರಾಜ್ಯಾಧ್ಯಕ್ಷ, ಚಿತ್ರ ನಟ ತೇಜಸ್ವಿ ನಾಗಲಿಂಗಸ್ವಾಮಿ ಆಗ್ರಹಿಸಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ನಟಿ ರಚಿತಾರಾಮ್ ಅವರು ಇತ್ತೀಚಿಗೆ ನಡೆದ ಲವ್ ಯೂ ರಚ್ಚು ಚಿತ್ರದ ಸುದ್ದಿಗೋಷ್ಠಿಯಲ್ಲಿ ಕನ್ನಡ ನಾಡಿನ ಸಂಸ್ಕøತಿಗೆ ಧಕ್ಕೆಯಾಗುವ ರೀತಿ ನೀಡಿರುವ ಹೇಳಿಕೆಗೆ ಕನ್ನಡ ಕ್ರಾಂತಿದಳ ಮತ್ತು ರಾಜ್ಯಾದ್ಯಂತ ಇರುವ ಸಂಘಟನೆಗಳು ತೀವ್ರವಾಗಿ ಖಂಡಿಸುತ್ತವೆ ಎಂದರು.
ಕನ್ನಡ ಚಿತ್ರರಂಗಕ್ಕೆ ತನ್ನದೇ ಆದ ಪರಂಪರೆಯಿದೆ. ಡಾ.ರಾಜ್‍ಕುಮಾರ್ ಹಾಕಿಕೊಟ್ಟಿರುವ ಭವ್ಯ ಬುನಾದಿಯನ್ನು ಈವರೆಗೂ ಮುಂದುವರೆಸಿಕೊಂಡು ಬರಲಾಗಿದೆ. ಕನ್ನಡ ಚಿತ್ರರಂಗದಲ್ಲಿ ಹಿರಿಯರಾದ ಕಲ್ಪನಾ, ಜಯಂತಿ, ಭಾರತಿ, ಆರತಿ, ಲೀಲಾವತಿ, ಮಾಲಾಶ್ರೀ, ಶೃತಿ, ತಾರಾ ಸೇರಿದಂತೆ ಇನ್ನು ಅನೇಕ ನಟಿಯರು ಗೌರಯುತವಾಗಿ ಸಮಾಜಕ್ಕೆ ಉತ್ತಮ ಸಂದೇಶ ನೀಡಿದ್ದಾರೆ.ಐತಿಹಾಸಿಕ, ಪೌರಾಣಿಕ, ಸಾಮಾಜಿಕ ಚಿತ್ರಗಳಲ್ಲಿ ನಟಿಸಿ ಕನ್ನಡ ನಾಡು, ನುಡಿ, ಭಾμÉ, ಸಂಸ್ಕೃತಿಯ ಪ್ರತೀಕವಾಗಿ ಅಭಿನಯಿಸಿದ್ದಾರೆ. ಆದರೆ, ಕನ್ನಡ ಚಿತ್ರರಂಗದ ಇತಿಹಾಸವನ್ನೇ ಅರಿಯದೆ ನಿನ್ನೆ, ಮೊನ್ನೆ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ರಚಿತಾರಾಮ್ ಅಸಭ್ಯವಾಗಿ ಮಾಡಿನಾಡಿ ಚಿತ್ರರಂಗದ ಇತಿಹಾಸಕ್ಕೆ ಧಕ್ಕೆ ಉಂಟು ಮಾಡಿದ್ದಾರೆ ಎಂದು ಕಿಡಿಕಾರಿದರು.
ಈ ಹಿಂದೆ ಐ ಲವ್ ಯೂ ಚಿತ್ರದಲ್ಲಿ ಅಶ್ಲೀಲವಾಗಿ ನಟಿಸಿ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದರು. ಈ ಚಿತ್ರದಲ್ಲಿಯೂ ಸಹ ಅಶ್ಲೀಲ ದೃಶ್ಯ ಕಂಡು ಬಂದಿದ್ದು, ಇವರ ಅವಿವೇಕಿತನಕ್ಕೆ ಸಾಕ್ಷಿಯಾಗಿದೆ. ಕನ್ನಡ ನಾಡಿನಲ್ಲಿ ಜನಿಸಿರುವ ವೀರ ವನಿತೆಯರಾದ ಕಿತ್ತೂರು ರಾಣಿ ಚೆನ್ನಮ್ಮ, ಉಳ್ಳಾಲದೇವಿ, ಅಕ್ಕಮಹಾದೇವಿ, ಒನಕೆ ಓಬವ್ವ, ರಾಣಿ ಅಬ್ಬಕ್ಕ ದೇವಿ, ಸಾಲುಮರದ ತಿಮ್ಮಕ್ಕ, ಪಾರ್ವತಮ್ಮ ರಾಜುಕುಮಾರ್ ಇನ್ನೂ ಅನೇಕ ಮಹಿಳೆಯರು ತಮ್ಮ ಕ್ಷೇತ್ರದಲ್ಲಿ ಸಾಧನೆ ಮಾಡಿ ಕರ್ನಾಟಕದ ಕೀರ್ತಿ ಪತಾಕೆ ಎತ್ತಿ ಹಿಡಿದಿದ್ದಾರೆ. ಇಂತಹ ಭೂಮಿಯಲ್ಲಿ ಈ ನಟಿ ಜನಿಸಿರುವುದೇ ದುರ್ದೈವವಾಗಿದೆ ಎಂದು ವಾಗ್ದಾಳಿ ನಡೆಸಿದರು.
ಚಲನಚಿತ್ರ ವಾಣಿಜ್ಯ ಮಂಡಳಿಯು ರಚಿತಾರಾಮ್ ಅಸಭ್ಯ ಹೇಳಿಕೆಯನ್ನು ಸೂಕ್ಷ್ಮವಾಗಿ ಪರಿಗಣಿಸಿ ಅವರಿಗೆ ನಿμÉೀಧ ಹೇರಬೇಕು. ಇದರೊಟ್ಟಿಗೆ ನಟಿ ಬಹಿರಂಗವಾಗಿ ಕ್ಷಮೆಯಾಚಿಸದಿದ್ದರೆ ಲವ್ ಯೂ ರಚ್ಚು ಚಿತ್ರವನ್ನು ಕರ್ನಾಟಕದ ಯಾವುದೇ ಚಿತ್ರಮಂದಿರದಲ್ಲಿ ಬಿಡುಗಡೆ ಮಾಡಲು ಅವಕಾಶ ಕೊಡದೇ ಕಾನೂನು ಹೋರಾಟ ಮಾಡುತ್ತೇವೆ ಎಂದು ಎಚ್ಚರಿಸಿದ್ದಾರೆ.